AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ಯಾರೂ ಸಿನಿಮಾ ಆಫರ್ ಮಾಡಿರಲಿಲ್ಲ’; ಸುಕುಮಾರ್ ಸಹಾಯ ನೆನೆದ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮೊದಲ ಬಾರಿ ಒಂದಾಗಿದ್ದು ‘ಆರ್ಯ’ ಸಿನಿಮಾದಲ್ಲಿ. ಇದು ಅಲ್ಲು ಅರ್ಜುನ್ ಅವರ ಎರಡನೇ ಸಿನಿಮಾ ಆಗಿತ್ತು. ಸುಕುಮಾರ್​ಗೆ ಮೊದಲ ಸಿನಿಮಾ ಆಗಿತ್ತು. ಈ ಚಿತ್ರ ರಿಲೀಸ್ ಆಗಿದ್ದು 2004ರಲ್ಲಿ. ಆರಂಭದ ದಿನಗಳ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ.  

‘ನನಗೆ ಯಾರೂ ಸಿನಿಮಾ ಆಫರ್ ಮಾಡಿರಲಿಲ್ಲ’; ಸುಕುಮಾರ್ ಸಹಾಯ ನೆನೆದ ಅಲ್ಲು ಅರ್ಜುನ್
ಸುಕುಮಾರ್-ಅಲ್ಲು ಅರ್ಜುನ್
ರಾಜೇಶ್ ದುಗ್ಗುಮನೆ
|

Updated on:Nov 25, 2024 | 2:47 PM

Share

ಅಲ್ಲು ಅರ್ಜುನ್ ಅವರು ಸ್ಟಾರ್ ಹೀರೋ ಆಗಿದ್ದಾರೆ. ಅವರಿಗೆ ಸಖತ್ ಜನಪ್ರಿಯತೆ ಇದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ಅವರಿಗೆ ಫ್ಯಾನ್ಸ್ ಇದ್ದಾರೆ. ಆರಂಭದಲ್ಲಿ ಅವರಿಗೆ ಆಫರ್​ಗಳೇ ಬರುತ್ತಿರಲಿಲ್ಲವಂತೆ. ಈ ಬಗ್ಗೆ ಅಲ್ಲು ಅರ್ಜುನ್ ಓಪನ್ ಆಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದು ಸುಕುಮಾರ್ ಎಂಬುದನ್ನು ಹೇಳೋಕೆ ಅಲ್ಲು ಅರ್ಜುನ್ ಮರೆತಿಲ್ಲ.

ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮೊದಲ ಬಾರಿ ಒಂದಾಗಿದ್ದು ‘ಆರ್ಯ’ ಸಿನಿಮಾದಲ್ಲಿ. ಇದು ಅಲ್ಲು ಅರ್ಜುನ್ ಅವರ ಎರಡನೇ ಸಿನಿಮಾ ಆಗಿತ್ತು. ಸುಕುಮಾರ್​ಗೆ ಮೊದಲ ಸಿನಿಮಾ ಆಗಿತ್ತು. ಈ ಚಿತ್ರ ರಿಲೀಸ್ ಆಗಿದ್ದು 2004ರಲ್ಲಿ. ಈ ಸಿನಿಮಾ ಸೂಪರ್ ಹಿಟ್ ಆಯಿತು. 2009ರಲ್ಲಿ ‘ಆರ್ಯ 2’ ಚಿತ್ರಕ್ಕಾಗಿ ಒಂದಾದರು. 2021ರಲ್ಲಿ ರಿಲೀಸ್ ಆದ ‘ಪುಷ್ಪ’ ಚಿತ್ರಕ್ಕೆ ಇವರು ಒಂದಾದರು. ಈಗ ನಾಲ್ಕನೇ ಬಾರಿಗೆ ಇವರು ಒಂದಾಗಿದ್ದಾರೆ. ಈ ವೇಳೆ ಆರಂಭದ ದಿನಗಳ ಬಗ್ಗೆ ಅಲ್ಲು ಅರ್ಜುನ್ ಮಾತನಾಡಿದ್ದಾರೆ.

ಚೆನ್ನೈನಲ್ಲಿ ‘ಪುಷ್ಪ 2’ ಈವೆಂಟ್ ನಡೆದಿದೆ. ಈ ವೇಳೆ ಮಾತನಾಡಿದ ಅಲ್ಲು ಅರ್ಜುನ್, ‘ಗಂಗೋತ್ರಿ ಸಿನಿಮಾ ಮೂಲಕ ನಾನು ಚಿತ್ರರಂಗಕ್ಕೆ ಕಾಲಿಟ್ಟೆ. ನಿರ್ದೇಶಕ ರಾಘವೇಂದ್ರ ರಾವ್ ಸೂಪರ್ ಹಿಟ್ ಆದರು. ಆದರೆ, ನಟನಾಗಿ ನಾನು ನಟನಾಗಿ ಯಶಸ್ಸು ಕಾಣಲಿಲ್ಲ’ ಎಂದಿದ್ದಾರೆ ಅವರು.

‘ಸಿನಿಮಾ ರಿಲೀಸ್ ಆದ ಬಳಿಕ ನನ್ನ ಜೊತೆ ಕೆಲಸ ಮಾಡಲು ಬರಲೇ ಇಲ್ಲ. ಆದರೆ, ಹೊಸ ನಿರ್ದೇಶಕ ಬಂದು ನನಗೆ ಆರ್ಯ ಸಿನಿಮಾದಲ್ಲಿ ಕೆಲಸ ಮಾಡಲು ಆಫರ್ ಕೊಟ್ಟರು. ಅದಾದ ಬಳಿಕ ನಾನು ತಿರುಗಿ ನೋಡಲೇ ಇಲ್ಲ’ ಎಂದಿದ್ದಾರೆ ಅವರು.

‘ನಾನು ನನ್ನ ಕರಿಯರ್​ನ ಹಿಂದಿರುಗಿ ನೋಡಿದಾಗ ಓರ್ವ ವ್ಯಕ್ತಿ ನನ್ನ ಮೇಲೇ ತುಂಬಾನೇ ಪರಿಣಾಮ ಬೀರಿದ್ದಾರೆ. ಆ ವ್ಯಕ್ತಿ ಸುಕುಮಾರ್. ಅವರನ್ನು ನಾನು ಮಿಸ್ ಮಾಡಿಕೊಳ್ಳುತ್ತೇನೆ. ನಾವು ಈ ಪ್ರಯಾಣದಲ್ಲಿ ಒಟ್ಟಿಗೆ ಇದ್ದೇವೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಕಟೌಟ್ ನಿರ್ಮಾಣದಲ್ಲೂ ಅಲ್ಲು ಅರ್ಜುನ್ ಫ್ಯಾನ್ಸ್ ದಾಖಲೆ; ತಲೆ ಎತ್ತಿತು 108 ಅಡಿ ಕಟೌಟ್

ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಧ್ಯೆ ಯಾವುದೂ ಸರಿ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಮಧ್ಯೆ ಒಳ್ಳೆಯ ಗೆಳೆತನ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:47 pm, Mon, 25 November 24

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ