‘ವಿದಾಮುಯಾರ್ಚಿ’ ಟ್ರೇಲರ್ ರಿಲೀಸ್; ಆ್ಯಕ್ಷನ್ ಅವತಾರದಲ್ಲಿ ಗಮನ ಸೆಳೆದ ಅಜಿತ್

ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು ಮತ್ತು ಅಜಿತ್ ಅವರ ಎರಡು ವಿಭಿನ್ನ ಲುಕ್‌ಗಳು ಟ್ರೇಲರ್‌ನ ಹೈಲೈಟ್ ಆಗಿದೆ. ಫೆಬ್ರವರಿ 6 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

‘ವಿದಾಮುಯಾರ್ಚಿ’ ಟ್ರೇಲರ್ ರಿಲೀಸ್; ಆ್ಯಕ್ಷನ್ ಅವತಾರದಲ್ಲಿ ಗಮನ ಸೆಳೆದ ಅಜಿತ್
ಅಜಿತ್ ಕುಮಾರ್
Follow us
ರಾಜೇಶ್ ದುಗ್ಗುಮನೆ
|

Updated on:Jan 17, 2025 | 9:12 AM

ನಟ ಅಜಿತ್ ಅವರ ನಟನೆಯ ‘ವಿದಾಮುಯರ್ಚಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಟ್ರೇಲರ್ ಈಗ ರಿಲೀಸ್ ಆಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ. ಈ ಚಿತ್ರದಲ್ಲಿ ಅವರು ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ. ಈ ಟ್ರೇಲರ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಸಿನಿಮಾ ಫೆಬ್ರವರಿ 6ರಂದು ರಿಲೀಸ್ ಆಗಲಿದೆ ಎಂದು ಟ್ರೇಲರ್​ನಲ್ಲಿ ಮಾಹಿತಿ ನೀಡಲಾಗಿದೆ.

ಅಜಿತ್ ಕುಮಾರ್ ಅವರು ‘ವಿದಾಮುಯರ್ಚಿ’ ಸಿನಿಮಾದಲ್ಲಿ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಯಂಗ್​ ಲುಕ್​ನಲ್ಲಿ ಕಾಣಿಸುವ ಅವರು ನಂತರ ಗಡ್ಡ ಮೀಸೆ ಬಿಟ್ಟು ಬೇರೆಯದೇ ಲುಕ್​ನಲ್ಲಿ ಗಮನ ಸೆಳೆದಿದ್ದಾರೆ. ಅವರ ಮ್ಯಾನರಿಸಂ ಇಷ್ಟ ಆಗಿದೆ. ಕಥಾ ನಾಯಕ ಅಪಘಾತದಲ್ಲಿ ಎಲ್ಲವನ್ನೂ ಮರೆಯುತ್ತಾನೆ. ಆ ಬಳಿಕ ಏನಾಗುತ್ತದೆ ಎಂಬುದು ಚಿತ್ರದ ಕಥೆ ಏಂದು ಟ್ರೇಲರ್ ನೋಡಿದವರು ಅಭಿಪ್ರಾಯಪಟ್ಟಿದ್ದಾರೆ.

ಅರ್ಜುನ್ ಸರ್ಜಾ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರದ್ದು ವಿಲನ್ ಪಾತ್ರವೋ ಅಥವಾ ಒಳ್ಳೆಯ ವ್ಯಕ್ತಿಯ ಪಾತ್ರವೋ ಎಂದು ಗೊಂದಲ ಮೂಡಿಸುವ ರೀತಿಯಲ್ಲಿ ಟ್ರೇಲರ್ ಮೂಡಿ ಬಂದಿದೆ. ಈ ಚಿತ್ರಕ್ಕೆ ಸಿನಿಮಾದಲ್ಲೇ ಉತ್ತರ ಸಿಗಬೇಕಿದೆ.

‘ವಿದಾಮುಯರ್ಚಿ’ ಚಿತ್ರವನ್ನು ಬೇರೆ ಬೇರೆ ದೇಶಗಳಲ್ಲಿ ಶೂಟ್ ಮಾಡಲಾಗಿದೆ. ಅವರ ಸಿನಿಮಾಗಳಲ್ಲಿ ಆ್ಯಕ್ಷನ್ ದೃಶ್ಯಗಳು ಭರ್ಜರಿ ಇರುತ್ತವೆ. ಅದು ‘ವಿದಾಮುಯರ್ಚಿ’ ಚಿತ್ರದಲ್ಲೂ ಮುಂದುವರಿದಿದೆ. ಈ ಟ್ರೇಲರ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾ ಅಜಿತ್​ಗೆ ದೊಡ್ಡ ಯಶಸ್ಸು ತಂದುಕೊಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಚಿತ್ರಕ್ಕೆ ತ್ರಿಷಾ ನಾಯಕಿ.

ಇದನ್ನೂ ಓದಿ: ನಟನಾಗುವುದಕ್ಕೂ ಮೊದಲು ಗ್ಯಾರೆಜ್​ನಲ್ಲಿ ಕೆಲಸ ಮಾಡಿದ್ದ ಅಜಿತ್

‘ವಿದಾಮುಯರ್ಚಿ’ ಚಿತ್ರವನ್ನು ಮಕಿಳ್ ತಿರುಮೇನಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ತಾಡಮ್’ ರೀತಿಯ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದಾರೆ. ಅವರು ನಟನಾಗಿ, ಚಿತ್ರಕಥೆ ಬರಹಗಾರನಾಗಿಯೂ ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:58 am, Fri, 17 January 25

ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಬಿಎಂಟಿಸಿ ಟಿಕೆಟ್ ದರ ಹೆಚ್ಚಿರುವ ಬೆನ್ನಲ್ಲೇ ಮೆಟ್ರೋ ಪ್ರಯಾಣ ದರ ಏರಿಕೆ!
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಜನಪ್ರತಿನಿಧಿಗಳು ಎಲೆಕ್ಟ್ರಾನಿಕ್ ಮಾಧ್ಯಮಗಳ ನ್ಯೂಸ್ ವೀಕ್ಷಿಸುವುದಿಲ್ಲವೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಡಿಕೆ ಸುರೇಶ್​ಗೆ ಕೆಪಿಸಿಸಿ ಅಧ್ಯಕ್ಷನಾಗುವ ಹಂಬಲವಿದೆಯೇ?
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಚಿವೆಯನ್ನು ಮಾತಾಡಿಸಲು ಆಸ್ಪತ್ರೆಗೆ ಭೇಟಿ ನೀಡದಂತೆ ಜನರಿಗೆ ವೈದ್ಯರ ಮನವಿ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯನ್ನು ಪೂರ್ತಿಗೊಳಿಸಲ್ಲ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ನಾನೇ ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುತ್ತೇನೆ: ವಿಜಯೇಂದ್ರ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುರ್ಜೆವಾಲಾ ರಾಜ್ಯದಲ್ಲಿರುವಾಗಲೇ ನಡೆದಿರುವ ಬೆಳವಣಿಗೆ ಕುತೂಹಲಕಾರಿ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಸುತ್ತೂರು ಮಠದಲ್ಲೇ ವಿಜಯೇಂದ್ರ ಮತ್ತು ಸಂಗಡಿಗರಿಗೆ ಉಪಹಾರ
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್
ಆಕಾಶದಲ್ಲಿ ಸ್ಫೋಟಗೊಂಡ ಸ್ಪೇಸ್​ಎಕ್ಸ್​ ಸ್ಟಾರ್​ಶಿಪ್