ಅಕ್ಷಯ್ ಕುಮಾರ್ ನಟನೆಯ ‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾ ತೆರೆಗೆ ಬಂದು 25 ವರ್ಷ ಕಳೆದಿದೆ. ಈ ಸಿನಿಮಾ ಅಭಿಮಾನಿಗಳಿಂದ ಅದ್ಭುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಈ ಚಿತ್ರ ಅಕ್ಷಯ್ ಕುಮಾರ್ ಅವರ ಸಿನಿಮಾ ಕರಿಯರ್ಗೆ ಒಳ್ಳೆಯ ಮೈಲೇಜ್ ನೀಡಿತ್ತು. ಈ ಸಿನಿಮಾವನ್ನು ಅಕ್ಷಯ್ ಕುಮಾರ್ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಅಚ್ಚರಿಯ ವಿಚಾರ ಕೂಡ ಹಂಚಿಕೊಂಡಿದ್ದಾರೆ.
ಅಂಡರ್ಟೇಕರ್ ಅವರನ್ನು ಸೋಲಿಸುವ ದೃಶ್ಯವೊಂದು ‘ಖಿಲಾಡಿಯೋಂಕಾ ಕಾ ಖಿಲಾಡಿ’ ಸಿನಿಮಾದಲ್ಲಿ ಬರುತ್ತದೆ. ಈಗ ಚಿತ್ರ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮೀಮ್ಗಳು ಹರಿದಾಡುತ್ತಿವೆ. ಈ ಮೀಮ್ನಲ್ಲಿ ಅಂಡರ್ಟೇಕರ್ ಅವರನ್ನು ಸೋಲಿಸಿದವರು ಯಾರ್ಯಾರು ಎಂಬುದನನ್ನು ತೋರಿಸುವ ವೇಳೆ ಅಕ್ಷಯ್ ಕುಮಾರ್ ಫೋಟೋ ಕೂಡ ಇತ್ತು.
ಹಾಗಾದರೆ, ನಿಜವಾಗಲೂ ಅಕ್ಷಯ್ ಕುಮಾರ್ ಅವರು ಅಂಡರ್ಟೇಕರ್ ವಿರುದ್ಧ ಹೋರಾಡಿದ್ದರಾ? ಅದಕ್ಕೂ ಉತ್ತರವಿದೆ. ‘ನಾನು ನಿಜವಾಗಲೂ ಅಂಡರ್ಟೇಕರ್ ಜತೆ ಸೆಣೆಸಿಲ್ಲ. ವ್ರೆಸ್ಲರ್ ಬ್ರಿಯಾನ್ ಲೀ ಅವರು ಅಂಡರ್ಟೇಕರ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು’ ಎಂದಿದ್ದಾರೆ.
A hilarious note to mark 25 years to the release of #KhiladiyonKaKhiladi tomorrow!
A fun fact though: it was wrestler Brian Lee who played The Undertaker in the film ? pic.twitter.com/w7J5z3QGBQ— Akshay Kumar (@akshaykumar) June 13, 2021
ಅಕ್ಷಯ್ ಕುಮಾರ್ ಅವರು ಪೃಥ್ವಿರಾಜ್ ಚೌಹಾಣ್ ಅವರ ಜೀವನ ಆಧರಿಸಿ ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿರುವ ‘ಪೃಥ್ವಿರಾಜ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಡೆಲ್ ಮಾನುಷಿ ಚಿಲ್ಲರ್ ಅವರು ಸನ್ಯೋಗಿತಾ ಪಾತ್ರ ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ಅವರು ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಟೈಟಲ್ ಬದಲಿಸುವಂತೆ ಕರಣಿ ಸೇನಾದವರು ಪಟ್ಟು ಹಿಡಿದಿದ್ದರು. ಅಕ್ಷಯ್ ಕುಮಾರ್ ನಟನೆಯ ಸೂರ್ಯವಂಶಿ ಸಿನಿಮಾ ರಿಲೀಸ್ಗೆ ರೆಡಿ ಇದೆ.
ಇದನ್ನೂ ಓದಿ: ‘ಪದ್ಮಾವತ್ ಸಿನಿಮಾಗಾದ ಗತಿಯೇ ನಿಮಗೂ ಆಗುತ್ತದೆ’; ಚಿತ್ರದ ಟೈಟಲ್ ಬದಲಿಸಲು ಅಕ್ಷಯ್ ಕುಮಾರ್ಗೆ ಬಂತು ಬೆದರಿಕೆ
Published On - 8:41 pm, Sun, 13 June 21