Allu Arjun: ಅಲ್ಲು ಅರ್ಜುನ್ ಜನ್ಮದಿನ; ಟಾಲಿವುಡ್​ನ ಈ ಸ್ಟಾರ್​ ಸಂಪಾದಿಸಿದ ಹಣ ಎಷ್ಟು?   

ಅಲ್ಲು ಅರ್ಜುನ್ ಅವರ ಆಸ್ತಿ ಬರೋಬ್ಬರಿ 460 ಕೋಟಿ ರೂಪಾಯಿ. ಕಳೆದ ವರ್ಷ ಅವರ ಆಸ್ತಿ 354 ಕೋಟಿ ರೂಪಾಯಿ ಇತ್ತು. ಏಕಾಏಕಿ ಅವರ ಆಸ್ತಿಯಲ್ಲಿ ಏರಿಕೆ ಕಂಡಿದೆ. ಒಂದೇ ವರ್ಷದಲ್ಲಿ ಸುಮಾರು 100 ಕೋಟಿ ರೂಪಾಯಿ ಏರಿಕೆ ಆಗಿದೆ.

Allu Arjun: ಅಲ್ಲು ಅರ್ಜುನ್ ಜನ್ಮದಿನ; ಟಾಲಿವುಡ್​ನ ಈ ಸ್ಟಾರ್​ ಸಂಪಾದಿಸಿದ ಹಣ ಎಷ್ಟು?   
ಅಲ್ಲು ಅರ್ಜುನ್
Updated By: ರಾಜೇಶ್ ದುಗ್ಗುಮನೆ

Updated on: Apr 08, 2024 | 7:14 AM

ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಇಂದು (ಏಪ್ರಿಲ್ 8) ಜನ್ಮದಿನ. ಅವರಿಗೆ ಈಗ 42 ವರ್ಷ. ಸಖತ್ ಸ್ಟೈಲಿಶ್ ಆಗಿರೋ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಇನ್​ಸ್ಟಾಗ್ರಾಮ್​​ನಲ್ಲಿ ಅವರನ್ನು ಎರಡು ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ದೊಡ್ಡ ಸಂಭಾವನೆ ಪಡೆಯೋ ಸೆಲೆಬ್ರಿಟಿಗಳಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರು. ಭವ್ಯ ಬಂಗಲೆ, ಐಷಾರಾಮಿ ಕಾರು, ಖಾಸಗಿ ಜೆಟ್ ಅವರ ಬಳಿ ಇದೆ. ಅವರ ತಂದೆ ಅಲ್ಲು ಅರವಿಂದ್ ಟಾಲಿವುಡ್​ನ ಖ್ಯಾತ ನಿರ್ಮಾಪಕರು.

ಅಲ್ಲು ಅರ್ಜುನ್ ಅವರ ಆಸ್ತಿ ಬರೋಬ್ಬರಿ 460 ಕೋಟಿ ರೂಪಾಯಿ. ಕಳೆದ ವರ್ಷ ಅವರ ಆಸ್ತಿ 354 ಕೋಟಿ ರೂಪಾಯಿ ಇತ್ತು. ಏಕಾಏಕಿ ಅವರ ಆಸ್ತಿಯಲ್ಲಿ ಏರಿಕೆ ಕಂಡಿದೆ. ಒಂದೇ ವರ್ಷದಲ್ಲಿ ಸುಮಾರು 100 ಕೋಟಿ ರೂಪಾಯಿ ಏರಿಕೆ ಆಗಿದೆ. ರಿಯಲ್ ಎಸ್ಟೇಟ್​ಗಳಲ್ಲಿ ಹೂಡಿಕೆ, ಸಿನಿಮಾ ಸಂಭಾವನೆ ಏರಿಕೆ ಅವರ ಆಸ್ತಿ ಹೆಚ್ಚಲು ಮುಖ್ಯ ಕಾರಣ.

‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಅಲ್ಲು ಅರ್ಜುನ್ ಬ್ಯುಸಿ ಇದ್ದಾರೆ. ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 200 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ. ಈ ಚಿತ್ರದ ಟೀಸರ್ ಇಂದು (ಏಪ್ರಿಲ್ 8) ಬಿಡುಗಡೆ ಆಗಲಿದೆ. ಇದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಚಿತ್ರದ ಸಂಭಾವನೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.

ಅಲ್ಲು ಅರ್ಜುನ್ ಅವರು ಹೈದರಾಬಾದ್​ನಲ್ಲಿ ದೊಡ್ಡ ಮ್ಯಾಷನ್ ಹೊಂದಿದ್ದಾರೆ. ಈ ಮನೆ ಸಖತ್ ದೊಡ್ಡದಾಗಿದೆ. ಈ ಮನೆಯಲ್ಲಿ ದೊಡ್ಡ ಗಾರ್ಡನ್ ಇದೆ. ಮುಂಜಾನೆ ಸಮಯವನ್ನು ಅವರು ಇಲ್ಲಿ ಕಳೆಯಲು ಬಯಸುತ್ತಾರೆ. ಇದರ ಜೊತೆಗೆ ಹಲವು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಅಲ್ಲು ಅರ್ಜುನ್ ಅವರು ಆಗಾಗ ವಿದೇಶಕ್ಕೆ ತೆರಳುತ್ತಾ ಇರುತ್ತಾರೆ. ಹೀಗಾಗಿ, ಅವರು ವಿದೇಶದಲ್ಲೂ ಮನೆ ಹೊಂದಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್ ಅವರಿಗೆ ಕಾರ್​ಗಳ ಬಗ್ಗೆ ಸಖತ್ ಕ್ರೇಜ್ ಇದೆ. ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು ಹೊಂದಿದ್ದಾರೆ. ಇದರ ಬೆಲೆ ಸುಮಾರು 7 ಕೋಟಿ ರೂಪಾಯಿ. ಹಮ್ಮರ್ ಎಚ್​ 2, ಜಾಗ್ವಾರ್ ಎಕ್ಸ್​ಜೆಎಲ್​, ರೇಂಜ್ ರೋವರ್ ವೋಗ್, ವೋಲ್ವೋ ಎಕ್ಸ್​ಸಿ90 ಕಾರುಗಳನ್ನು ಹೊಂದಿದ್ದಾರೆ. ಇವುಗಳ ಬೆಲೆ ಕೋಟ್ಯಂತರ ರೂಪಾಯಿ ಆಗಿದೆ.

ಇದನ್ನೂ ಓದಿ: ‘ಪುಷ್ಪ 2’ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ; ಜಾತ್ರೆಗೆ ಸಜ್ಜಾದ ಅಲ್ಲು ಅರ್ಜುನ್​ ಫ್ಯಾನ್ಸ್​

ಅಲ್ಲು ಅರ್ಜುನ್ ಅವರು ಮಿನಿ ವ್ಯಾನಿಟಿ ವ್ಯಾನ್ ಹೊಂದಿದ್ದಾರೆ. ಇದು ಕಸ್ಟಮೈಸ್ಡ್ ವ್ಯಾನ್ ಆಗಿದ್ದು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ. ಇಲ್ಲಿ ವಾಶ್ ರೂಂ, ಡ್ರೆಸ್ಸಿಂಗ್ ರೂಂ ಸೇರಿ ಅನೇಕ ಸೌಲಭ್ಯಗಳು ಇವೆ.

ಸಿನಿಮಾಗಳು

ಅಲ್ಲು ಅರ್ಜುನ್ ಅವರು ಪ್ರತಿ ಸಿನಿಮಾಗಳಿಗೆ ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಇದರ ಜೊತೆಗೆ ಅಭಿ ಬಸ್ ಸೇರಿದಂತೆ ಅನೇಕ ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರು ಅಲ್ಲು ಅರ್ಜುನ್ ಅವರು ದುಬೈನಲ್ಲಿ ತಮ್ಮದೇ ಮೇಣದ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಈ ಫೋಟೋಗಳು ವೈರಲ್ ಆಗಿವೆ. ಅಲ್ಲು ಅರ್ಜುನ್ ಅವರ ಹೊಸ ಸಿನಿಮಾಗಳ ಬಗ್ಗೆ ಇಂದು ಘೋಷಣೆ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ