ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಲ್ಲು ಅರ್ಜುನ್, ವೈದ್ಯನ ಹೇಳಿಕೆ

Allu Arjun: ಭಾರತದ ಹ್ಯಾಂಡ್ಸಮ್ ನಟರಲ್ಲಿ ಅಲ್ಲು ಅರ್ಜುನ್ ಸಹ ಒಬ್ಬರು. ಆದರೆ ಅಲ್ಲು ಅರ್ಜುನ್, ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಅಥವಾ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಸುದ್ದಿ ಕುರಿತು ಅಲ್ಲು ಅರ್ಜುನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಲ್ಲು ಅರ್ಜುನ್, ವೈದ್ಯನ ಹೇಳಿಕೆ

Updated on: Jul 29, 2024 | 2:53 PM

ಸಿನಿಮಾ, ಧಾರಾವಾಹಿ ನಟಿಯರು ಚೆಂದವಾಗಿ ಕಾಣಲು ಪ್ಲಾಸ್ಟಿಕ್ ಸರ್ಚರಿ ಅಥವಾ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ ಅದು ಸಾಮಾನ್ಯ ಎಂಬಂತಾಗಿದೆ. ಅನುಷ್ಕಾ ಶರ್ಮಾ, ಬಿಪಾಷಾ ಬಸು, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಈಗಿನ ಹಲವು ನಟಿಯರು ಚೆನ್ನಾಗಿ ಕಾಣಲು ಸರ್ಜರಿಗಳನ್ನು ಮಾಡಿಸಿಕೊಂಡಿದ್ದಾರೆ. ಆದರೆ ಸಿನಿಮಾ ನಟರು ಈ ಸರ್ಜರಿಗಳನ್ನು ಮಾಡಿಸಿಕೊಂಡಿರಲಿಲ್ಲ. ಆದರೆ ಇದೀಗ ವೈದ್ಯರೊಬ್ಬರು ಅಲ್ಲು ಅರ್ಜುನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ. ಆದರೆ ಅಲ್ಲುಅರ್ಜುನ್ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಂಡಿದ್ದಾರೆಂಬ ವಿಷಯದ ಬಗ್ಗೆ ಟ್ರೋಲ್ ಮಾಡುತ್ತಿರುವವರ ವಿರುದ್ಧ ಅಲ್ಲು ಅರ್ಜುನ್ ಅಭಿಮಾನಿಗಳು ಗರಂ ಆಗಿದ್ದಾರೆ.

ರೆಡಿಟ್​ನಲ್ಲಿ, ತಾನೊಬ್ಬ ವೈದ್ಯ ಅಥವಾ ಸರ್ಜನ್ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ, ಇತ್ತೀಚೆಗೆ ದಕ್ಷಿಣ ಭಾರತದ ನಟರು ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲು ಅರ್ಜುನ್ ಸಹ ತನ್ನ ಮೂಗು ಹಾಗೂ ಕೆಳದವಡೆ (ಜಾ ಲೈನ್) ಸರ್ಜರಿ ಮಾಡಿಸಿಕೊಂಡಿದ್ದಾರೆ. ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದರಿಂದಲೇ ಅಲ್ಲು ಅರ್ಜುನ್ ಅಷ್ಟು ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸ್ಟೈಲಿಶ್ ಸ್ಟಾರ್ ಎಂದು ಮೆರೆಯುತ್ತಿದ್ದ ಅಲ್ಲು ಅರ್ಜುನ್​ಗೆ ಶಾಕ್​ ಕೊಟ್ಟಿದ್ದ ಯಶ್

ಅಲ್ಲು ಅರ್ಜುನ್ ಕುರಿತಾಗಿ ರೆಡಿಟ್​ನ ಬಳಕೆದಾರ ಮಾಡಿರುವ ಈ ಹೇಳಿಕೆ ವೈರಲ್ ಆಗುತ್ತಿದ್ದು, ಇದೇ ಹೇಳಿಕೆ ಇಟ್ಟುಕೊಂಡು ಹಲವರು ಅಲ್ಲು ಅರ್ಜುನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಒಳ್ಳೆಯ ವೈದ್ಯರನ್ನೇ ಅಲ್ಲು ಅರ್ಜುನ್ ಆಯ್ಕೆ ಮಾಡಿಕೊಂಡಿದ್ದಾರೆ. ಚೆನ್ನಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಕೇವಲ ಮುಖವನ್ನಷ್ಟೆ ಸರ್ಜರಿ ಮಾಡಿಸಿಕೊಂಡಿದ್ದಾರಾ? ಆ ಬಾಡಿ ಫಿಟ್​ನೆಸ್ ಸಹ ಫೇಕ್ ಆಗಿರಬಹುದಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಅಲ್ಲು ಅರ್ಜುನ್ ಅವರನ್ನು ಟ್ರೋಲ್ ಮಾಡುವವರ ವಿರುದ್ಧ ಅವರ ಅಭಿಮಾನಿಗಳು ಗರಂ ಆಗಿದ್ದು, ಅಲ್ಲು ಅರ್ಜುನ್ ಯಾವುದೇ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿಲ್ಲ ಎಂದಿದ್ದಾರೆ.

ಅಲ್ಲು ಅರ್ಜುನ್ ಮೊದಲ ಸಿನಿಮಾ ‘ಗಂಗೋತ್ರಿ’ಯಲ್ಲಿ ‘ಹೀರೋ’ ರೀತಿ ಕಾಣುತ್ತಿರಲಿಲ್ಲ. ಹಳ್ಳಿಯ ಪೆದ್ದ ಹುಡುಗನಂತಿದ್ದರು. ಆ ಪಾತ್ರವೂ ಸಹ ಹಾಗೆಯೇ ಇತ್ತು. ‘ಆರ್ಯ’ ಸಿನಿಮಾದಲ್ಲಿ ಅವರ ಮುಖಚರ್ಹೆಯೇ ಬದಲಾಗಿತ್ತು. ಇತ್ತೀಚೆಗಿನ ಅವರ ಸಿನಿಮಾಗಳಲ್ಲಿ ಮತ್ತೆ ಅವರ ಮುಖ ಚರ್ಹೆ ಬದಲಾದಂತೆ ಅನಿಸುತ್ತಿದೆ. ಇದು ಕಾಲಕ್ಕೆ ತಕ್ಕಂತೆ ಆಗಿರುವ ಬದಲಾವಣೆಯೇ ಅಥವಾ ಸರ್ಜರಿ ಪರಿಣಾಮವೇ ಅವರೇ ಹೇಳಬೇಕು.

ಅಲ್ಲು ಅರ್ಜುನ್ ಪ್ರಸ್ತುತ ‘ಪುಷ್ಪ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಹಿಂದಿಯ ಸಿನಿಮಾ ಒಂದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದಾದ ಬಳಿಕ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಸಾಧ್ಯತೆಯೂ ಇದೆ. ‘ಪುಷ್ಪ 2’ ಸಿನಿಮಾ ಈ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ