2017ರಲ್ಲಿ ಮದುವೆಯಾದ ನಟಿ ಸಮಂತಾ ಅಕ್ಕಿನೇನಿ ಮತ್ತು ಅಕ್ಕಿನೇನಿ ನಾಗ ಚೈತನ್ಯ ಅವರ ಸಂಸಾರದಲ್ಲಿ ಈಗ ಏನೋ ಕಿರಿಕ್ ಎದುರಾಗಿದೆ ಎಂಬ ಅನುಮಾನ ಮೂಡಿದೆ. ಆ ಅನುಮಾನಕ್ಕೆ ಪೂರಕ ಆಗುವಂತಹ ಅನೇಕ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿವೆ. ಕೆಲವೇ ದಿನಗಳ ಹಿಂದೆ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ಅಕ್ಕಿನೇನಿ ಎಂಬ ಸರ್ನೇಮ್ ಅನ್ನು ತೆಗೆದು ಹಾಕಿದ ನಂತರ ಈ ಸಂಶಯ ಹುಟ್ಟುಕೊಂಡಿತ್ತು. ಆ ಬಗ್ಗೆ ಕುಟುಂಬದವರು ಏನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಮಂತಾ ಮಾವ ಅಕ್ಕಿನೇನಿ ನಾಗಾರ್ಜುನ ಅವರು ಇತ್ತೀಚೆಗೆ ತೆಗೆದುಕೊಂಡ ಒಂದು ನಿರ್ಧಾರದಿಂದಾಗಿ ಅನುಮಾನ ಇನ್ನಷ್ಟು ಹೆಚ್ಚುವಂತಾಗಿದೆ.
ನಾಗಾರ್ಜುನ ಅವರು ಬಿಗ್ ಬಾಸ್ ತೆಲುಗು ಸೀಸನ್ 5ಕ್ಕೆ ನಿರೂಪಣೆ ಮಾಡುತ್ತಿದ್ದಾರೆ. ಸೆ.5ರಂದು ಈ ಶೋ ಅದ್ದೂರಿಯಾಗಿ ಶುರುವಾಗಿದೆ. ಪ್ರತಿಬಾರಿ ಬಿಗ್ ಬಾಸ್ ಲಾಂಚ್ ಆಗುವುದಕ್ಕೂ ಮುನ್ನ ಒಂದು ಸುದ್ದಿಗೋಷ್ಠಿ ನಡೆಸುವುದು ವಾಡಿಕೆ. ಆದರೆ ಈ ಬಾರಿ ಆ ಸಂಪ್ರದಾಯಕ್ಕೆ ನಾಗಾರ್ಜುನ ಬ್ರೇಕ್ ಹಾಕಿದ್ದಾರೆ. ಅದರಿಂದಾಗಿ ಹಲವು ಬಗೆಯ ವದಂತಿಗಳು ಜೀವ ಪಡೆದುಕೊಂಡಿವೆ.
ಒಂದು ವೇಳೆ ಈ ಸಂದರ್ಭದಲ್ಲಿ ನಾಗಾರ್ಜುನ ಸುದ್ದಿಗೋಷ್ಠಿ ನಡೆಸಿದರೆ ಬಿಗ್ ಬಾಸ್ಗಿಂತಲೂ ಹೆಚ್ಚಾಗಿ ಅವರ ಮಗ-ಸೊಸೆಯ ವಿಚ್ಛೇದನದ ವದಂತಿ ಕುರಿತು ಮಾಧ್ಯಮದವರು ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದು ಖಚಿತ. ಹಾಗಾಗಿ ಅಂಥ ಪ್ರಸಂಗವನ್ನು ತಪ್ಪಿಸುವ ಸಲುವಾಗಿಯೇ ಅವರು ಬಿಗ್ ಬಾಸ್ ಸುದ್ದಿಗೋಷ್ಠಿಯನ್ನು ಕ್ಯಾನ್ಸಲ್ ಮಾಡಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಸುದ್ದಿ ಹಬ್ಬಿದೆ.
ಇಷ್ಟೆಲ್ಲ ಗುಸುಗುಸು ಹರಿದಾಡುತ್ತಿದ್ದರೂ ಕೂಡ ಸಮಂತಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ.29ರಂದು ನಾಗಾರ್ಜುನ ಜನ್ಮದಿನ. ಅಂದು ಕೂಡ ಸಮಂತಾ ಅವರು ಕುಟುಂಬದವರ ಜೊತೆ ಕಾಣಿಸಿಕೊಳ್ಳಲಿಲ್ಲ. ನಯನತಾರಾ ಪ್ರಿಯಕರ ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದು, ಆ ಚಿತ್ರದ ಶೂಟಿಂಗ್ ಸಲುವಾಗಿ ಅವರು ಮಾವನ ಬರ್ತ್ಡೇ ಸೆಲೆಬ್ರೇಷನ್ಗೆ ಚಕ್ಕರ್ ಹಾಕಿದ್ದಾರೆ ಎನ್ನಲಾಗಿದೆ. ನೇರವಾಗಿ ಈ ಕುಟುಂಬದವರು ಏನನ್ನೂ ಹೇಳಿಲ್ಲವಾದರೂ ಪರೋಕ್ಷವಾಗಿ ಎಲ್ಲವೂ ಗೋಚರಿಸುವಂತಿದೆ. ಸಾರ್ವಜನಿಕವಾಗಿ ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಕಾಣಿಸಿಕೊಳ್ಳದೇ ಹಲವು ದಿನಗಳಾಗಿವೆ ಎಂಬುದು ಗಮನಿಸಬೇಕಾದ ಅಂಶ.
ಇದನ್ನೂ ಓದಿ:
ಅಭಿಮಾನಿಗಳ ಬಳಿ ಬಹಿರಂಗ ಕ್ಷಮೆ ಕೇಳಿ, ನಟನೆಯಿಂದ ಬ್ರೇಕ್ ಪಡೆದ ಸಮಂತಾ ಅಕ್ಕಿನೇನಿ
ಸಖತ್ ಬೇಡಿಕೆ ಇದ್ದರೂ ಸಮಂತಾ ಯಾಕಿನ್ನೂ ಬಾಲಿವುಡ್ಗೆ ಕಾಲಿಟ್ಟಿಲ್ಲ? ನಾಗಾರ್ಜುನ ಸೊಸೆಗೆ ಕಾಡುತ್ತಿದೆ ಭಯ