ಅಕ್ಷಯ್ ಕುಮಾರ್ ನಿವಾಸಕ್ಕೆ ತೆರಳಿ ವಿವಾಹ ಆಮಂತ್ರಣ ಕೊಟ್ಟ ಅನಂತ್ ಅಂಬಾನಿ

|

Updated on: Jun 27, 2024 | 6:56 AM

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜುಲೈ 12ರಂದು ವಿವಾಹ ಕಾರ್ಯಕ್ರಮ ಆರಂಭ ಆಗಲಿದೆ. ಇದಕ್ಕೆ ಸೆಲೆಬ್ರಿಟಿಗಳಿಗೆ ಆಮಂತ್ರಣ ನೀಡೋ ಕೆಲಸವನ್ನು ಅನಂತ್ ಮಾಡುತ್ತಿದ್ದಾರೆ. ಅನಂತ್ ಅವರು ಈಗ ಅಕ್ಷಯ್ ಕುಮಾರ್ ನಿವಾಸಕ್ಕೆ ತೆರಳಿ ಆಮಂತ್ರಣ ಕೊಟ್ಟಿದ್ದಾರೆ.

ಅಕ್ಷಯ್ ಕುಮಾರ್ ನಿವಾಸಕ್ಕೆ ತೆರಳಿ ವಿವಾಹ ಆಮಂತ್ರಣ ಕೊಟ್ಟ ಅನಂತ್ ಅಂಬಾನಿ
ಅಕ್ಷಯ್-ಅನಂತ್
Follow us on

ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಮಗ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚಂಟ್ ಜೊತೆ ವಿವಾಹ ಆಗುತ್ತಿದ್ದಾರೆ. ಜುಲೈ 12ರಂದು ಮುಂಬೈನ ಜಿಯೋ ಸಿನಿಮಾ ವರ್ಲ್ಡ್​ನಲ್ಲಿ ಈ ವಿವಾಹ ಕಾರ್ಯ ಆರಂಭ ಆಗಲಿದೆ. ಸ್ವತಃ ಅನಂತ್ ಅಂಬಾನಿ ಅವರು ರಾಧಿಕಾ ಜೊತೆ ತೆರಳಿ ಅಕ್ಷಯ್ ಕುಮಾರ್ ಅವರಿಗೆ ವಿವಾಹ ಆಮಂತ್ರಣ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಬುಧವಾರ (ಜೂನ್ 26) ರಾತ್ರಿ ಅನಂತ್ ಅಂಬಾನಿ ಅವರು ಅಕ್ಷಯ್ ಕುಮಾರ್ ಅವರ ಜುಹು ನಿವಾಸಕ್ಕೆ ಆಗಮಿಸಿದ್ದಾರೆ. ಅವರು ರೋಲ್ಸ್ ರಾಯ್ಸ್​ನಲ್ಲಿ ಆಗಮಿಸಿದ್ದರು. ಅವರ ಸುತ್ತಲೂ ಭದ್ರತಾ ಸಿಬ್ಬಂದಿ ಇದ್ದರು. ಈ ವಿಡಿಯೋನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳ್ಳಲಾಗಿದೆ. ಅನಂತ್ ಅಂಬಾನಿ ಅವರು ಪಾಪರಾಜಿಗಳಿಗೆ ವಿಶ್ ಮಾಡಿದ್ದಾರೆ.

ಅನಂತ್ ಅಂಬಾನಿ ಅವರು ಇತ್ತೀಚೆಗೆ ಅಜಯ್ ದೇವಗನ್ ಹಾಗೂ ಕಾಜೋಲ್ ನಿವಾಸಕ್ಕೆ ತೆರಳಿದ್ದರು. ಅವರು ದಂಪತಿಯನ್ನು ಆಮಂತ್ರಿಸಿ ಬಂದಿದ್ದಾರೆ. ಈ ಮೊದಲು ನೀತಾ ಅಂಬಾನಿ ಅವರು ವಾರಣಾಸಿಯ ಕಾಶಿ ವಿಶ್ವನಾಥ ದೇವಲಯಕ್ಕೆ ತೆರಳಿ ಆಮಂತ್ರಣ ನೀಡಿದ್ದರು.


ಈಗಾಗಲೇ ಅನಂತ್ ಅಂಬಾನಿಯ ವಿವಾಹ ಪೂರ್ವ ಕಾರ್ಯಕ್ರಮಗಳು ಎರಡು ಬಾರಿ ನಡೆದಿದ್ದು, ಭರ್ಜರಿಯಾಗಿದ್ದವು. ಮೊದಲು ಈ ಕಾರ್ಯಕ್ರಮ ಗುಜರಾತ್​ನಲ್ಲಿ ನಡೆದಿತ್ತು. ಆ ಬಳಿಕ ಕಾರ್ಯಕ್ರಮ ವಿದೇಶದಲ್ಲಿ ಕ್ರೂಸ್​ ​ಶಿಪ್​ನಲ್ಲಿ ನಡೆದಿತ್ತು. ಎರಡೂ ಕಾರ್ಯಕ್ರಮದಲ್ಲಿ ವಿದೇಶಗಳಿಂದ ಸೆಲೆಬ್ರಿಟಿಗಳನ್ನು ಕರೆಸಲಾಗಿತ್ತು.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಸಿನಿಮಾಗಳನ್ನು ನಿರ್ಮಿಸಿ, ಆಸ್ತಿ ಕಳೆದುಕೊಂಡ ನಿರ್ಮಾಪಕ

ಜುಲೈ 12ರಂದು ವಿವಾಹ ಕಾರ್ಯಕ್ರಮ ಆರಂಭ ಆಗಲಿದೆ. ಭಾರತೀಯ ಶೈಲಿಯಲ್ಲಿ ಇವರು ಮಿಂಚಲಿದ್ದಾರೆ. ಜೂನ್ 13 ಹಾಗೂ 14 ಕೂಡ ವಿವಾಹ ಕಾರ್ಯಕ್ರಮಗಳು ನಡೆಯಲಿವೆ.  ಈಗಾಗಲೇ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.