ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದ ಅಜಿತ್ ಕುಮಾರ್ ಫ್ಯಾನ್ಸ್; ಪೊಲೀಸರ ಜೊತೆ ಕಿರಿಕ್

‘ವಿದಾಮುಯರ್ಚಿ’ ಸಿನಿಮಾ ಪ್ರದರ್ಶನದ ವೇಳೆ ಪ್ರೇಕ್ಷಕರು ಮಿತಿಮೀರಿ ನಡೆದುಕೊಂಡಿದ್ದಾರೆ. ಚಿತ್ರಮಂದಿರದ ಒಳಗೆ ಅಭಿಮಾನಿಗಳು ಪಟಾಕಿ ಸಿಡಿಸಿದ್ದಾರೆ. ಜನರನ್ನು ನಿಯಂತ್ರಿಸಲು ಬಂದ ಪೊಲೀಸರ ಜೊತೆಗೂ ಅಜಿತ್ ಫ್ಯಾನ್ಸ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅಪ್ಪಟ ಅಭಿಮಾನಿಗಳ ಸಂಭ್ರಮ ಜೋರಾಗಿದೆ.

ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದ ಅಜಿತ್ ಕುಮಾರ್ ಫ್ಯಾನ್ಸ್; ಪೊಲೀಸರ ಜೊತೆ ಕಿರಿಕ್
Ajith Kumar Fans

Updated on: Feb 06, 2025 | 6:20 PM

ಅಜಿತ್ ಕುಮಾರ್​ ನಟನೆಯ ‘ವಿದಾಮುಯರ್ಚಿ’ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರಕ್ಕಾಗಿ ಅಜಿತ್ ಅಭಿಮಾನಿಗಳು ಹಲವು ದಿನಗಳಿಂದ ಕಾಯುತ್ತಿದ್ದರು. ಇಂದು (ಫೆಬ್ರವರಿ 6) ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಸೆಲೆಬ್ರೇಷನ್ ಮಾಡಲಾಗಿದೆ. ಆದರೆ ಕೆಲವು ಕಡೆಗಳಲ್ಲಿ ಸಂಭ್ರಮದ ಜೊತೆಗೆ ಅಭಿಮಾನಿಗಳು ಮೈ ಮರೆತಿದ್ದಾರೆ. ಸಿನಿಮಾ ಪ್ರದರ್ಶನ ಆಗುವಾಗ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಲಾಗಿದೆ. ಇದನ್ನೆಲ್ಲ ಪ್ರಶ್ನಿಸಿದ ಪೊಲೀಸರ ಜೊತೆಗೆ ವಾಗ್ವಾದ ಮಾಡಲಾಗಿದೆ. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಅಜಿತ್ ಕುಮಾರ್ ಅವರಿಗೆ ಮಾಸ್ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದೆ. ‘ವಿದಾಮುಯರ್ಚಿ’ ಸಿನಿಮಾ ಬಿಡುಗಡೆ ಆಗಿದ್ದಕ್ಕೆ ಎಲ್ಲರೂ ಹುಚ್ಚೆದ್ದು ಕುಣಿದಾಡಿದ್ದಾರೆ. ಥಿಯೇಟರ್​ ಒಳಗಡೆ ಪಟಾಕಿ ಸಿಡಿಸುವುದು ನಿಜಕ್ಕೂ ಅಪಾಯದ ಕೆಲಸ. ಸ್ವಲ್ಪ ಹೆಚ್ಚು-ಕಡಿಮೆ ಆದರೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಂಥ ಅಪಾಯವನ್ನೂ ಲೆಕ್ಕಿಸದೇ ಅಜಿತ್ ಅಭಿಮಾನಿಗಳು ಚಿತ್ರಮಂದಿರದ ಒಳಗೆ ಪಟಾಕಿ ಹಚ್ಚಿದ್ದಾರೆ.

ಚಿತ್ರಮಂದಿರದ ಒಳಗೆ ಪ್ಯಾನ್ಸ್ ಅತಿರೇಕದ ವರ್ತನೆ ತೋರಿಸಿದಾಗ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹುಚ್ಚಾಟ ನಡೆಸಿದ ಅಭಿಮಾನಿಗಳನ್ನು ಹಿಡಿದುಕೊಳ್ಳಲಾಗಿದೆ. ಆದರೆ ಪೊಲೀಸರ ಜೊತೆಗೇ ಅಜಿತ್ ಅಭಿಮಾನಿಗಳು ಜಗಳ ಮಾಡಿದ್ದಾರೆ.

ಥಿಯೇಟರ್​ ಹೊರಗಡೆ ಕೂಗಾಡುತ್ತಿದ್ದ ಅಭಿಮಾನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಮಾತನ್ನು ಕೇಳದೇ ಅಜಿತ್ ಫ್ಯಾನ್ಸ್ ಕೂಗಾಡಿದ್ದಾರೆ.

ಇದನ್ನೂ ಓದಿ: ‘ಹೆಚ್ಚಿನದ್ದನ್ನು ನಿರೀಕ್ಷಿಸಲಾಗಿತ್ತು’; ಅಜಿತ್ ನಟನೆಯ ‘ವಿದಾಮುಯರ್ಚಿ’ ಸಿನಿಮಾ ನೋಡಿ ಫ್ಯಾನ್ಸ್ ಹೇಳಿದ್ದಿಷ್ಟು

‘ವಿದಾಮುಯರ್ಚಿ’ ಸಿನಿಮಾದಲ್ಲಿ ಅಜಿತ್ ಜೊತೆ ತ್ರಿಶಾ ಕೃಷ್ಣನ್ ನಟಿಸಿದ್ದಾರೆ. ಹಾಡುಗಳು ಬಂದಾಗ ಚಿತ್ರಮಂದಿರದ ಒಳಗೆ ಫ್ಯಾನ್ಸ್ ಕುಣಿದಾಡಿದ್ದಾರೆ. ಒಟ್ಟಿನಲ್ಲಿ ಸಂಭ್ರಮ ಜೋರಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ‘ವಿದಾಮುಯರ್ಚಿ’ ಚಿತ್ರ ಬಿಡುಗಡೆ ಆಗಿರಬೇಕಿತ್ತು. ಆದರೆ ಅಜಿತ್ ಅವರು ಕಾರ್ ರೇಸ್ ಬಗ್ಗೆ ಗಮನ ಹರಿಸಿದ್ದರಿಂದ ಸಿನಿಮಾದ ರಿಲೀಸ್ ತಡವಾಯಿತು. ಇಷ್ಟು ದಿನ ಕಾದಿದ್ದ ಅಭಿಮಾನಿಗಳು ಈಗ ಸಿನಿಮಾ ನೋಡಿ ಹಬ್ಬ ಮಾಡುತ್ತಿದ್ದಾರೆ. ತ್ರಿಶಾ ಮತ್ತು ರೆಜಿನಾ ಅವರು ಫ್ಯಾನ್ಸ್ ಜೊತೆ ಕುಳಿತು ಫಸ್ಟ್​ ಡೇ ಫಸ್ಟ್​ ಶೋ ನೋಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.