ಅಕ್ಟೋಬರ್ನಲ್ಲಿ ಬರಲಿದೆ ರಜನಿಕಾಂತ್ ನಟನೆಯ ‘ವೆಟ್ಟೈಯಾನ್’; ‘ದೇವರ’ ಜೊತೆ ಫೈಟ್?
ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಟಿ.ಎಸ್. ಜ್ಞಾನವೇಲ್ ನಿರ್ದೇಶನ ಮಾಡಿದ್ದರು. ಅವರು ‘ವೆಟ್ಟೈಯಾನ್' ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣದಿಂದಲೂ ಫ್ಯಾನ್ಸ್ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ತಮಿಳು ನಟ ರಜನಿಕಾಂತ್ (Rajinikanth) ನಟನೆಯ 170ನೇ ಸಿನಿಮಾ ಆಗಿ ‘ವೆಟ್ಟೈಯಾನ್’ ಸಿನಿಮಾ ಸೆಟ್ಟೇರಿದೆ. ‘ಜೈಲರ್’ ಬಳಿಕ ಹೀರೋ ಆಗಿ ಅವರು ಒಪ್ಪಿಕಂಡ ಸಿನಿಮಾ ಇದು ಎಂಬ ಕಾರಣಕ್ಕೂ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾಗೆ ಭರದಿಂದ ಶೂಟಿಂಗ್ ನಡೆಯುತ್ತಿದೆ. ಈಗ ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಮಹತ್ವದ ಘೋಷಣೆ ಮಾಡಿದೆ. ಇದೇ ವರ್ಷ ಅಕ್ಟೋಬರ್ ತಿಂಗಳಲ್ಲಿ ‘ವೆಟ್ಟೈಯಾನ್’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ. ‘ಜೈಲರ್’ ಸಿನಿಮಾ ಕಳೆದ ಆಗಸ್ಟ್ ತಿಂಗಳಲ್ಲಿ ರಿಲೀಸ್ ಆಗಿತ್ತು. ಇದಾದ ಒಂದು ವರ್ಷಗಳ ಬಳಿಕ ‘ವೆಟ್ಟೈಯಾನ್’ ಬಿಡುಗಡೆ ಆಗುತ್ತಿದೆ.
ಸೂರ್ಯ ನಟನೆಯ ‘ಜೈ ಭೀಮ್’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಟಿ.ಎಸ್. ಜ್ಞಾನವೇಲ್ ನಿರ್ದೇಶನ ಮಾಡಿದ್ದರು. ಅವರು ‘ವೆಟ್ಟೈಯಾನ್’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಕಾರಣದಿಂದಲೂ ಫ್ಯಾನ್ಸ್ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಕ್ಟೋಬರ್ನಲ್ಲಿ ತೆಲುಗಿನ ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಹೀಗಾಗಿ ಬಾಕ್ಸ್ ಆಫೀಸ್ ಕ್ಲ್ಯಾಶ್ ಆಗೋ ಸೂಚನೆ ಸಿಕ್ಕಿದೆ.
ರಜನಿಕಾಂತ್ ಮಾತ್ರವಲ್ಲದೆ ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. 1991ರಲ್ಲಿ ರಿಲೀಸ್ ಆದ ‘ಹಮ್’ ಸಿನಿಮಾದಲ್ಲಿ ರಜನಿ ಹಾಗೂ ಅಮಿತಾಭ್ ಒಟ್ಟಾಗಿ ತೆರೆ ಹಂಚಿಕೊಂಡಿದ್ದರು. ಇವರನ್ನು ಮತ್ತೊಮ್ಮೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್ಸ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.
‘ವೆಟ್ಟೈಯಾನ್’ ಚಿತ್ರದಲ್ಲಿ ರಜನಿಕಾಂತ್, ಅಮಿತಾಭ್ ಬಚ್ಚನ್ ಮಾತ್ರವಲ್ಲದೆ ತೆಲುಗು ನಟ ರಾಣಾ ದಗ್ಗುಬಾಟಿ, ಮಲಯಾಳಂ ನಟ ಫಹಾದ್ ಫಾಸಿಲ್, ಮಂಜು ವಾರಿಯರ್, ರಿತಿಕಾ ಸಿಂಗ್, ರೋಹಿಣಿ, ಅಭಿರಾಮಿ, ವಿಜಯನ್, ಜಿಎಂ ಸುಂದರ್, ರಮೇಶ್ ತಿಲಕ್, ರಾವ್ ರಮೇಶ್, ರಕ್ಷಣ್ ಸೇರಿದಂತೆ ಇನ್ನೂ ಅನೇಕ ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ: ವಿಮಾನದ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ ರಜನಿಕಾಂತ್; ವಿಡಿಯೋ ವೈರಲ್
‘ವೆಟ್ಟೈಯಾನ್’ ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಎಸ್.ಆರ್. ಕಥಿರ್ ಕ್ಯಾಮೆರಾ ನಿರ್ವಹಿಸಿದ್ದಾರೆ. ಫಿಲೋಮಿನ್ ರಾಜ್ ಸಂಕಲನ ಈ ಚಿತ್ರಕ್ಕೆ ಇದೆ. ತಿರುವನಂತಪುರಂ, ತಿರುನೆಲ್ವೇಲಿ, ಮುಂಬೈ, ಚೆನ್ನೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಸಿನಿಮಾದ ಶೂಟಿಂಗ್ ನಡೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ