AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನದ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ ರಜನಿಕಾಂತ್​; ವಿಡಿಯೋ ವೈರಲ್​

ಎಕಾನಮಿ ಕ್ಲಾಸ್​ನಲ್ಲಿ ರಜನಿಕಾಂತ್​ ಪ್ರಯಾಣ ಮಾಡಿದ್ದನ್ನು ನೋಡಿ ನೆಟ್ಟಿಗರಿಗೆ ಅಚ್ಚರಿಯಾಗಿದೆ. ಈ ವಿಡಿಯೋ ವೈರಲ್​ ಆಗಿದೆ. ಐಷಾರಾಮಿ ಸೌಲಭ್ಯಗಳು ಇರುವ ಬಿಸ್ನೆಸ್​ ಕ್ಲಾಸ್ ಬಿಟ್ಟು ಕಡಿಮೆ ಅನುಕೂಲಗಳಿರುವ ಸಾಮಾನ್ಯ ದರ್ಜೆಯಲ್ಲೇ ರಜನಿಕಾಂತ್​ ಅವರು ಪ್ರಯಾಣ ಮಾಡಿದ್ದಾರೆ. ತಮ್ಮ ಜೊತೆಯಲ್ಲಿ ಪ್ರಯಾಣ ಮಾಡಿದ ಜನರೊಂದಿಗೆ ಅವರು ಮಾತನಾಡಿದ್ದಾರೆ.

ವಿಮಾನದ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸಿದ ರಜನಿಕಾಂತ್​; ವಿಡಿಯೋ ವೈರಲ್​
ಸಾಮಾನ್ಯ ದರ್ಜೆಯಲ್ಲಿ ರಜನಿಕಾಂತ್​ ಪ್ರಯಾಣ
ಮದನ್​ ಕುಮಾರ್​
|

Updated on: Mar 01, 2024 | 6:35 PM

Share

ನಟ ರಜನಿಕಾಂತ್​ (Rajinikanth) ಅವರು ಪರದೆ ಮೇಲೆ ಸೂಪರ್​ ಸ್ಟಾರ್ ಆಗಿ ಮಿಂಚುತ್ತಾರೆ. ಆದರೆ ರಿಯಲ್​ ಲೈಫ್​ನಲ್ಲಿ ಸಾಧ್ಯವಾದಷ್ಟು ಸರಳವಾಗಿ ಇರಲು ಅವರು ಬಯಸುತ್ತಾರೆ. ಅದಕ್ಕೆ ಈಗಾಗಲೇ ಅನೇಕ ನಿದರ್ಶನಗಳು ಸಿಕ್ಕಿವೆ. ಈಗ ರಜನಿಕಾಂತ್​ ಅವರು ಎಷ್ಟು ಸಿಂಪಲ್​ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿ ಆಗಿದೆ. ಆಂದ್ರದ ಕಡಪದಿಂದ ಇಂಡಿಗೋ ವಿಮಾನದ ಸಾಮಾನ್ಯ ದರ್ಜೆಯಲ್ಲಿ (Economy Clasa) ಅವರು ಪ್ರಯಾಣ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋ (Rajinikanth Viral Video) ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುವ ಮೂಲಕ ರಜನಿಕಾಂತ್​ ಅವರ ಸರಳತೆಯನ್ನು ಕೊಂಡಾಡಿದ್ದಾರೆ.

ರಜನಿಕಾಂತ್​ ಅವರಿಗೆ ಈಗ 73 ವರ್ಷ ವಯಸ್ಸು. ಅಲ್ಲದೇ, ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳೂ ಇವೆ. ಅವರನ್ನು ಕಂಡರೆ ಅಭಿಮಾನಿಗಳು ಫೋಟೋಗಾಗಿ ಮುತ್ತಿಕೊಳ್ಳುತ್ತಾರೆ. ಅಂಥ ಸಂದರ್ಭಗಳಲ್ಲಿ ಅವರಿಗೆ ಕಿರಿಕಿರಿ ಆಗಬಹುದು. ಹಾಗಿದ್ದರೂ ಕೂಡ ಅವರು ವಿಮಾನದ ಸಾಮಾನ್ಯ ದರ್ಜೆಯಲ್ಲಿ ಇತರೆ ಪ್ರಯಾಣಿಕರ ಜೊತೆ ಕುಳಿತುಕೊಂಡಿದ್ದಾರೆ. ಅಲ್ಲಿರುವ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್​ ಅವರನ್ನು ಹತ್ತಿರದಿಂದ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ರಜನಿಕಾಂತ್​ ವೈರಲ್​ ವಿಡಿಯೋ:

‘ಸೂಪರ್​ ಸ್ಟಾರ್​’ ರಜನಿಕಾಂತ್​ ಅವರ ಬಳಿ ಬೇಕಾದಷ್ಟು ಹಣ ಇದೆ. ಅವರನ್ನು ಶೂಟಿಂಗ್​ಗೆ ಕರೆಸಿಕೊಳ್ಳುವ ನಿರ್ಮಾಪಕರು ಪ್ರೈವೆಟ್​ ಜೆಟ್​ನ ವ್ಯವಸ್ಥೆಯನ್ನು ಬೇಕಿದ್ದರೂ ಮಾಡುತ್ತಾರೆ. ಆದರೂ ಕೂಡ ರಜನಿಕಾಂತ್​ ಅವರು ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣ ಮಾಡಿದ್ದನ್ನು ನೋಡಿ ನೆಟ್ಟಿಗರಿಗೆ ಅಚ್ಚರಿ ಆಗಿದೆ. ಬಿಸ್ನೆಸ್​ ಕ್ಲಾಸ್​ಗೆ ಹೋಲಿಸಿದರೆ ಎಕಾನಮಿ ಕ್ಲಾಸ್​ನಲ್ಲಿ ಅನುಕೂಲಗಳು ಕಡಿಮೆ ಇರುತ್ತದೆ. ಹಾಗಿದ್ದರೂ ಕೂಡ ರಜನಿಕಾಂತ್​ ಅವರು ಸಾಮಾನ್ಯ ದರ್ಜೆಯಲ್ಲೇ ಪ್ರಯಾಣ ಮಾಡಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರೇ ಇಲ್ಲದೇ ರಜನಿಕಾಂತ್​ ಸಿನಿಮಾ ಕ್ಯಾನ್ಸಲ್​; ‘ಲಾಲ್​ ಸಲಾಂ’ ಚಿತ್ರಕ್ಕೆ ಹಿನ್ನಡೆ

2023ರಲ್ಲಿ ಬಿಡುಗಡೆಯಾದ ‘ಜೈಲರ್​’ ಸಿನಿಮಾದಿಂದ ರಜನಿಕಾಂತ್​ ಅವರು ಭರ್ಜರಿ ಯಶಸ್ಸು ಕಂಡರು. ಆದರೆ ಈ ವರ್ಷದ ಆರಂಭದಲ್ಲಿ ಅವರಿಗೆ ಸ್ವಲ್ಪ ಹಿನ್ನಡೆ ಉಂಟಾಯಿತು. ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ‘ಲಾಲ್​ ಸಲಾಂ’ ಸಿನಿಮಾ ಹೀನಾಯವಾಗಿ ಸೋತಿದೆ. ಈಗ ‘ವೆಟ್ಟೈಯಾನ್​’ ಸಿನಿಮಾದ ಕೆಲಸಗಳಲ್ಲಿ ರಜನಿಕಾಂತ್ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ತುಂಬಾ ನಿರೀಕ್ಷೆ ಇದೆ.

‘ವೆಟ್ಟೈಯಾನ್​’ ಸಿನಿಮಾಗೆ ‘ಜೈ ಭೀಮ್​’ ಖ್ಯಾತಿಯ ನಿರ್ದೇಶಕ ಟಿ.ಜೆ. ಜ್ಞಾನವೇಲ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್​ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದ ಟೈಟಲ್​ ಟೀಸರ್​ ಬಿಡುಗಡೆಯಾಗಿ ಜನರ ಮೆಚ್ಚಿಗೆ ಗಳಿಸಿದೆ. ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, ಫಹಾದ್​ ಫಾಸಿಲ್​, ರಾಣಾ ದಗ್ಗುಬಾಟಿ, ಮಂಜು ವಾರಿಯರ್​, ಕಿಶೋರ್​ ಮುಂತಾದ ಕಲಾವಿದರು ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ