Adipurush: ಹನುಮ ಜಯಂತಿ ಪ್ರಯುಕ್ತ ಹೊಸ ಪೋಸ್ಟರ್ ಹಂಚಿಕೊಂಡ ‘ಆದಿಪುರುಷ್’ ಚಿತ್ರತಂಡ
Hanuma Jayanti 2023: ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್’ ಸಿನಿಮಾ ಮೂಡಿಬರುತ್ತಿದೆ. ಜೂನ್ 16ರಂದು ಈ ಚಿತ್ರ ಬಿಡುಗಡೆ ಆಗಲಿದೆ.
ಎಲ್ಲೆಡೆ ಇಂದು (ಏಪ್ರಿಲ್ 6) ಹನುಮ ಜಯಂತಿ (Hanuma Jayanti 2023) ಆಚರಿಸಲಾಗುತ್ತಿದೆ. ಆ ಸಂಭ್ರಮವನ್ನು ಹೆಚ್ಚಿಸುವ ರೀತಿಯಲ್ಲಿ ‘ಆದಿಪುರುಷ್’ (Adipurush Movie) ತಂಡದಿಂದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬಂಡೆಯ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ಆಂಜನೇಯನ ಪೋಸ್ಟರ್ ಇದಾಗಿದ್ದು, ಹಿನ್ನೆಲೆಯಲ್ಲಿ ರಾಮನ ಪಾತ್ರ ಮಾಡಿರುವ ಪ್ರಭಾಸ್ ಫೋಟೋ ಕಾಣಿಸಿದೆ. ಇದನ್ನು ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಮೊದಲು ರಿಲೀಸ್ ಆದ ಪೋಸ್ಟರ್ಗಳನ್ನು ಟ್ರೋಲ್ ಮಾಡಲಾಗಿತ್ತು. ಆದರೆ ಹನುಮಂತದ ಪೋಸ್ಟರ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಓಂ ರಾವತ್ (Om Raut) ಅವರು ‘ಆದಿಪುರುಷ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.
ರಾಮಾಯಣದ ಕಥೆಯನ್ನು ಆಧರಿಸಿ ‘ಆದಿಪುರುಷ್’ ಸಿನಿಮಾ ಮೂಡಿಬರುತ್ತಿದೆ. ಜೂನ್ 16ರಂದು ಈ ಚಿತ್ರ ಬಿಡುಗಡೆ ಆಗಲಿದೆ. ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ರಾವಣನಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣದಲ್ಲಿ ಆಂಜನೇಯನ ಪಾತ್ರಕ್ಕೆ ಹೆಚ್ಚು ಮಹತ್ವ ಇದೆ. ಈ ಪಾತ್ರದಲ್ಲಿ ದೇವದತ್ತ ನಾಗೆ ಅವರು ನಟಿಸುತ್ತಿದ್ದಾರೆ. ಹೊಸ ಪೋಸ್ಟರ್ನಲ್ಲಿ ಅವರನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
Ram ke Bhakt aur Ramkatha ke praan… Jai Pavanputra Hanuman!
राम के भक्त और रामकथा के प्राण… जय पवनपुत्र हनुमान!#Adipurush #JaiShriRam #JaiBajrangBali #HanumanJanmotsav#Adipurush releases globally IN THEATRES on June 16, 2023.#Adipurush #Prabhas #SaifAliKhan @kritisanon pic.twitter.com/jdBCBfn2Fr
— Om Raut (@omraut) April 6, 2023
ದೇವದತ್ತ ನಾಗೆ ಅವರು ಮಾರಾಠಿ ಧಾರಾವಾಹಿಯಲ್ಲಿ ಪೌರಾಣಿಕ ಪಾತ್ರ ಮಾಡಿ ಫೇಮಸ್ ಆಗಿದ್ದಾರೆ. ‘ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ದೊಬಾರಾ’, ‘ತಾನಾಜಿ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಈಗ ಅವರನ್ನು ‘ಆದಿಪುರುಷ್’ ಸಿನಿಮಾದಲ್ಲಿ ಹನುಮಂತನ ವೇಷದಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಪೋಸ್ಟರ್ ವೈರಲ್ ಆಗಿದೆ.
‘ಆದಿಪುರುಷ್’ ಪೋಸ್ಟರ್ ಮೇಲೆ ಕೇಸ್:
ರಾಮನವಮಿ ಪ್ರಯುಕ್ತ ‘ಆದಿಪುರುಷ್’ ಸಿನಿಮಾ ತಂಡದಿಂದ ಹೊಸ ಪೋಸ್ಟರ್ ರಿಲೀಸ್ ಮಾಡಲಾಯಿತು. ಆದರೆ ಅದನ್ನು ಕಂಡು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಈ ವಿಷಯ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನಿರ್ದೇಶಕ ಓಂ ರಾವತ್ ನಟ ಪ್ರಭಾಸ್ ಸೇರಿದಂತೆ ಇಡೀ ಚಿತ್ರತಂಡದ ಮೇಲೆ ದೂರು ನೀಡಲಾಗಿದೆ. ಈ ಪೋಸ್ಟರ್ನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: Prabhas: 1 ರೂಪಾಯಿ ಸಂಭಾವನೆ ಕೂಡ ಬೇಡ ಎಂಬ ನಿರ್ಧಾರಕ್ಕೆ ಬಂದ ಪ್ರಭಾಸ್; ಏನಿದು ಹೊಸ ತಂತ್ರ?
ಸಂಜಯ್ ದೀನನಾಥ್ ತಿವಾರಿ ಎಂಬುವವರು ‘ಆದಿಪುರುಷ್’ ಸಿನಿಮಾತಂಡದ ವಿರುದ್ಧ ದೂರು ನೀಡಿದ್ದಾರೆ. ಹೊಸ ಪೋಸ್ಟರ್ನಲ್ಲಿ ರಾಮಚರಿತಮಾನಸದ ವಿವರಗಳನ್ನು ಆಕ್ಷೇಪಾರ್ಹವಾಗಿ ಚಿತ್ರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾಮ ಧರಿಸಿದ ವಸ್ತ್ರ ಸರಿಯಾಗಿಲ್ಲ. ಜನಿವಾರವನ್ನು ತೆಗೆಯಲಾಗಿದೆ. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿಂದೆ ಟೀಸರ್ ಬಿಡುಗಡೆ ಆದಾಗಲೂ ಕಿರಿಕ್ ಮಾಡಲಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:26 pm, Thu, 6 April 23