AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆದಿಪುರುಷ್ ವೇದಿಕೆ ಮೇಲೆ ಮದುವೆ ಬಗ್ಗೆ ಮಾತನಾಡಿದ ಪ್ರಭಾಸ್: ಎಲ್ಲಿ? ಯಾವಾಗ ಮದುವೆ?

Prabhas Marriage: ತಿರುಪತಿಯಲ್ಲಿ ನಡೆದ ಆದಿಪುರುಷ್ ಸಿನಿಮಾ ಪ್ರೀ ರಿಲೀಸ್ ಇವೆಂಟ್​ನಲ್ಲಿ ಮಾತನಾಡಿದ ಪ್ರಭಾಸ್ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದಾರೆ.

ಆದಿಪುರುಷ್ ವೇದಿಕೆ ಮೇಲೆ ಮದುವೆ ಬಗ್ಗೆ ಮಾತನಾಡಿದ ಪ್ರಭಾಸ್: ಎಲ್ಲಿ? ಯಾವಾಗ ಮದುವೆ?
ಪ್ರಭಾಸ್
ಮಂಜುನಾಥ ಸಿ.
|

Updated on: Jun 07, 2023 | 8:59 AM

Share

ಪ್ರಭು ಶ್ರೀರಾಮನ (Sriram) ಪಾತ್ರದಲ್ಲಿ ಪ್ರಭಾಸ್ (Prabhas) ನಟಿಸಿರುವ ಆದಿಪುರುಷ್ (Adipurush) ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಇಂದು (ಜೂನ್ 06) ತಿರುಪತಿಯಲ್ಲಿ ಬಹು ಅದ್ಧೂರಿಯಾಗಿ ನೆರವೇರಿದೆ. ಸಂದರ್ಶನಗಳಲ್ಲಿ, ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡದ ನಟ ಪ್ರಭಾಸ್ ಪ್ರೀ ರಿಲೀಸ್ ಇವೆಂಟ್​ಗಳ ಹೊರತಾಗಿ ಬೇರೆಡೆ ಮಾತನಾಡುವುದು ಬಲು ಅಪರೂಪ. ಅವರು ಮಾತನಾಡಲು ಮೈಕ್ ಹಿಡಿದರೆ ಅವರಿಗೆ ಮೊದಲು ಎದುರಾಗುವ ಪ್ರಶ್ನೆಯೇ ಮದುವೆ (Marriage) ಕುರಿತಾದದ್ದು. ಆದಿಪುರುಷ್ ಪ್ರೀ ರಿಲೀಸ್ ಇವೆಂಟ್ ವೇದಿಕೆ ಮೇಲೆ ನಿಂತಾಗಲೂ ಅವರಿಗೆ ಇದೇ ಪ್ರಶ್ನೆ ಎದುರಾಯಿತು.

ಆದಿಪುರುಷ್ ಪ್ರೀ ರಿಲೀಸ್ ಇವೆಂಟ್​ನಲ್ಲಿ ಕಡೆಯದಾಗಿ ಮಾತನಾಡಲು ಆರಂಭಿಸಿದ ನಟ ಪ್ರಭಾಸ್, ಆರಂಭದಲ್ಲಿ ಸಿನಿಮಾದ ಟ್ರೈಲರ್-ಟೀಸರ್ ಇಷ್ಟವಾಯಿತಾ? ಬಹಳ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ಇತ್ಯಾದಿ ಇತ್ಯಾದಿ ಮಾತನಾಡುತ್ತಿದ್ದಾರೆ. ಪ್ರಭಾಸ್ ಮಾತು ಆರಂಭಿಸಿದಾಗ ಶುರುವಾದ ಅಭಿಮಾನಿಗಳ ಹರ್ಷೋಧ್ಘಾರಗಳು ಹಾಗೆಯೇ ಸಾಗಿದ್ದವು. ಈ ನಡುವೆ ವೇದಿಕೆ ಮುಂದೆ ನಿಂತಿದ್ದ ಕೆಲವು ಅಭಿಮಾನಿಗಳು ಮದುವೆ ಯಾವಾಗ ಆಗುತ್ತೀರ ಎಂದು ಪ್ರಭಾಸ್ ಅವರನ್ನು ಪ್ರಶ್ನೆ ಮಾಡಿದರು.

ಅಭಿಮಾನಿಗಳ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ನಟ ಪ್ರಭಾಸ್, ಮದುವೆಯಾ? ಆಗುತ್ತೇನೆ, ಅರ್ಜೆಂಟ್ ಏನಿದೆ? ಎಲ್ಲ ಕೂಡಿ ಬಂದರೆ ಇದೋ ತಿರುಪತಿಯಲ್ಲಿಯೇ ಮದುವೆ ಆಗುತ್ತೇನೆ” ಎಂದರು. ಪ್ರಭಾಸ್ ಮಾತಿಗೆ ಅಭಿಮಾನಿಗಳು ಮತ್ತೊಮ್ಮೆ ಜೋರಾಗಿ ಘೋಷಣೆಗಳನ್ನು ಹಾಕಿದರು. ಕೂಡಲೇ ಪ್ರಭಾಸ್ ತಮ್ಮ ಮಾತನ್ನು ಮತ್ತೆ ಸಿನಿಮಾದ ಕಡೆಗೆ ಎಳೆದು ತಂದು, ಸಿನಿಮಾದ ಬಗ್ಗೆ ಮಾತನಾಡಿದರು.

ಪ್ರಭಾಸ್​ಗೆ ಈಗ 43 ವರ್ಷ ವಯಸ್ಸು. ಈಗಲೂ ಮದುವೆಯಾಗದೆ ಸಿಂಗಲ್ ಆಗಿದ್ದಾರೆ. ಅನುಷ್ಕಾ ಶೆಟ್ಟಿ ಸೇರಿದಂತೆ ಹಲವು ನಟಿಯರೊಡನೆ ಪ್ರಭಾಸ್ ಹೆಸರು ಕೇಳಿ ಬಂದಿದೆ ಆದರೆ ಯಾವುದೂ ಸಹ ಖಾತ್ರಿಯಾಗಿಲ್ಲ. ಇದೀಗ ಪ್ರಭಾಸ್ ಜೊತೆಗೆ ಆದಿಪುರುಷ್ ಸಿನಿಮಾದಲ್ಲಿ ನಟಿಸಿರುವ ಕೃತಿ ಸೆನನ್ ಜೊತೆಗೂ ಪ್ರಭಾಸ್ ಹೆಸರು ಕೇಳಿ ಬಂದಿದೆ ಆದರೆ ಅದೂ ಸಹ ಖಾತ್ರಿಯಾಗಿಲ್ಲ. ಬಾಲಿವುಡ್ ನಟ ವರುಣ್ ಧವನ್, ಸ್ವತಃ ಕೃತಿ ಸೆನನ್ ಹಾಗೂ ಪ್ರಭಾಸ್ ಪ್ರೀತಿಯಲ್ಲಿದ್ದಾರೆ ಎಂದಿದ್ದರು. ಆದರೆ ಆ ಮಾತನ್ನು ಕೃತಿ ಸೆನನ್ ತಳ್ಳಿ ಹಾಕಿದ್ದು, ವರುಣ್ ತಮಾಷೆಗೆ ಹೇಳಿದ್ದಾಗಿ ಅಧಿಕೃತ ಹೇಳಿಕೆ ಹೊರಡಿಸಿದರು. ಏನೇ ಆಗಲಿ, ಪ್ರಭಾಸ್​ಗೆ ಮದುವೆ ಆಗುವ ಇಚ್ಛೆಯಂತೂ ಇದ್ದು ಅದೂ ತಿರುಪತಿಯಲ್ಲಿಯೇ ಮದುವೆ ಆಗುವುದಾಗಿ ಹೇಳಿರುವುದು ವಿಶೇಷ.

ಇನ್ನು ಆದಿಪುರುಷ್ ಪ್ರೀ ರಿಲೀಸ್ ಇವೆಂಟ್​ನಲ್ಲಿ ಮಾತನಾಡುತ್ತಾ, ಇನ್ನು ಮುಂದೆ ಪ್ರೀ ರಿಲೀಸ್ ಇವೆಂಟ್​ನಲ್ಲಿ ಕಡಿಮೆ ಮಾತನಾಡುತ್ತೇನೆ. ಸಿನಿಮಾ ಹೆಚ್ಚು ಮಾಡುತ್ತೇನೆ. ಇನ್ನು ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡುತ್ತೇನೆ. ಮೂರು ಸಿನಿಮಾ ಮಾಡಿದರೂ ಆಶ್ಚರ್ಯವಿಲ್ಲ. ವೇದಿಕೆ ಮೇಲೆ ಕಡಿಮೆ ಮಾತನಾಡಿ ಕೆಲಸ ಜಾಸ್ತಿ ಮಾಡುತ್ತೇನೆ. ನಿಮಗೆಲ್ಲ ಒಪ್ಪಿಗೆ ತಾನೆ ಎಂದು ಅಭಿಮಾನಿಗಳನ್ನು ಕೇಳಿದರು. ಅಭಿಮಾನಿಗಳು ಓಕೆ ಎಂದೂ ಒಕ್ಕೂರಲಿನಿಂದ ಹೇಳಿದರು. ಪ್ರಭಾಸ್ ಪ್ರಸ್ತುತ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಆದಿಪುರುಷ್ ಇನ್ನೇನು ಬಿಡುಗಡೆ ಆಗಲಿದೆ. ಅದರ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಅದಾದ ಬಳಿಕ ದೀಪಿಕಾ ಪಡುಕೋಣೆ ಜೊತೆಗೆ ಪ್ರಾಜೆಕ್ಟ್ ಕೆ ಸಿನಿಮಾ ತೆರೆಗೆ ಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ