100 ಕೋಟಿ ಕ್ಲಬ್ ಸೇರಿದ ಅನುಪಮಾ ಪರಮೇಶ್ವರನ್ ಸಿನಿಮಾ; ಕೈ ಹಿಡಿದ ಬೋಲ್ಡ್ ದೃಶ್ಯ
‘ಡಿಜೆ ಟಿಲ್ಲು’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ. ಇದಾದ ಬಳಿಕ ಅವರು ಒಂದು ಮಾತನ್ನು ಹೇಳಿದ್ದರು. ನನ್ನ ಸಿನಿಮಾ ಕೂಡ 100 ಕೋಟಿ ರೂಪಾಯಿ ಕ್ಲಬ್ ಸೇರಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು. ಅದು ಈಗ ಈಡೇರಿದೆ. ಮಾರ್ಚ್ 29ರಂದು ರಿಲೀಸ್ ಆಗಿರುವ ‘ಟಿಲ್ಲು ಸ್ಕ್ವೇರ್’ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ.
ಸ್ಟಾರ್ ಹೀರೋಗಳ ಜೊತೆ ಯುವ ಹೀರೋಗಳ ಸಿನಿಮಾಗಳೂ ಆಗಾಗ ಸದ್ದು ಮಾಡುತ್ತವೆ. ಇದಕ್ಕೆ ಹೊಸ ಸೇರ್ಪಡೆ ‘ಡಿಜೆ ಟಿಲ್ಲು’ ಸಿನಿಮಾ (DJ Tillu). ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲಯೂರೋ ಪ್ರಯತ್ನದಲ್ಲಿರುವ ಸಿದ್ದು ಜೊನ್ನಲಗಡ್ಡ ಹಾಗೂ ನಟಿ ಅನುಪಮಾ ಪರಮೇಶ್ವರನ್ ಒಟ್ಟಾಗಿ ಕಾಣಿಸಿಕೊಂಡಿರುವ ‘ಡಿಜೆ ಟಿಲ್ಲು’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಮೂಲಕ ಸಿನಿಮಾ ದಾಖಲೆ ಬರೆದಿದೆ. ಈ ವಾರ ಎರಡು ಸರ್ಕಾರಿ ರಜೆ ಇರುವುದರಿಂದ ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ.
‘ಡಿಜೆ ಟಿಲ್ಲು’ ಸಿನಿಮಾ ರಿಲೀಸ್ ಆಗಿ ಗೆಲುವು ಕಂಡಿದೆ. ಇದಾದ ಬಳಿಕ ಅವರು ಒಂದು ಮಾತನ್ನು ಹೇಳಿದ್ದರು. ನನ್ನ ಸಿನಿಮಾ ಕೂಡ 100 ಕೋಟಿ ರೂಪಾಯಿ ಕ್ಲಬ್ ಸೇರಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದರು. ಅದು ಈಗ ಈಡೇರಿದೆ. ಮಾರ್ಚ್ 29ರಂದು ರಿಲೀಸ್ ಆಗಿರುವ ‘ಟಿಲ್ಲು ಸ್ಕ್ವೇರ್’ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಇದನ್ನೂ ಓದಿ: ‘ಟಿಲ್ಲು ಸ್ಕ್ವೇರ್’ ಚಿತ್ರದಲ್ಲಿ ಸಖತ್ ಬೋಲ್ಡ್ ಅವತಾರ ತಾಳಿದ ಅನುಪಮಾ ಪರಮೇಶ್ವರನ್
ದೊಡ್ಡ ಸ್ಟಾರ್ ಹೀರೋಗಳ ಸಿನಿಮಾಗಳು 100 ಕೋಟಿ ಕ್ಲಬ್ ಸೇರುವುದು ದೊಡ್ಡ ವಿಚಾರ ಅಲ್ಲ. ಆದರೆ, ಎರಡನೇ ಟಯರ್ ದರ್ಜೆಯ ಹೀರೋಗಳ ಸಿನಿಮಾ ಇಷ್ಟು ಮೊತ್ತದ ಕಲೆಕ್ಷನ್ ಮಾಡೋದು ಎಂದರೆ ನಿಜಕ್ಕೂ ದೊಡ್ಡ ವಿಚಾರವೇ. ಸಿದ್ದು ಅವರು ‘ಟಿಲ್ಲು ಸ್ಕ್ವೇರ್’ ಮೂಲಕ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.
So Proud of Babai ♥️#StarBoy Siddu Boy 🔥 And fab start @MallikRam99 🤗 Congrats to the awesome @anupamahere , @SitharaEnts and the entire team on this Massive Success ♥️#TilluSquare pic.twitter.com/rBQBFURFMS
— Sundeep Kishan (@sundeepkishan) April 7, 2024
‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ದೃಶ್ಯಗಳು ಇವೆ. ಇದು ಸಿನಿಮಾಗೆ ಪೂರಕವಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಮುಗ್ಗರಿಸೋ ಸೂಚನೆ ಸಿಕ್ಕಿದೆ. ಇದು ‘ಟಿಲ್ಲು ಸ್ಕ್ವೇರ್’ ಚಿತ್ರಕ್ಕೆ ಸಹಕಾರಿ ಆಗಿದೆ. ‘ಫ್ಯಾಮಿಲಿ ಸ್ಟಾರ್’ ಚಿತ್ರದ ಎರಡನೇ ದಿನದ ಗಳಿಕೆಗಿಂತ ‘ಟಿಲ್ಲು ಸ್ಕ್ವೇರ್’ ಚಿತ್ರದ 9ನೇ ದಿನದ ಕಲೆಕ್ಷನ್ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ