ನಟ ಅಜಿತ್ ಅವರ ನಟನೆಯ ‘ವಿದಾಮುಯರ್ಚಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಟ್ರೇಲರ್ ಈಗ ರಿಲೀಸ್ ಆಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ. ಈ ಚಿತ್ರದಲ್ಲಿ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಈ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಸಿನಿಮಾ ಫೆಬ್ರವರಿ 6ರಂದು ರಿಲೀಸ್ ಆಗಲಿದೆ ಎಂದು ಟ್ರೇಲರ್ನಲ್ಲಿ ಮಾಹಿತಿ ನೀಡಲಾಗಿದೆ.
ಅಜಿತ್ ಕುಮಾರ್ ಅವರು ‘ವಿದಾಮುಯರ್ಚಿ’ ಸಿನಿಮಾದಲ್ಲಿ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಯಂಗ್ ಲುಕ್ನಲ್ಲಿ ಕಾಣಿಸುವ ಅವರು ನಂತರ ಗಡ್ಡ ಮೀಸೆ ಬಿಟ್ಟು ಬೇರೆಯದೇ ಲುಕ್ನಲ್ಲಿ ಗಮನ ಸೆಳೆದಿದ್ದಾರೆ. ಅವರ ಮ್ಯಾನರಿಸಂ ಇಷ್ಟ ಆಗಿದೆ. ಕಥಾ ನಾಯಕ ಅಪಘಾತದಲ್ಲಿ ಎಲ್ಲವನ್ನೂ ಮರೆಯುತ್ತಾನೆ. ಆ ಬಳಿಕ ಏನಾಗುತ್ತದೆ ಎಂಬುದು ಚಿತ್ರದ ಕಥೆ ಏಂದು ಟ್ರೇಲರ್ ನೋಡಿದವರು ಅಭಿಪ್ರಾಯಪಟ್ಟಿದ್ದಾರೆ.
5️⃣ Million real-time views and counting! 🚀 The VIDAAMUYARCHI Trailer is taking the Internet by storm. Persistence Triumphs! 💪
🔗 Tamil – https://t.co/zKlPqIavwc
🔗 Telugu – https://t.co/mYt21ihoy0FEB 6th 🗓️ in Cinemas Worldwide 📽️✨#Vidaamuyarchi #Pattudala… pic.twitter.com/6QNXhSLcpQ
— Lyca Productions (@LycaProductions) January 16, 2025
ಅರ್ಜುನ್ ಸರ್ಜಾ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರದ್ದು ವಿಲನ್ ಪಾತ್ರವೋ ಅಥವಾ ಒಳ್ಳೆಯ ವ್ಯಕ್ತಿಯ ಪಾತ್ರವೋ ಎಂದು ಗೊಂದಲ ಮೂಡಿಸುವ ರೀತಿಯಲ್ಲಿ ಟ್ರೇಲರ್ ಮೂಡಿ ಬಂದಿದೆ. ಈ ಚಿತ್ರಕ್ಕೆ ಸಿನಿಮಾದಲ್ಲೇ ಉತ್ತರ ಸಿಗಬೇಕಿದೆ.
‘ವಿದಾಮುಯರ್ಚಿ’ ಚಿತ್ರವನ್ನು ಬೇರೆ ಬೇರೆ ದೇಶಗಳಲ್ಲಿ ಶೂಟ್ ಮಾಡಲಾಗಿದೆ. ಅವರ ಸಿನಿಮಾಗಳಲ್ಲಿ ಆ್ಯಕ್ಷನ್ ದೃಶ್ಯಗಳು ಭರ್ಜರಿ ಇರುತ್ತವೆ. ಅದು ‘ವಿದಾಮುಯರ್ಚಿ’ ಚಿತ್ರದಲ್ಲೂ ಮುಂದುವರಿದಿದೆ. ಈ ಟ್ರೇಲರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಅಜಿತ್ಗೆ ದೊಡ್ಡ ಯಶಸ್ಸು ತಂದುಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ತ್ರಿಷಾ ನಾಯಕಿ.
ಇದನ್ನೂ ಓದಿ: ನಟನಾಗುವುದಕ್ಕೂ ಮೊದಲು ಗ್ಯಾರೆಜ್ನಲ್ಲಿ ಕೆಲಸ ಮಾಡಿದ್ದ ಅಜಿತ್
‘ವಿದಾಮುಯರ್ಚಿ’ ಚಿತ್ರವನ್ನು ಮಕಿಳ್ ತಿರುಮೇನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ತಾಡಮ್’ ರೀತಿಯ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಅವರು ನಟನಾಗಿ, ಚಿತ್ರಕಥೆ ಬರಹಗಾರನಾಗಿಯೂ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:58 am, Fri, 17 January 25