ಕಟೌಟ್ ನಿರ್ಮಾಣದಲ್ಲೂ ಅಲ್ಲು ಅರ್ಜುನ್ ಫ್ಯಾನ್ಸ್ ದಾಖಲೆ; ತಲೆ ಎತ್ತಿತು 108 ಅಡಿ ಕಟೌಟ್

ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ನಟನೆಯ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಫ್ಯಾನ್ಸ್ ಅಭಿಮಾನದಿಂದ ಕಾಯುತ್ತಾರೆ. ಈಗ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ರಿಲೀಸ್​ಗಾಗಿ ಕಾಯುತ್ತಿದ್ದಾರೆ. ಈ ಚಿತ್ರಕ್ಕಾಗಿ ವಿವಿಧ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳು ಈಗ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುತ್ತಿದ್ದಾರೆ.

ಕಟೌಟ್ ನಿರ್ಮಾಣದಲ್ಲೂ ಅಲ್ಲು ಅರ್ಜುನ್ ಫ್ಯಾನ್ಸ್ ದಾಖಲೆ; ತಲೆ ಎತ್ತಿತು 108 ಅಡಿ ಕಟೌಟ್
ಅಲ್ಲು ಅರ್ಜುನ್

Updated on: Nov 25, 2024 | 1:11 PM

ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ 2’ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇನ್ನೇನು 10 ದಿನಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮೊದಲೇ ಅಭಿಮಾನಿಗಳು ಸಿನಿಮಾನ ಸ್ವಾಗತಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ದೊಡ್ಡ ದೊಡ್ಡ ಕೌಟಟ್ ನಿರ್ಮಾಣ ಮಾಡುತ್ತಿದ್ದಾರೆ. ಈಗ ಈ ವಿಚಾರದಲ್ಲಿ ಫ್ಯಾನ್ಸ್ ದಾಖಲೆಯನ್ನೇ ಬರೆದಿದ್ದಾರೆ. ಬರೋಬ್ಬರಿ 108 ಅಡಿಯ ಕಟೌಟ್ ನಿಲ್ಲಿಸಿ ಎಲ್ಲರಲ್ಲೂ ಫ್ಯಾನ್ಸ್ ಅಚ್ಚರಿ ಮೂಡಿಸಿದ್ದಾರೆ.

ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ನಟನೆಯ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದರೆ ಫ್ಯಾನ್ಸ್ ಅಭಿಮಾನದಿಂದ ಕಾಯುತ್ತಾರೆ. ಈಗ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ರಿಲೀಸ್​ಗಾಗಿ ಕಾಯುತ್ತಿದ್ದಾರೆ. ಈ ಚಿತ್ರಕ್ಕಾಗಿ ವಿವಿಧ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳು ಈಗ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುತ್ತಿದ್ದಾರೆ.

ತೆಲುಗು ಸಿನಿಮಾದಲ್ಲಿ ಅನೇಕ ಸ್ಟಾರ್ ಹೀರೋಗಳು ಬಂದು ಹೋಗಿದ್ದಾರೆ. ಅವರ ಅಭಿಮಾನಿಗಳು ಈಗಾಗಲೇ ಸಾಕಷ್ಟು ಕಟೌಟ್​ಗಳನ್ನು ನಿರ್ಮಾಣ ಮಾಡಿದ್ದರು. ಆದರೆ, ಇಷ್ಟು ದೊಡ್ಡ ಮಟ್ಟದ ಕಟೌಟ್ ನಿರ್ಮಾಣ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಅವರ ಬರೋಬ್ಬರಿ 108 ಅಡಿ ಎತ್ತರ ಹಾಗೂ 16 ಅಡಿ ಅಗಲದ ಕೌಟೌಟ್ ನಿರ್ಮಾಣ ಮಾಡಲಾಗಿದೆ. ವಿಶಾಖಪಟ್ಟಣದ ಸಂಗಮ್ ಥಿಯೇಟರ್​ನಲ್ಲಿ ಈ ಕಟೌಟ್ ತಲೆ ಎತ್ತಿದೆ.

ಈ ಮೊದಲು ಯಾವ ಹೀರೋಗೂ ಇಷ್ಟು ದೊಡ್ಡ ಮಟ್ಟದ ಕಟೌಟ್ ನಿರ್ಮಾಣ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಅವರಿಗೆ ಇಂಥ ಕಟೌಟ್ ನಿರ್ಮಾಣ ಆಗಿರೋದು ಅವರ ಫ್ಯಾನ್ಸ್ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: Kissik Song: ‘ಪುಷ್ಪ 2’ ಚಿತ್ರದ ಕಿಸಿಕ್ ಹಾಡು ರಿಲೀಸ್; ಮಿಂಚಿದ ಶ್ರೀಲೀಲಾ

‘ಪುಷ್ಪ 2’ ಚಿತ್ರ ಟ್ರೇಲರ್ ಮೂಲಕ ಎಲ್ಲರ ಗಮನ ಸೆಳೆದಿದೆ. ಈ ಸಿನಿಮಾ 1000 ಕೋಟಿ ರೂಪಾಯಿ ಬಿಸ್ನೆಸ್ ಮಾಡುವ ನಿರೀಕ್ಷೆ ಇದೆ. ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು ಡಿಸೆಂಬರ್ 5ರಂದು ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.