AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮಿಂದ ನಿರ್ಮಾಣ ಸಂಸ್ಥೆಗೆ ಭರ್ಜರಿ ನಷ್ಟ; ಅಕ್ಷಯ್ ಕುಮಾರ್​ಗೆ ಶುರುವಾಗಿದೆ ಚಿಂತೆ

ಅಕ್ಷಯ್ ಕುಮಾರ್ ಅವರು ವಶು ಭಗ್ನಾನಿಗೆ ಕರೆ ಮಾಡಿದ್ದಾರೆ. ‘ನಾವು ನಿರ್ಮಾಣ ಸಂಸ್ಥೆ ಜೊತೆ ಇರುತ್ತೇವೆ’ ಎನ್ನುವ ಭರವಸೆಯನ್ನು ಅಕ್ಷಯ್ ಕುಮಾರ್ ನೀಡಿದ್ದಾರೆ ಎನ್ನಲಾಗಿದೆ. ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಡೇವಿಡ್ ಧವನ್ ಮೊದಲಾದವರು ವಶುಗೆ ಕರೆ ಮಾಡಿದ್ದಾರೆ.

ತಮ್ಮಿಂದ ನಿರ್ಮಾಣ ಸಂಸ್ಥೆಗೆ ಭರ್ಜರಿ ನಷ್ಟ; ಅಕ್ಷಯ್ ಕುಮಾರ್​ಗೆ ಶುರುವಾಗಿದೆ ಚಿಂತೆ
ಅಕ್ಷಯ್-ವಶು
 ಶ್ರೀಲಕ್ಷ್ಮೀ ಎಚ್
| Edited By: |

Updated on:Jun 27, 2024 | 8:05 AM

Share

ಬಾಲಿವುಡ್​ನಲ್ಲಿ ಅನೇಕ ದೊಡ್ಡ ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಈ ಪೈಕಿ ಪೂಜಾ ಎಂಟರ್​ಟೇನ್​ಮೆಂಟ್​ನ ವಶು ಭಗ್ನಾನಿ ಅವರು 250 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹಲವು ವರದಿಗಳು ಹರಿದಾಡುತ್ತಿವೆ. ಅಕ್ಷಯ್ ಕುಮಾರ್ (Akshay Kumar) ಅವರು ಪೂಜಾ ಎಂಟರ್​ಟೇನ್​ಮೆಂಟ್ ಜೊತೆ ಹಲವು ಸಿನಿಮಾ ಮಾಡಿದ್ದಾರೆ. ಈ ಸಂಸ್ಥೆಯ ನಷ್ಟಕ್ಕೆ ಅಕ್ಷಯ್ ಕೂಡ ಕಾರಣ ಎನ್ನಲಾಗಿದೆ. ಈ ವರದಿಗಳನ್ನು ನೋಡಿ ಅಕ್ಷಯ್ ಕುಮಾರ್ ಅವರು ವಶು ಭಗ್ನಾನಿಗೆ ಕರೆ ಮಾಡಿದ್ದರಂತೆ. ‘ನಾವು ನಿರ್ಮಾಣ ಸಂಸ್ಥೆ ಜೊತೆ ಇರುತ್ತೇವೆ’ ಎನ್ನುವ ಭರವಸೆಯನ್ನು ಅಕ್ಷಯ್ ಕುಮಾರ್ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ವಶು ಅವರು ಮಾತನಾಡಿದ್ದಾರೆ. ‘ನನಗೆ ಕರೆ ಮಾಡಿ ಮಾತನಾಡಿ ಧೈರ್ಯ ತುಂಬಿದ ಮೊದಲಿಗ ಅಕ್ಷಯ್ ಕುಮಾರ್. ಏನಾದರೂ ಮಾಡಬಹುದೇ ಎಂದು ಕೇಳಿದರು. ಅವರು ನಮಗೆ ಬೆಂಬಲ ನೀಡಿದ್ದಾರೆ. ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ ಹಾಗೂ ನನ್ನ ಹಳೆಯ ಗೆಳೆಯ ಡೇವಿಡ್ ಧವನ್ ಕರೆ ಮಾಡಿದರು. ನನಗೆ ಇದರಿಂದ ಖುಷಿ ಆಗಿದೆ’ ಎಂದಿದ್ದಾರೆ ವಶು.

‘ನನಗೆ ಸಿನಿಮಾ ರಂಗ ಇಷ್ಟ. ಸಿನಿಮಾ ರಂಗದ ಮೇಲೆ ವಿಶೇಷ ಪ್ರೀತಿ ಇದೆ. ಚಿತ್ರರಂಗದಲ್ಲಿ ಹಲವು ಭಾವನಾತ್ಮಕ ಜನರಿದ್ದಾರೆ. ಅವರು ನಿಮ್ಮ ಬಗ್ಗೆಯೇ ಆಲೋಚಿಸುತ್ತಾರೆ’ ಎಂದು ವಶು ಅವರು ಹೇಳಿ ಸಂತಸ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ವಶು ಭಗ್ನಾನಿ ಹಾಗೂ ಜಾಕಿ ಭಗ್ನಾನಿ ಒಡೆತನದ ‘ಪೂಜಾ ಎಂಟರ್​ಟೇನ್​ಮೆಂಟ್’ ಸಖತ್ ನಷ್ಟ ಅನುಭವಿಸುತ್ತಿದೆ ಎಂದು ವರದಿ ಆಗಿತ್ತು. ಸರಣಿ ಫ್ಲಾಪ್​ಗಳಿಂದ ಈ ರೀತಿ ಆಗಿದೆ ಎನ್ನಲಾಗಿತ್ತು. ವಶು ಅವರು ಪೂಜಾ ಎಂಟರ್​​ಟೇನ್​ಮೆಂಟ್ ಸಾಲ ತೀರಿಸಲು ಎಳಂತಸ್ತಿನ ಕಟ್ಟಡ ಮಾರಾಟ ಮಾಡಿದ್ದರು ಎನ್ನಲಾಗಿತ್ತು. ಅಲ್ಲದೆ, ಶೇ. 80 ಸಿಬ್ಬಂದಿಯನ್ನು ತೆಗೆದು ಹಾಕಲಾಗಿದೆ ಎನ್ನಲಾಗಿದೆ.

‘ನಾನು ಕಳೆದ 30 ವರ್ಷಗಳಿಂದ ಈ ಉದ್ಯಮದಲ್ಲಿದ್ದೇನೆ. ನಾವು ಸಾಲ ಮಾಡಿದ್ದೇವೆ ಎಂದು ಹೇಳುವವರು ಮುಂದೆ ಬಂದು ನಮ್ಮ ಬಳಿ ಮಾತನಾಡಬೇಕು. ಅವರಿಗೆ ಪೂಜಾ ಎಂಟರ್​ಟೇನ್​ಮೆಂಟ್ ಜೊತೆ ಏನಾದರೂ ಸಂಬಂಧ ಇದೆಯೇ? ಏನಾದರೂ ಸಮಸ್ಯೆ ಇದ್ದರೆ ನಾವೇ ಪರಿಹರಿಸಿಕೊಳ್ಳುತ್ತೇವೆ. ನಾವ್ಯಾರೂ ಓಡಿ ಹೋಗುತ್ತಿಲ್ಲ. ಕಚೇರಿಗೆ ಬಂದು ನಮ್ಮ ಬಳಿ ಮಾತನಾಡಿ. ನಿಮ್ಮ ಬಳಿ ಇರೋ ದಾಖಲೆಗಳನ್ನು ನೀಡಿ’ ಎಂದು  ವಶು ಕೋರಿದ್ದರು.

ಇದನ್ನೂ ಓದಿ: ಅಕ್ಷಯ್ ಕುಮಾರ್ ನಿವಾಸಕ್ಕೆ ತೆರಳಿ ವಿವಾಹ ಆಮಂತ್ರಣ ಕೊಟ್ಟ ಅನಂತ್ ಅಂಬಾನಿ

ಪೂಜಾ ಎಂಟರ್​ಟೇನ್​ಮೆಂಟ್ ಹಳೆಯ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ‘ಕೂಲಿ ನಂಬರ್ 1’, ‘ಹೀರೋ ನಂಬರ್ 1’, ‘ಬೆಲ್ ಬಾಟಂ’, ‘ಬಿವಿ ನಂಬರ್ 1’ ಮೊದಲಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾಗಳ ಪೈಕಿ ಅನೇಕವು ಫ್ಲಾಪ್ ಎನಿಸಿಕೊಂಡಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:04 am, Thu, 27 June 24