ಡ್ರಗ್ಸ್ ವಿರುದ್ಧ ಟಾಲಿವುಡ್ ಸಮರ, ಮೊನ್ನೆ ಪ್ರಭಾಸ್, ಈಗ ನಾಗಾರ್ಜುನ

‘ದೇಶವನ್ನು ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಟಾಲಿವುಡ್ ಕಿಂಗ್ ಎಂದೇ ಕರೆಸಿಕೊಳ್ಳುವ ನಟ ಅಕ್ಕಿನೇನಿ ನಾಗಾರ್ಜುನ ಕರೆ ನೀಡಿದ್ದಾರೆ. ಯುವಕರು ಮತ್ತು ವಿದ್ಯಾರ್ಥಿಗಳು ಈ ‘ನಶಾ ಮುಕ್ತ ಭಾರತ್’ ಆಂದೋಲನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು, ಮಾದಕ ದ್ರವ್ಯಗಳ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೈಗೊಂಡಿರುವ ಈ ಕಾರ್ಯಕ್ರಮವು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ.

ಡ್ರಗ್ಸ್ ವಿರುದ್ಧ ಟಾಲಿವುಡ್ ಸಮರ, ಮೊನ್ನೆ ಪ್ರಭಾಸ್, ಈಗ ನಾಗಾರ್ಜುನ
Nasha Mukth Bharat

Updated on: Nov 27, 2026 | 2:52 PM

ಮುಖ್ಯಾಂಶಗಳು

  • ಡ್ರಗ್ಸ್ ವಿರುದ್ಧ ಅಭಿಯಾನಕ್ಕೆ ಟಾಲಿವುಡ್ ಬೆಂಬಲ
  • ಬೆಂಬಲ ಘೋಷಿಸಿರುವ ತೆಲುಗು ಚಿತ್ರನಟರು
  • ಪ್ರಭಾಸ್, ನಾಗಾರ್ಜುನ, ಸಾಯಿಕುಮಾರ್, ಬೊಯಪಾಟಿ ಶ್ರೀನು

ಮಾದಕ ವ್ಯಸನ ಎಂಬುದು ಪಿಡುಗಾಗಿ ಪರಿಣಮಿಸುತ್ತಿದೆ. ಯುವಕರು ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು, ಮಾದಕ ದ್ರವ್ಯದ ಪ್ರಭಾವದಲ್ಲಿ ಅಪರಾಧಗಳನ್ನು ಎಸಗುತ್ತಿರುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಮಾದಕ ವ್ಯಸನಕ್ಕೆ ಸಿನಿಮಾಗಳ ಪ್ರಭಾವ ಹೆಚ್ಚಾಗಿದೆ ಎಂದು ಸಹ ಆರೋಪಿಸುತ್ತಾ ಬರಲಾಗಿದೆ. ಆದರೆ ಇದೀಗ ತೆಲುಗು ಚಿತ್ರರಂಗ ಮಾದಕ ವಸ್ತು ವಿರುದ್ಧ ಸಮರ ಸಾರಿದೆ. ಕೆಲ ದಿನಗಳ ಹಿಂದಷ್ಟೆ ನಟ ಪ್ರಭಾಸ್ ಅವರು ಕೇಂದ್ರ ಸಚಿವ ಕಿಶನ್ ರೆಡ್ಡಿ ಅವರೊಟ್ಟಿಗೆ ಸೇರಿ ‘ನಶಾ ಮುಕ್ತ್ ಭಾರತ್’ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಈಗ ನಟ ನಾಗಾರ್ಜುನ ಸೇರಿದಂತೆ ಇನ್ನೂ ಕೆಲವು ಸೆಲೆಬ್ರಿಟಿಗಳು ಇದೇ ಅಭಿಯಾನಕ್ಕೆ ಜೊತೆಯಾಗಿದ್ದಾರೆ.

‘ದೇಶವನ್ನು ಮಾದಕ ದ್ರವ್ಯ ಮುಕ್ತವನ್ನಾಗಿ ಮಾಡಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಟಾಲಿವುಡ್ ಕಿಂಗ್ ಎಂದೇ ಕರೆಸಿಕೊಳ್ಳುವ ನಟ ಅಕ್ಕಿನೇನಿ ನಾಗಾರ್ಜುನ ಕರೆ ನೀಡಿದ್ದಾರೆ. ಯುವಕರು ಮತ್ತು ವಿದ್ಯಾರ್ಥಿಗಳು ಈ ‘ನಶಾ ಮುಕ್ತ ಭಾರತ್’ ಆಂದೋಲನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು, ಮಾದಕ ದ್ರವ್ಯಗಳ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕೈಗೊಂಡಿರುವ ಈ ಕಾರ್ಯಕ್ರಮವು ಮುಂದಿನ ಪೀಳಿಗೆಯ ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ.

Loading...

ಹೈದರಾಬಾದ್‌ನ ಅಮೀರ್‌ಪೇಟೆಯ ಮೈತ್ರಿವನಂ ಬಳಿ ಆಯೋಜಿಸಿದ್ದ ‘ಹೈದರಾಬಾದ್ ವಾಕ್ಸ್ ಫರ್ ನಶಾ ಮುಕ್ತ್ ಭಾರತ್’ ಕಾರ್ಯಕ್ರಮದಲ್ಲಿ ನಾಗಾರ್ಜುನ, ನಟ ಸಾಯಿ ಕುಮಾರ್, ನಿರ್ದೇಶಕ ಬೊಯಪಾಟಿ ಶ್ರೀನು, ಇನ್ನೂ ಕೆಲವರು ಭಾಗವಹಿಸಿದ್ದರು. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಜಿ ಕಿಶನ್ ರೆಡ್ಡಿ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಉದ್ಯಮಿ ಹಾಗೂ ಸೈಯೆಂಟ್ ಸಂಸ್ಥೆಯ ಸಂಸ್ಥಾಪಕ ಡಾ ಮೋಹನ್ ರೆಡ್ಡಿ ಇನ್ನೂ ಕೆಲವರು ಮಾದಕ ವಸ್ತುಗಳ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಇದನ್ನೂ ಓದಿ:ತೆಲುಗು ಚಿತ್ರರಂಗದ ಬಗ್ಗೆ ವ್ಯಂಗ್ಯ ಮಾಡಿದ ಬಾಲಿವುಡ್ ನಿರ್ದೇಶಕ

ನಟ ಸಾಯಿಕುಮಾರ್ ಮಾತನಾಡಿ, ‘ಯುವಕರು ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದೆ, ದೇಶವನ್ನು ಎಬ್ಬಿಸುವ ಶಕ್ತಿಯಾಗಿ ಬೆಳೆಯಬೇಕು. ಸ್ವಾಮಿ ವಿವೇಕಾನಂದರು ಹೇಳಿದ ‘ಗುರಿ ಮುಟ್ಟುವವರೆಗೂ ನಿಲ್ಲಬೇಡಿ’ ಎಂಬ ಸಂದೇಶವನ್ನು ಯುವಕರು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು, ಯುವಕರೇ ದೇಶದ ಭವಿಷ್ಯದ ಪ್ರಜೆಗಳು, ಅವರಲ್ಲಿ ಅಪಾರ ಶಕ್ತಿ ಮತ್ತು ಸಾಮರ್ಥ್ಯವಿದೆ, ಯುವಕರು ನಶೆಯಲ್ಲಿ ಮುಳುಗಿ ಮಲಗದೆ, ಸೂರ್ಯನಂತೆ ದೇಶವನ್ನು ಎಬ್ಬಿಸುವ ರೀತಿಯಲ್ಲಿ ತಮ್ಮ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಸಚಿವ ಕಿಶನ್ ರೆಡ್ಡಿ ಅವರ ನೇತೃತ್ವದಲ್ಲಿ ಹೈದರಾಬಾದ್​​ನಲ್ಲಿ ಕಳೆದ ಕೆಲ ದಿನಗಳಿಂದಲೂ ‘ಹೈದರಾಬಾದ್ ವಾಕ್ಸ್ ಫರ್ ನಶಾ ಮುಕ್ತ್ ಭಾರತ್’ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು, ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಹೈದರಾಬಾದ್​​ನಲ್ಲಿ ಮಾದಕ ವಸ್ತುವಿನ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ವರದಿ ಆಗುತ್ತಲೇ ಇರುತ್ತವೆ. ಟಾಲಿವುಡ್​ಗೆ ಸಂಬಂಧಿಸಿದ ಕೆಲವರು ಸಹ ಈ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದುಂಟು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us