ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ‘ಆಪನ್ಹೈಮರ್’ ಸಿನಿಮಾ ಇಂದು (ಜುಲೈ 21) ರಿಲೀಸ್ ಆಗಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದ ಅಡ್ವಾನ್ಸ್ ಬುಕಿಂಗ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮೊದಲ ದಿನ 3 ಲಕ್ಷಕ್ಕೂ ಅಧಿಕ ಟಿಕೆಟ್ಗಳು ಮಾರಾಟ ಆಗಿವೆ. ಮತ್ತೊಂದು ವಿಶೇಷ ಎಂದರೆ ಕಾಶ್ಮೀರದಲ್ಲಿ ಈ ಚಿತ್ರದ ಟೀಕಟ್ಗಳು ಸೋಲ್ಡ್ಔಟ್ ಆಗಿವೆ. ವೀಕೆಂಡ್ನಲ್ಲಿ ಹುಡುಕಿದರೂ ಒಂದೇ ಒಂದು ಸೀಟ್ ಸಿಗದಂತೆ ಆಗಿದೆ. ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಬಳಿಕ ಕಾಶ್ಮೀರದಲ್ಲಿ ಹೌಸ್ಫುಲ್ ಕಾಣುತ್ತಿರುವ ಏಕೈಕ ಸಿನಿಮಾ ಇದು ಅನ್ನೋದು ವಿಶೇಷ.
ಕಾಶ್ಮೀರದಲ್ಲಿ ಕಳೆದ 33 ವರ್ಷಗಳಿಂದ ಚಿತ್ರಮಂದಿರ ಬಂದ್ ಆಗಿತ್ತು. ಇದನ್ನು ಕಳೆದ ವರ್ಷ ರೀ ಓಪನ್ ಮಾಡಲಾಯಿತು. ಕಾಶ್ಮೀರದಲ್ಲಿ ಇರುವ ಏಕೈಕ ಚಿತ್ರಮಂದಿರ ಇದು. ಹೀಗಿದ್ದರೂ ಯಾವಾಗಲೂ ಚಿತ್ರಮಂದಿರ ಇಲ್ಲಿ ಫುಲ್ ಆಗುವುದಿಲ್ಲ. ಜನವರಿ ತಿಂಗಳಲ್ಲಿ ರಿಲೀಸ್ ಆದ ‘ಪಠಾಣ್’ ಸಿನಿಮಾ ಸೂಪರ್ ಹಿಟ್ ಆಯಿತು. ಹಲವು ದಿನಗಳ ಕಾಲ ಕಾಶ್ಮೀರ ಚಿತ್ರಮಂದಿರ ಹೌಸ್ಫುಲ್ ಪ್ರದರ್ಶನ ಕಂಡಿತ್ತು. ಈಗ ಕಾಶ್ಮೀರದ ಥಿಯೇಟರ್ಗೆ ಮತ್ತೆ ಹೌಸ್ಫುಲ್ ಬೋರ್ಡ್ ಬೀಳುತ್ತಿದೆ.
ಐನಾಕ್ಸ್ ಸಂಸ್ಥೆಯ ಸಹಕಾರದೊಂದಿಗೆ ವಿಜಯ್ ಧಾರ್ ಅವರು ಕಾಶ್ಮೀರದಲ್ಲಿ ಸಿನಿಮಾ ಮಂದಿರವನ್ನು ನಡೆಸುತ್ತಿದ್ದಾರೆ. ಇಲ್ಲಿಯೂ ಕ್ರಿಸ್ಟೋಫರ್ ನೋಲನ್ ಅವರ ಹವಾ ಇದೆ. ವೀಕೆಂಡ್ ಶೋನ ಟಿಕೆಟ್ಗಳು ಮಾರಾಟ ಆಗಿರುವ ಬಗ್ಗೆ ವಿಜಯ್ ಅವರು ಇಂಡಿಯನ್ ಎಕ್ಸ್ಪ್ರೆಸ್ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
‘33 ವರ್ಷದ ನಂತರ ನಾವು ಕಾಶ್ಮೀರದಲ್ಲಿ ಥಿಯೇಟರ್ ಓಪನ್ ಮಾಡಿದಾಗ ಹೆಚ್ಚಿನದ್ದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಪಠಾಣ್ ರಿಲೀಸ್ ಆಗಿ ಇಲ್ಲಿ ಹೌಸ್ಫುಲ್ ಓಡಿತು. ಪಠಾಣ್ ಬಳಿಕ ಯಾವ ಸಿನಿಮಾಗಳೂ ಅಷ್ಟಾಗಿ ಓಡಿಲ್ಲ. ಆದರೆ, ಆಪನ್ಹೈಮರ್ ಚಿತ್ರಕ್ಕೆ ಬರುತ್ತಿರುವ ಪ್ರತಿಕ್ರಿಯೆ ನಮಗೆ ಅಚ್ಚರಿ ಮೂಡಿಸಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಆಪನ್ಹೈಮರ್’ ಪಾತ್ರಕ್ಕಾಗಿ ಅಪಾಯಕಾರಿ ಡಯೆಟ್ ಮಾಡಿದ ನಟ ಕಿಲಿಯನ್ ಮರ್ಫಿ; ದಿನಕ್ಕೆ ಒಂದೇ ಬಾದಾಮಿ?
‘ನಮ್ಮ ಮಲ್ಟಿಪ್ಲೆಕ್ಸ್ನಲ್ಲಿ ಮೂರು ಸ್ಕ್ರೀನ್ ಇದೆ. ಒಟ್ಟೂ 535 ಆಸನ ವ್ಯವಸ್ಥೆ ಇದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರದ ಎಲ್ಲಾ ಟಿಕೆಟ್ಗಳು ಮಾರಾಟ ಆಗಿವೆ. 300-1000 ಟಿಕೆಟ್ ದರ ನಿಗದಿ ಮಾಡಿದ್ದೇವೆ. ಒಂದು ಶೋ ಹಿಂದಿಯಲ್ಲಿದೆ’ ಎಂದು ವಿಜಯ್ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ