ನಟಿ ಸಮಂತಾಗೆ (Samantha) ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳು ಒಂದು ಮಟ್ಟದ ಕಲೆಕ್ಷನ್ ಮಾಡುತ್ತವೆ. ಆದರೆ, ಕೆಲವೊಮ್ಮೆ ಅಂದುಕೊಂಡಂತೆ ನಡೆಯುವುದಿಲ್ಲ. ಸಮಂತಾ ನಟನೆಯ ‘ಶಾಕುಂತಲಂ’ ಚಿತ್ರ ಹೀನಾಯವಾಗಿ ಸೋಲು ಕಂಡಿತು. ಈ ಸಿನಿಮಾ ಮೊದಲ ವಾರ 10 ಕೋಟಿ ರೂಪಾಯಿ ಗಳಿಸಲೂ ವಿಫಲವಾಯಿತು. ಮೊದಲ ವಾರವೇ ಇಷ್ಟು ಹೀನಾಯವಾಗಿದ್ದಾಗ ಮುಂದಿನ ದಿನಗಳ ಗಳಿಕೆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಈಗ ‘ಶಾಕುಂತಲಂ’ ಸಿನಿಮಾ (Shakuntalam) ಸೋಲನ್ನು ನಿರ್ಮಾಪಕ ದಿಲ್ ರಾಜು ಒಪ್ಪಿಕೊಂಡಿದ್ದಾರೆ. ಸಿನಿಮಾ ದೊಡ್ಡ ಹೊಡೆತ ನೀಡಿದೆ ಎಂದು ಒಪ್ಪಿಕೊಂಡಿದ್ದಾರೆ.
ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಸಿನಿಮಾ ತೆಲುಗು ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಯಿತು. ಈ ಸಿನಿಮಾದ ಬಜೆಟ್ 50 ಕೋಟಿ ರೂಪಾಯಿ ಮೀರಿದೆ. ಸಿನಿಮಾ ಇಷ್ಟೊಂದು ಹೀನಾಯವಾಗಿ ಕಲೆಕ್ಷನ್ ಮಾಡುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಈ ಸಿನಿಮಾದಿಂದ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸಿದ್ದಾರೆ. ರಾಜೇಶ್ ಮನ್ನ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ದಿಲ್ ರಾಜು ಈ ವಿಚಾರಮಾತನಾಡಿದ್ದಾರೆ.
‘ನಾನು 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ನಾಲ್ಕರಿಂದ ಐದು ಸಿನಿಮಾಗಳು ಮಾತ್ರ ನನಗೆ ಆರ್ಥಿಕವಾಗಿ ಹೊರೆಯಾಗಿವೆ. ನನ್ನ 25 ವರ್ಷಗಳ ಕರಿಯರ್ನಲ್ಲಿ ಶಾಕುಂತಲಂ ಸಿನಿಮಾ ದೊಡ್ಡ ಹೊಡೆತ ನೀಡಿತು’ ಎಂದಿದ್ದಾರೆ ದಿಲ್ ರಾಜು.
‘ಯಶಸ್ಸು ಸಿಕ್ಕಿಲ್ಲ ಅಂದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಜನರಿಗೆ ಸಿನಿಮಾ ಇಷ್ಟ ಆದರೆ ಅದನ್ನು ಸೆಲೆಬ್ರೇಟ್ ಮಾಡುತ್ತಾರೆ. ಒಂದೊಮ್ಮೆ ಅವರು ಸೆಲಬ್ರೆಟ್ ಮಾಡಿಲ್ಲ ಎಂದರೆ ನನ್ನ ಜಡ್ಜ್ಮೆಂಟ್ ತಪ್ಪಾಗಿದೆ ಎಂದರ್ಥ’ ಎಂದು ದಿಲ್ ರಾಜು ಹೇಳಿದ್ದಾರೆ. ಆದರೆ ಅವರು ಎಲ್ಲಿಯೂ ನಿರ್ದೇಶಕರನ್ನಾಗಲೀ, ಕಲಾವಿದರನ್ನಾಗಲೀ ದೂರಿಲ್ಲ.
ಇದನ್ನೂ ಓದಿ: ‘ಶಾಕುಂತಲಂ’ ಸಿನಿಮಾ ಸೋತ ಬಳಿಕ ಸಮಂತಾಗೆ ನೆನಪಾಯ್ತು ಭಗವದ್ಗೀತೆಯ ಶ್ಲೋಕ
‘ಶಾಕುಂತಲಂ’ ಸೋಲು ಸಮಂತಾಗೆ ಬೇಸರ ತಂದಿದೆ. ಈ ಸಿನಿಮಾ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಮಂತಾ ಸಿನಿಮಾ ಗೆಲ್ಲಲು ವಿಫಲ ಆಯಿತು. ಇದನ್ನು ಮರೆತು ಅವರು ಮುನ್ನಡೆಯುತ್ತಿದ್ದಾರೆ. ‘ಸಿಟಾಡೆಲ್’ ಇಂಡಿಯ್ ವರ್ಷನ್ನಲ್ಲಿ ಅವರು ನಟಿಸುತ್ತಿದ್ದಾರೆ. ಮೂಲ ಸೀರಿಸ್ನಲ್ಲಿ ಪ್ರಿಯಾಂಕಾ ಚೋಪ್ರಾ ಬಣ್ಣ ಹಚ್ಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ