ಅಜಿತ್ ಕುಮಾರ್ ಚಿತ್ರಕ್ಕೆ ಹಾಲಿವುಡ್ ಸಿನಿಮಾ ಟೈಟಲ್; ‘ಪುಷ್ಪ’ ನಿರ್ಮಾಪಕನಿಂದ ಬಂಡವಾಳ
‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾ ಪೋಸ್ಟರ್ ಹಿಂಭಾಗ ಸಂಪೂರ್ಣವಾಗಿ ಕೆಂಪು ಬಣ್ಣದಿಂದ ಕೂಡಿದೆ. ಈ ಮೂಲಕ ಚಿತ್ರ ಭರ್ಜರಿ ಆ್ಯಕ್ಷನ್ ಹಾಗೂ ವೈಲೆನ್ಸ್ನಿಂದ ಕೂಡಿರಲಿದೆ ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಭಿನಂದನ್ ರಾಮಾನುಜಂ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ಅಜಿತ್ ಕುಮಾರ್ (Ajith Kumar) ನಟನೆಯ ಹೊಸ ಸಿನಿಮಾ ಘೋಷಣೆ ಆಗಿದೆ. ಇದು ಅವರ 63ನೇ ಸಿನಿಮಾ ಆಗಿದ್ದು, ಈ ಚಿತ್ರಕ್ಕೆ ‘ಗುಡ್ ಬ್ಯಾಡ್ ಅಗ್ಲಿ’ ಎಂದು ಶೀರ್ಷಿಕೆ ಇಡಲಾಗಿದೆ. 1966ರಲ್ಲಿ ಹಾಲಿವುಡ್ನಲ್ಲಿ ‘ದಿ ಗುಡ್, ದಿ ಬ್ಯಾಡ್ ಆ್ಯಂಡ್ ದಿ ಅಗ್ಲಿ’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಆ ಚಿತ್ರದ ಟೈಟಲ್ನ ಅಜಿತ್ ಸಿನಿಮಾ ನೆನಪಿಸಿದೆ. ಸಿನಿಮಾದ ಟೈಟಲ್ ನೋಡಿದ ಬಳಿಕ ಅಜಿತ್ ಕುಮಾರ್ ಪಾತ್ರಕ್ಕೆ ಮೂರು ಶೇಡ್ಗಳು ಇರಲಿವೆಯೇ ಅಥವಾ ಗುಡ್, ಬ್ಯಾಡ್, ಅಗ್ಲಿ ಎಂಬ ಮೂರು ಪಾತ್ರಗಳು ಸಿನಿಮಾದಲ್ಲಿ ಬರಲಿವೆಯೇ ಎನ್ನುವ ಪ್ರಶ್ನೆ ಮೂಡಿದೆ.
ತೆಲುಗಿನ ಮೈತ್ರಿ ಮೂವೀ ಮೇಕರ್ಸ್ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಅವರು ಅಜಿತ್ ಕುಮಾರ್ ಜೊತೆ ಕೈ ಜೋಡಿಸಿರುವುದು ಇದೇ ಮೊದಲು. ಈಗಾಗಲೇ ಮೈತ್ರಿ ಮೂವೀ ಮೇಕರ್ಸ್ ‘ಪುಷ್ಪ’ ಸಿನಿಮಾ ನಿರ್ಮಾಣ ಮಾಡಿ ಸಾಕಷ್ಟು ಲಾಭ ಕಂಡಿದೆ. ಸದ್ಯ ‘ಪುಷ್ಪ 2’ ಮೊದಲಾದ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅಜಿತ್ ಕುಮಾರ್ ಹೊಸ ಸಿನಿಮಾ ಕೂಡ ಘೋಷಣೆ ಆಗಿದೆ. ಈ ಚಿತ್ರವನ್ನು ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡುತ್ತಿದ್ದಾರೆ.
ಮೈತ್ರಿ ಮೂವೀ ಮೇಕರ್ಸ್
With Wholesome Humbleness herewith, we Announce the title of AK’s Next Movie Called as #GoodBadUgly #AjithKumar @Adhikravi @ThisIsDSP @AbinandhanR @editorvijay @GoodBadUglyoffl@SureshChandraa @supremesundar#kaloianvodenicharov #Anuvardhan @valentino_suren@Donechannel… pic.twitter.com/EU4qKO5fEO
— Mythri Movie Makers (@MythriOfficial) March 14, 2024
ಈ ಸಿನಿಮಾ ಪೋಸ್ಟರ್ ಹಿಂಭಾಗ ಸಂಪೂರ್ಣವಾಗಿ ಕೆಂಪು ಬಣ್ಣದಿಂದ ಕೂಡಿದೆ. ಈ ಮೂಲಕ ಚಿತ್ರ ಭರ್ಜರಿ ಆ್ಯಕ್ಷನ್ ಹಾಗೂ ವೈಲೆನ್ಸ್ನಿಂದ ಕೂಡಿರಲಿದೆ ಎಂಬುದು ಗೊತ್ತಾಗಿದೆ. ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಭಿನಂದನ್ ರಾಮಾನುಜಂ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ನಟ ಅಜಿತ್ ಕುಮಾರ್ ಸಾಧನೆ ಒಂದೆರಡಲ್ಲ; ಇವರು ವಿಮಾನ ಕೂಡ ಹಾರಿಸಬಲ್ಲರು
ಅಜಿತ್ ಕುಮಾರ್ ಅವರು ಬೇರೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರಿಗೆ ಅನಾರೋಗ್ಯ ಕಾಡಿದ್ದು ಇದರಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಚಿತ್ರದ ಶೂಟಿಂಗ್ ಜೂನ್ನಲ್ಲಿ ಆರಂಭ ಆಗಲಿದ್ದು, 2025ರ ಪೊಂಗಲ್ಗೆ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ