ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್

Akshay Kumar movie: ಅಕ್ಷಯ್ ಕುಮಾರ್ ಅವರು, ಸಿನಿಮಾ ಆಫರ್​​ಗಳನ್ನು ರಿಜೆಕ್ಟ್ ಮಾಡುವುದೇ ಇಲ್ಲ ಎಂಬ ಮಾತಿದೆ. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಸಿನಿಮಾ ಒಂದನ್ನು ರಿಜೆಕ್ಟ್ ಮಾಡಿದ್ದಾರೆ. ಅದೂ ಸಾಮಾನ್ಯ ನಿರ್ಮಾಣ ಸಂಸ್ಥೆಯನ್ನಲ್ಲ. ಬದಲಿಗೆ ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯ ಆಫರ್ ಅನ್ನೇ ರಿಜೆಕ್ಟ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.

ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್
Akshay Rana

Updated on: Apr 23, 2026 | 11:38 AM

ಅಕ್ಷಯ್ ಕುಮಾರ್ (Akshay Kumar), ಬಾಲಿವುಡ್​ನ ಅತ್ಯಂತ ಬ್ಯುಸಿ ಸ್ಟಾರ್ ನಟ. ವರ್ಷಕ್ಕೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿಬಿಡುತ್ತಾರೆ. ಅಕ್ಷಯ್ ಕುಮಾರ್ ಅವರು, ಸಿನಿಮಾ ಆಫರ್​​ಗಳನ್ನು ರಿಜೆಕ್ಟ್ ಮಾಡುವುದೇ ಇಲ್ಲ ಎಂಬ ಮಾತಿದೆ. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಸಿನಿಮಾ ಒಂದನ್ನು ರಿಜೆಕ್ಟ್ ಮಾಡಿದ್ದಾರೆ. ಅದೂ ಸಾಮಾನ್ಯ ನಿರ್ಮಾಣ ಸಂಸ್ಥೆಯನ್ನಲ್ಲ. ಬದಲಿಗೆ ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆಯ ಆಫರ್ ಅನ್ನೇ ರಿಜೆಕ್ಟ್ ಮಾಡಿ ಆಶ್ಚರ್ಯ ಮೂಡಿಸಿದ್ದಾರೆ.

ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್ಸ್ ಅಡಿಯಲ್ಲಿ, ಉಜ್ಜಯಿನಿ ನಗರದ ಹಿನ್ನೆಲೆಯ ಐತಿಹಾಸಿಕ ಥ್ರಿಲ್ಲರ್ ಚಿತ್ರವೊಂದರಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ ಎನ್ನಲಾಗಿತ್ತು. ಇದೇ ಸಿನಿಮಾನಲ್ಲಿ ‘ಬಾಹುಬಲಿ’ ಸಿನಿಮಾದ ವಿಲನ್ ರಾಣಾ ದಗ್ಗುಬಾಟಿ ಸಹ ನಟಿಸಲಿದ್ದು, ‘ಬಾಹುಬಲಿ’ ಮಾದರಿಯ ಸಿನಿಮಾ ಇದಾಗಿರಲಿದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ ಇದೀಗ ಅಕ್ಷಯ್ ಕುಮಾರ್ ಅವರು ಆ ಸಿನಿಮಾನಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ.

ಅಕ್ಷಯ್ ಕುಮಾರ್ ಮತ್ತು ರಾಣಾ ದಗ್ಗುಬಾಟಿ ಕರಣ್ ಜೋಹರ್ ಅವರ ಚಿತ್ರಕ್ಕಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಅಕ್ಷಯ್ ಕುಮಾರ್ ಅವರ ತಂಡವು ಇದನ್ನು ಅಧಿಕೃತವಾಗಿ ನಿರಾಕರಿಸಿದ್ದು, ಇದು ಕೇವಲ ವದಂತಿ ಎಂದು ತಿಳಿಸಿದೆ. ಅಕ್ಷಯ್ ಕುಮಾರ್ ಸದ್ಯ ತಮ್ಮ ಇತ್ತೀಚಿನ ಚಿತ್ರ ‘ಭೂತ್ ಬಂಗ್ಲಾ’ ಯಶಸ್ಸಿನಲ್ಲಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ಈ ಹಾರರ್ ಕಾಮಿಡಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಕ್ಷಯ್ ಕುಮಾರ್ ಅವರು ಮುಂದೆ ‘ವೆಲ್ಕಮ್ ಟು ದಿ ಜಂಗಲ್’, ‘ಹೈವಾನ್’, ಅನೀಸ್ ಬಾಜ್ಮಿ ಅವರ ಚಿತ್ರ ಮತ್ತು ‘ಗೋಲ್‌ಮಾಲ್ 5’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಅಕ್ಷಯ್ ಕುಮಾರ್ ಪುತ್ರ ಆರವ್ ಭಾಟಿಯಾ ತಿಂಗಳ ಸಂಬಳ ಕೇವಲ 4,500 ರೂಪಾಯಿ

ಆದರೆ ಈಗ ಉಜ್ಜಯಿನಿ ಆಧರಿತ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್ ಹೇಳಲು ಕಾರಣ ಏನೆಂದು ತಿಳಿದು ಬಂದಿಲ್ಲ. ಅಕ್ಷಯ್ ಕುಮಾರ್ ಅವರು ಸಾಮಾನ್ಯವಾಗಿ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸಲು ಹೆಚ್ಚು ಆಸಕ್ತಿ ತೋರುತ್ತಾರೆ ಆದರೆ ಈ ಸಿನಿಮಾಕ್ಕೆ ಒಲ್ಲೆ ಎಂದಿದ್ದಾರೆ. ಕರಣ್ ಜೋಹರ್ ಜೊತೆಗೆ ಮನಸ್ತಾಪದ ಕಾರಣಕ್ಕೆ ಅಕ್ಷಯ್ ನಟಿಸುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ರಾಣಾ ದಗ್ಗುಬಾಟಿ ಸಹ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ನಟನೆಗಿಂತಲೂ ಸಿನಿಮಾ ನಿರ್ಮಾಣ, ವಿತರಣೆಗಳಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ‘ಕಾಂತಾ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಇದೀಗ ಇನ್ನೂ ಕೆಲವು ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಕೆಲ ಸಿನಿಮಾಗಳಲ್ಲಿ ನಟನೆ ಸಹ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us