AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ನಟಿ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಅವರು ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಕಾರ್ತಿಕ್ ತೀಡಾ ನಿರ್ದೇಶನದ ಈ ಚಿತ್ರವನ್ನು ಅನ್ನಪೂರ್ಣ ಸ್ಟುಡಿಯೋ ನಿರ್ಮಿಸುತ್ತಿದೆ. ಇತ್ತೀಚಿನ 'ಅಮರನ್' ಚಿತ್ರದ ಯಶಸ್ಸಿನ ನಂತರ, ಸಾಯಿ ಪಲ್ಲವಿ ಅವರ ಬೇಡಿಕೆ ಹೆಚ್ಚಾಗಿದೆ. ಈ ಹೊಸ ಚಿತ್ರದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ.

ತೆಲುಗಿನಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ನಟಿ ಸಾಯಿ ಪಲ್ಲವಿ
ಸಾಯಿ ಪಲ್ಲವಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jan 17, 2025 | 8:01 AM

Share

ನಟಿ ಸಾಯಿ ಪಲ್ಲವಿ ಅವರು ಹಲವು ರೀತಿಯ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದಾರೆ. ಮಲಯಾಳಂನಲ್ಲಿ ಅವರು ಮಹಿಳಾ ಪ್ರಧಾನ ಸಿನಿಮಾಗಳನ್ನು ನೀಡಿದ್ದಾರೆ. ಈಗ ಅವರು ತೆಲುಗು ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಡಲು ರೆಡಿ ಆಗಿದ್ದಾರೆ. ಅವರು ತೆಲುಗಿನಲ್ಲೂ ವುಮನ್​ ಸೆಂಟ್ರಿಕ್ ಸಿನಿಮಾ ಮಾಡಲು ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.

ಸಾಯಿ ಪಲ್ಲವಿ ಅವರು ಮಲಯಾಳಂ ಚಿತ್ರರಂಗ ಮಾತ್ರವಲ್ಲದೆ ವಿವಿಧ ಭಾಷೆಗಳಲ್ಲಿ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ತೆಲುಗು ಚಿತ್ರಂಗರದಲ್ಲೂ ಅವರಿಗೆ ಬೇಡಿಕೆ ಇದೆ. ತೆಲುಗಿನ ‘ಫಿದಾ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಈ ಚಿತ್ರ ತೆಲುಗು ಚಿತ್ರದಲ್ಲಿ ಸಾಕಷ್ಟು ಹೆಸರು ಮಾಡಿದ ಸಿನಿಮಾ. ಹೀಗಿರುವಾಗಲೇ ಅವರಿಗೆ ಮಹಿಳಾ ಪ್ರಧಾನ ಸಿನಿಮಾ ಸಿಕ್ಕಿದೆ.

ಕಾರ್ತಿಕ್ ತೀಡಾ ಅವರ ಜೊತೆ ಸಾಯಿ ಪಲ್ಲವಿ ಅವರು ಮಾತುಕತೆ ನಡೆಸುತ್ತಿದ್ದಾರೆ. ಸದ್ಯ ಎಲ್ಲವೂ ಫೈನಲ್ ಆಗುವ ಹಂತದಲ್ಲಿ ಇದೆ. ತೆಲುಗಿನಲ್ಲಿ ಸಾಯಿ ಪಲ್ಲವಿ ಅವರು ಈ ಮೊದಲು ‘ಫಿದಾ’, ‘ಎಂಸಿಎ’ ಹಾಗೂ ‘ಲವ್ ಸ್ಟೋರಿ’ ಚಿತ್ರಗಳಲ್ಲಿ ನಟಿಸಿದ್ದರು.

ಕಾರ್ತಿಕ್ ತೀಡಾ ಅವರು ಸಹಾಯಕ ನಿರ್ದೇಶಕರಾಗಿ ಕೃಷ್ಣ ವಂಶಿ ಬಳಿ ಕೆಲಸ ಮಾಡಿದ್ದರು. ಈಗ ಅವರು ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಖ್ಯಾತ ನಟಿಯ ಕಾಲ್​ಶೀಟ್ ಸಿಕ್ಕಿದ್ದು ಅವರಿಗೆ ಖುಷಿ ನೀಡಿದೆ.

ಅನ್ನಪೂರ್ಣ ಸ್ಟುಡಿಯೋದಿಂದ ನಿರ್ಮಾಣ

ಸಾಯಿ ಪಲ್ಲವಿ ಅವರ ಮುಂದಿನ ಚಿತ್ರವನ್ನು ಅನ್ನಪೂರ್ಣ ಸ್ಟುಡಿಯೋ ನಿರ್ಮಾಣ ಮಾಡಲಿದೆ ಎನ್ನಲಾಗಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಆಗುವ ನಿರೀಕ್ಷೆ ಇದೆ. ದೊಡ್ಡ ಮಟ್ಟದಲ್ಲಿ ಚಿತ್ರ ರಿಲೀಸ್ ಆಗಲಿದೆ.

ಇದನ್ನೂ ಓದಿ: 2025ರಲ್ಲಿ ಬಿಡುಗಡೆ ಆಗಲಿವೆ ಸಾಯಿ ಪಲ್ಲವಿಯ ಹಲವು ಸಿನಿಮಾ, ಅಭಿಮಾನಿಗಳಿಗೆ ಹಬ್ಬ

ಸಖತ್ ಬೇಡಿಕೆ

ಇತ್ತೀಚೆಗೆ ರಿಲೀಸ್ ಆದ ‘ಅಮರನ್’ ಚಿತ್ರ ಸೂಪರ್ ಹಿಟ್ ಆಯಿತು. ಶಿವಕಾರ್ತಿಕೇಯ ಹಾಗೂ ಸಾಯಿ ಪಲ್ಲವಿ ನಟನೆಯ ಈ ಚಿತ್ರವನ್ನು ಜನರು ಇಷ್ಟಪಟ್ಟರು. ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿದ ಈ ಚಿತ್ರ ಒಟಿಟಿಯಲ್ಲೂ ಸದ್ದು ಮಾಡಿದೆ. ಸಾಯಿ ಪಲ್ಲವಿ ಅವರು ಸದ್ಯ ಬಾಲಿವುಡ್ ಕದ ತಟ್ಟಿದ್ದಾರೆ. ಹಿಂದಿಯ ‘ರಾಮಾಯಣ’ ಚಿತ್ರದಲ್ಲಿ ಸೀತೆಯ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.