AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ಅಜಿತ್ ಜಾಲಿ ಬೈಕ್ ರೈಡ್, ಧರಿಸಿರುವ ಹೆಲ್ಮೆಟ್ ಬೆಲೆ ಎಷ್ಟು ಗೊತ್ತೆ?

ತಮಿಳಿನ ಸ್ಟಾರ್ ನಟ ಅಜಿತ್​ಗೆ ಸಿನಿಮಾ ಹೊರತಾಗಿ ಗೊತ್ತಿರುವುದು ಬೈಕ್ ರೈಡಿಂಗ್ ಮಾತ್ರವೇ. ಹೈದರಾಬಾದ್​ನಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಅಜಿತ್, ಅಲ್ಲಿಯೂ ಬೈಕ್ ಓಡಿಸಿದ್ದಾರೆ. ಬೈಕ್ ಓಡಿಸುವಾಗ ಅಜಿತ್ ಧರಿಸಿದ್ದ ಹೆಲ್ಮೆಟ್ ಗಮನ ಸೆಳೆದಿದೆ. ಆ ಹೆಲ್ಮೆಟ್ ಬೆಲೆ ಎಷ್ಟು?

ಹೈದರಾಬಾದ್​ನಲ್ಲಿ ಅಜಿತ್ ಜಾಲಿ ಬೈಕ್ ರೈಡ್, ಧರಿಸಿರುವ ಹೆಲ್ಮೆಟ್ ಬೆಲೆ ಎಷ್ಟು ಗೊತ್ತೆ?
ಅಜಿತ್ ಕುಮಾರ್
ಮಂಜುನಾಥ ಸಿ.
|

Updated on: May 28, 2024 | 4:28 PM

Share

ಸ್ಟಾರ್ ನಟರುಗಳು ಸಿನಿಮಾಗಳ ಜೊತೆಗೆ ರಾಜಕೀಯ ಪಕ್ಷ ಸ್ಥಾಪಿಸುತ್ತಾ, ಯಾವುದಾದರೂ ಪಕ್ಷಕ್ಕೆ ಬೆಂಬಲ ನೀಡುತ್ತಲೋ, ರಿಯಾಲಿಟಿ ಶೋಗಳನ್ನು ಮಾಡುತ್ತಾ ಸ್ಟಾರ್ ಗಿರಿ ಹಾಗೂ ಹಣ ಎರಡನ್ನೂ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಆ ಸ್ಟಾರ್ ನಟರಿಗೆ ಸಂಪೂರ್ಣ ಭಿನ್ನ ತಮಿಳಿನ ಅಜಿತ್ ಕುಮಾರ್ (Ajith Kumar). ದಳಪತಿ ವಿಜಯ್, ರಜನೀಕಾಂತ್ ಅವರಷ್ಟೆ ಅಭಿಮಾನಿಗಳನ್ನು, ಸ್ಟಾರ್ ಗಿರಿಯನ್ನೂ ಹೊಂದಿರುವ ನಟ ಅಜಿತ್, ತಾವಾಯಿತು ತಮ್ಮ ಕೆಲಸವಾಯಿತು ಎಂದಷ್ಟೆ ಇರುತ್ತಾರೆ. ಶೂಟಿಂಗ್ ಇದ್ದಾಗ ಬಂದು ನಟಿಸಿ, ಶೂಟಿಂಗ್ ಮುಗಿದ ಕೂಡಲೇ ಬೈಕ್ ರೈಡಿಂಗ್ ಪ್ರವಾಸ ಎಂದು ಹೊರಟುಬಿಡುತ್ತಾರೆ.

ಭಾರತದ ಹಲವು ರಾಜ್ಯಗಳಿಗೆ ಬೈಕ್ ಪ್ರವಾಸ ತೆರಳಿರುವ ಅಜಿತ್, ಹೊರದೇಶಗಳಲ್ಲಿಯೂ ಬೈಕ್ ಓಡಿಸಿದ್ದಾರೆ. ಇತ್ತೀಚೆಗೆ ಸಿನಿಮಾ ಒಂದರ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಅಜಿತ್, ಹೈದರಾಬಾದ್​ನ ಬೀದಿಗಳಲ್ಲಿ ಬೈಕ್ ಓಡಿಸಿ ಖುಷಿ ಪಟ್ಟಿದ್ದಾರೆ. ಅಜಿತ್ ತಮ್ಮ ದುಬಾರಿ ಬೈಕ್ ಓಡಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಅಜಿತ್​ ಓಡಿಸುವ ಬೈಕ್ ಬೆಲೆಯ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಪ್ರಕಟವಾಗಿವೆ, ಆದರೆ ಅವರ ಹೆಲ್ಮೆಟ್​ನ ದರವೆಷ್ಟು ಗೊತ್ತಾ?

ಅಜಿತ್ ಸಾಮಾನ್ಯವಾಗಿ ಬಿಎಂಡಬ್ಲು ಸಂಸ್ಥೆಯ ಬೈಕ್ ಓಡಿಸುತ್ತಾರೆ. ಅವರ ಬಳಿ ಮೂರಕ್ಕೂ ಹೆಚ್ಚು ಬಿಎಂಡ್ಲು ಬೈಕ್​ಗಳಿವೆ. ಹೈದರಾಬಾದ್​ನಲ್ಲಿ ಬಿಎಂಡಬ್ಲುನ 12 ಲಕ್ಷ ಬೆಲೆಯ ಬೈಕ್ ಅನ್ನು ಅಜಿತ್ ಓಡಿಸಿದ್ದಾರೆ. ಆದರೆ ಈ ಸಮಯ ಅವರು ಧರಿಸಿದ್ದಿದ್ದು ಕೆವೈಟಿ ಬ್ರ್ಯಾಂಡ್​ನ ಹೆಲ್ಮೆಟ್. ಇದು ಸಾಧಾರಣ ಹೆಲ್ಮೆಟ್ ಅಲ್ಲ. ಈ ಹೆಲ್ಮೆಟ್​ನ ಬೆಲೆ ಬರೋಬ್ಬರಿ 35 ಸಾವಿರ ರೂಪಾಯಿಗಳು.

ಇದನ್ನೂ ಓದಿ:ತ್ರಿಬಲ್ ಪಾರ್ಟ್​ನಲ್ಲಿ ಬಂದ ಅಜಿತ್​; ಹೊಸ ಸಿನಿಮಾಗಾಗಿ ಮೂರು ಅವತಾರ

ಈ ಹೆಲ್ಮೆಟ್​ನಲ್ಲಿ ಕಾರ್ಬನ್ ಫೈಬರ್ ಬಳಸಲಾಗಿದೆ. ಇದು ಅತ್ಯಂತ ಗಟ್ಟಿಯಾದ ಹೊರಮೈ ಹೊಂದಿರುತ್ತದೆ ಆದರೂ ಬಹಳ ಹಗುರವಾಗಿರುತ್ತದೆ. ಇನ್ನು ಇದರ ಮುಂದಿನ ಗ್ಲಾಸ್ ಅಥವಾ ವೈಸರ್ ಮೇಲೆ ಯಾವುದೇ ಗೆರೆಗಳು ಮೂಡುವುದಿಲ್ಲ. ಜೊತೆಗೆ ಇದರ ಮೇಲೆ ಫಾಗ್ ಅಥವಾ ಮಂಜು ಕೂರುವುದಿಲ್ಲ. ಹೆಲ್ಮೆಟ್​ನ ಒಳಗೆ ಬ್ಲೂಟ್ಯೂತ್ ಸ್ಪೀಕರ್ ಮತ್ತು ಮೈಕ್ ಇದೆ ಜೊತೆಗೆ ಒಂದು ಕೂಲಿಂಗ್ ಗ್ಲಾಸ್ ಸಹ ಇದೆ. ಅದ್ಭುತವಾದ ವೆಂಟಿಲೇಷನ್ ವ್ಯವಸ್ಥೆ ಸಹ ಹೆಲ್ಮೆಟ್​ನಲ್ಲಿದೆ. ಸೆಫ್ಟಿ ಮತ್ತು ಅನುಕೂಲಗಳು ಹೆಚ್ಚಿರುವ ಕಾರಣಕ್ಕೆ ಈ ಹೆಲ್ಮೆಟ್​ಗೆ ಇಷ್ಟೋಂದು ಬೆಲೆ.

ಅಜಿತ್ ಪ್ರಸ್ತುತ ‘ಗುಡ್ ಬ್ಯಾಂಡ್ ಅಗ್ಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಜಿತ್ ಈ ಹಿಂದೆ ನಟಿಸಿದ್ದ ‘ತುಣಿವು’ ಸಿನಿಮಾ 2023ರಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿದೆ. ‘ಗುಡ್ ಬ್ಯಾಂಡ್ ಅಗ್ಲಿ’ ಸಿನಿಮಾವನ್ನು ಅದಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದು, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಇತರೆ ಪಾತ್ರವರ್ಗ ಯಾರೆಂಬುದು ಬಹಿರಂಗವಾಗಿಲ್ಲ. ಈ ಸಿನಿಮಾದ ಬಳಿಕ ‘ವಿಡಾ ಮಯುರ್ಚಿ’ ಸಿನಿಮಾನಲ್ಲಿ ಅಜಿತ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ