ಕಾಲಿವುಡ್ ನಟ ಅಜಿತ್ ಕುಮಾರ್ ಅವರು ಹಲವು ಸಾಧನೆಗಳನ್ನು ಮಾಡುತ್ತಾರೆ. ಅವರು ನಟನೆಯ ಜೊತೆಗೆ ವಿವಿಧ ರೇಸ್‌ನಲ್ಲಿ ಕೂಡ ಭಾಗವಹಿಸುತ್ತಾರೆ. ಅವರು ವಿಮಾನ ಕೂಡ ಓಡಿಸಬಲ್ಲರು. ಅವರಿಗೆ ಕಾರ್ ರೇಸ್ ಬಗ್ಗೆ ಸಾಕಷ್ಟು ಆಸಕ್ತಿ ಇದೆ. ಈಗ ಅವರು ‘ದುಬೈ 24 ಅವರ್ಸ್ ರೇಸ್’ (24 ಹೆಚ್ ದುಬೈ 2025) ಸ್ಪರ್ಧೆಯಲ್ಲಿ ಅಜಿತ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ವಿಡಿಯೋ ಹಾಗೂ ಫೋಟೋ ವೈರಲ್ ಆಗಿದೆ.
ಅಜಿತ್ ಕುಮಾರ್ ಅವರಿಗೆ ರೇಸ್ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದೆ. ಅವರು ವಿವಿಧ ರೇಸ್‌ನಲ್ಲಿ ಈ ಮೊದಲು ಭಾಗವಹಿಸಿದ್ದರು. ಈಗ ಅವರು ‘ದುಬೈ 24 ಅವರ್ಸ್ ರೇಸ್’ ಸ್ಪರ್ಧೆ ವಿನ್ ಆಗಿ ಸಾಧನೆ ಮಾಡಿದ್ದಾರೆ. ಅವರು ಈ ರೇಸ್ ಗೆದ್ದು ಸಾಧನೆ ಮಾಡಿದ್ದಾರೆ. ರೇಸ್ ಗೆದ್ದ ಬಳಿಕ ಅವರು ಪತ್ನಿಗೆ ಮುತ್ತಿಟ್ಟಿದ್ದಾರೆ.
ನಟನೆಗೆ ಕಾಲಿಟ್ಟು ಜನಪ್ರಿಯತೆ ಪಡೆದ ಬಳಿಕ ಹಾಯಾಗಿ ಸಮಯ ಕಳೆಯಬಹುದು. ಆದರೆ, ಅಜಿತ್ ಅವರು ಆ ರೀತಿ ಅಲ್ಲ. ಶೂಟಿಂಗ್, ರೇಸಿಂಗ್ ಎಂದು ಹಲವು ರಂಗದಲ್ಲಿ ತೊಡಗಿಕೊಂಡಿದ್ದಾರೆ. ಅವರು ನಿಜವಾದ ಕ್ರೀಡಾಸ್ಫೂರ್ತಿಯನ್ನು ಮರೆಯುತ್ತಿದ್ದಾರೆ.
Proud Moment for Team Ajith Kumar Racing and India 🇮🇳
A Podium Finish in 991 category of #24HSeries#AjithKumarRacing #AjithKumarpic.twitter.com/VjVJXC2Y7k
— Ajith Kumar (@ThalaFansClub) January 12, 2025
“And Shalu.. Thank you for letting me Race”
That’s so cute man 😍 #AjithKumarRacing pic.twitter.com/1FzVQ2b0UA
— Trollywood 𝕏 (@TrollywoodX) January 12, 2025
ಇತ್ತೀಚೆಗೆ ಅಜಿತ್ ಅವರು ‘ದುಬೈ 24 ಅವರ್ಸ್ ರೇಸ್’ (24 ಹೆಚ್ ದುಬೈ 2025) ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. 6 ಗಂಟೆ ದೀರ್ಘ ಅವಧಿಯ ಪರೀಕ್ಷೆಯಲ್ಲಿ ಅಜಿತ್ ಪಾಲ್ಗೊಂಡಿದ್ದರು. ಇದರ ಅವಧಿ ಪೂರ್ಣಗೊಳ್ಳುತ್ತಿದೆ ಎನ್ನುವಾಗ ಅಜಿತ್ ಅವರ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದಿತ್ತು. ಆದರೆ, ಅಜಿತ್ಗೆ ಗಾಯ ಆಗಿಲ್ಲ. ಈ ಬೆನ್ನಲ್ಲೇ ಅಜಿತ್ ಅವರು ಪುಟಿದೆದ್ದಿದ್ದಾರೆ. ರೇಸ್‌ನಲ್ಲಿ ಅವರು ಗೆದ್ದಿರೋದಕ್ಕೆ ಅನೇಕರು ಅಭಿನಂದನೆ ತಿಳಿಸಿದ್ದಾರೆ. ವಿಶೇಷ ಎಂದರೆ ಅಜಿತ್ ಅವರು ದುಬೈನಲ್ಲಿ ತಮ್ಮದೇ ರೇಸಿಂಗ್ ತಂಡವನ್ನು ಹೊಂದಿದ್ದಾರೆ.
ಇದನ್ನೂ ಓದಿ: 180 ಕಿಮೀ ವೇಗದಲ್ಲಿ ಅಜಿತ್ ಕಾರು ಅಪಘಾತ; ವಿಡಿಯೋ ವೈರಲ್: ನಟನ ಪರಿಸ್ಥಿತಿ ಹೇಗಿದೆ?
ಅಜಿತ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಅವರು ನಟನೆಯಲ್ಲಿ ಗಮನ ಸೆಳೆದಿದ್ದಾರೆ. ರೇಸ್ ದೃಶ್ಯಗಳನ್ನು ಮಾಡುವಾಗ ಅವರು ಡ್ಯೂಪ್ ಬಳಸುವುದಿಲ್ಲ. ಈ ಮೊದಲು ‘ತುನಿವು’ ಸಿನಿಮಾ ಶೂಟ್ ಮಾಡುವಾಗ ರಿಯಲ್ ಸ್ಟಂಟ್ಗಳನ್ನು ಮಾಡಿ ಗಮನ ಸೆಳೆದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:15 am, Mon, 13 January 25