ಮೂರೇ ದಿನಕ್ಕೆ 300 ಕೋಟಿ ರೂಪಾಯಿ ಬಾಚಿದ ‘ಆದಿಪುರುಷ್’; ಇನ್ನಿದೆ ಚಾಲೆಂಜ್
Adipurush Movie Collection: ‘ಆದಿಪುರುಷ್’ ಚಿತ್ರದಲ್ಲಿ ಬಳಕೆ ಆದ ಭಾಷೆಗಳು ಟೀಕೆಗೆ ಗುರಿಯಾಗಿವೆ. ಪಾತ್ರಗಳ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ. ಈ ಮಧ್ಯೆಯೂ ‘ಆದಿಪುರುಷ್’ ಒಳ್ಳೆಯ ಕಮಾಯಿ ಮಾಡಿದೆ.
‘ಆದಿಪುರುಷ್’ ಸಿನಿಮಾಗೆ (Adipurush Cinema) ಎಲ್ಲ ಕಡೆಗಳಿಂದಲೂ ಟೀಕೆ ವ್ಯಕ್ತವಾಗುತ್ತಿದೆ. ಆದಾಗ್ಯೂ ಚಿತ್ರಕ್ಕೆ ಈ ಮೊದಲು ಸೃಷ್ಟಿ ಆಗಿದ್ದ ಹೈಪ್ನಿಂದ ಅನೇಕರು ಸಿನಿಮಾ ವೀಕ್ಷಿಸುತ್ತಿದ್ದಾರೆ. ಈ ಚಿತ್ರ ಮೊದಲ ವೀಕೆಂಡ್ಗೆ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಾರದ ದಿನಗಳಲ್ಲಿ ಸಿನಿಮಾ ಯಾವ ರೀತಿಯಲ್ಲಿ ಕಮಾಯಿ ಮಾಡಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಒಂದೊಮ್ಮೆ ಇಲ್ಲಿ ಗಳಿಕೆ ಕಡಿಮೆ ಆದರೆ, ಚಿತ್ರಕ್ಕೆ ಸಂಕಷ್ಟ ಎದುರಾಗಬಹುದು.
ಓಂ ರಾವತ್ ನಿರ್ದೇಶನದ ‘ಆದಿಪುರುಷ್’ ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ ಮಾಡಿದರೆ, ಕೃತಿ ಸನೋನ್ ಸೀತೆಯ ಪಾತ್ರ ಮಾಡಿದ್ದಾರೆ. ಈ ಚಿತ್ರ ರಾಮಾಯಣ ಆಧರಿಸಿ ಇರುವುದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಿತ್ತು. ಆದರೆ ಮನಬಂದಂತೆ ಸಿನಿಮಾ ಮಾಡಿರುವುದರಿಂದ ಟೀಕೆ ಜೋರಾಗಿದೆ. ಈ ಚಿತ್ರದಲ್ಲಿ ಬಳಕೆ ಆದ ಭಾಷೆಗಳು ಟೀಕೆಗೆ ಗುರಿಯಾಗಿವೆ. ಪಾತ್ರಗಳ ಬಗ್ಗೆಯೂ ಅಪಸ್ವರ ಕೇಳಿ ಬಂದಿದೆ. ಈ ಮಧ್ಯೆಯೂ ‘ಆದಿಪುರುಷ್’ ಒಳ್ಳೆಯ ಕಮಾಯಿ ಮಾಡಿದೆ.
ಮೊದಲ ದಿನ ‘ಆದಿಪುರುಷ್’ ಸಿನಿಮಾಗೆ ಮುಂಜಾನೆ 5 ಗಂಟೆಯಿಂದಲೇ ಶೋಗಳು ಆರಂಭ ಆದವು. ಈ ಕಾರಣಕ್ಕೆ ದೊಡ್ಡ ಮಟ್ಟದ ಹಣ ಹರಿದು ಬಂತು. ವಿಶ್ವಾದ್ಯಂತ ಈ ಚಿತ್ರ ಮೊದಲ ದಿನ 140 ಕೋಟಿ ರೂಪಾಯಿ ಗಳಿಸಿತು. ಎರಡನೇ ದಿನ ಈ ಚಿತ್ರ 100 ಕೋಟಿ ರೂಪಾಯಿ ಬಾಚಿದೆ. ಮೂರನೇ ದಿನ ಈ ಚಿತ್ರದ ಗಳಿಕೆ 65 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಸಿನಿಮಾದ ಗಳಿಕೆ 300 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: Adipurush: ‘ಆದಿಪುರುಷ್’ ಪ್ರದರ್ಶನಕ್ಕೂ ಮುನ್ನ ಬರುವ ಸ್ಪಷ್ಟೀಕರಣದಲ್ಲಿ ಏನಿದೆ? ಚಿತ್ರತಂಡದ ಅಸಲಿ ವಾದ ಇಲ್ಲಿದೆ ನೋಡಿ..
ವಾರಂತ್ಯಕ್ಕೆ ಎಲ್ಲರೂ ಸಿನಿಮಾ ವೀಕ್ಷಿಸುತ್ತಾರೆ. ಆದರೆ, ವಾರದ ದಿನಗಳಲ್ಲಿ ಸಿನಿಮಾ ಎಷ್ಟು ಗಳಿಕೆ ಮಾಡಲಿದೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ, ‘ಆದಿಪುರುಷ್’ ಚಿತ್ರ ಇಂದು (ಜೂನ್ 19) ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಬೆಂಗಳೂರು ಸೇರಿ ಬಹುತೇಕ ಕಡೆಗಳಲ್ಲಿ ಈ ಚಿತ್ರಕ್ಕೆ ಫಾಸ್ಟ್ ಫಿಲ್ಲಿಂಗ್ ತೋರಿಸುತ್ತಿಲ್ಲ. ಬಿಗ್ ಬಜೆಟ್ ಸಿನಿಮಾ ಆಗಿರುವುದರಿಂದ ದೊಡ್ಡ ಗಳಿಕೆ ಮಾಡುವುದು ಅನಿವಾರ್ಯ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ