ಅಲ್ಲು ಅರ್ಜುನ್ (Allu Arjun) ಅವರು ಬೇಡಿಕೆಯ ಹೀರೋ. ಅವರಿಗೆ ಕೇವಲ ಟಾಲಿವುಡ್ನಲ್ಲಿ ಮಾತ್ರವಲ್ಲ ಭಾರತದಾದ್ಯಂತ ಅವರನ್ನು ಆರಾಧಿಸುವವರಿದ್ದಾರೆ. ತಮ್ಮ ಮ್ಯಾನರಿಸಂ, ನಟನೆ, ಡ್ಯಾನ್ಸ್, ಸ್ಟೈಲ್ ಮೂಲಕ ಅವರು ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ. ‘ಪುಷ್ಪ’ ಚಿತ್ರದಲ್ಲಿ (Pushpa Movie) ಅವರು ಮಾಡಿದ ಪುಷ್ಪರಾಜ್ ಪಾತ್ರಕ್ಕೆ ಅವರು ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಇನ್‌ಸ್ಟಾಗ್ರಾಮ್‌ನಲ್ಲಿ ಸದಾ ಸಕ್ರಿಯವಾಗಿರುವ ಅಲ್ಲು ಅರ್ಜುನ್ ಅಭಿಮಾನಿಗಳೊಂದಿಗೆ ಟಚ್ನಲ್ಲಿ ಇರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರನ್ನು 2.35 ಕೋಟಿ ಜನರು ಹಿಂಬಾಲಿಸುತ್ತಾರೆ. ಅವರು ಶೇರ್ ಮಾಡುವ ಪೋಸ್ಟ್‌ಗೆ ಲಕ್ಷಗಟ್ಟಲೆ ಲೈಕ್ಸ್ ಸಿಗುತ್ತವೆ. ಈಗ ಅವರು ಅಭಿಮಾನಿಯ ಫಾಲೋವರ್ಸ್ ಹೆಚ್ಚಲು ಸಹಕಾರಿ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲ್ಲು ಅರ್ಜುನ್ ಅವರು ಅಭಿಮಾನಿಗಳ ಜೊತೆ ಫ್ರೆಂಡ್ಲಿ ಆಗಿರೋಕೆ ಇಷ್ಟಪಡುತ್ತಾರೆ. ಯಾರಾದರೂ ಸೆಲ್ಫಿ ಕೇಳಿದರೆ ನಗುಮುಖದಿಂದ ಪೋಸ್ ಕೊಡುತ್ತಾರೆ. ಈ ವಿಚಾರದಲ್ಲಿ ಅವರು ಸಿಟ್ಟು ಮಾಡಿಕೊಂಡಿದ್ದು ತುಂಬಾನೇ ಕಡಿಮೆ. ಈಗ ಅಲ್ಲು ಅರ್ಜುನ್ ಅವರ ಮನಸ್ಸು ಎಷ್ಟು ದೊಡ್ಡದು ಎಂಬುದಕ್ಕೆ ಈ ವೈರಲ್ ವಿಡಿಯೋನೇ ಸಾಕ್ಷಿ.
ಲೇಡಿ ಫ್ಯಾನ್ ಅಶ್ವಿನಿ ಎಂಬುವವರ ಎದುರು ಅಲ್ಲು ಅರ್ಜುನ್ ನಿಂತಿದ್ದಾರೆ. ‘ನಿಮಗೆ ಹೆಚ್ಚು ಫಾಲೋವರ್ಸ್ ಬರಲು ನಾನು ಒಳ್ಳೆಯ ವಿಡಿಯೋ ಮಾಡುತ್ತೇನೆ. ನಿಮಗೆ ಎಷ್ಟು ಫಾಲೋವರ್ಸ್ ಬೇಕು? ಈಗ ಎಷ್ಟು ಜನ ಇದ್ದಾರೆ’ ಎಂದು ಅಲ್ಲು ಅರ್ಜುನ್ ಕೇಳಿದ್ದಾರೆ. ಇದಕ್ಕೆ ಅಶ್ವಿನಿ, ‘13 ಸಾವಿರ ಹಿಂಬಾಲಕರು ಇದ್ದಾರೆ’ ಎಂದು ಹೇಳಿದ್ದಾರೆ. ‘ನಿಮಗೆ ಎಷ್ಟು ಜನ ಹಿಂಬಾಲಕರು ಬೇಕು’ ಎಂದು ಕೇಳಿದರು ಬನ್ನಿ. ಇದಕ್ಕೆ ಹುಡುಗಿ 30 ಸಾವಿರ ಎಂದಿದ್ದಾರೆ. ‘ಈ ವಿಡಿಯೋ ಹಾಕಿದರೆ ಬರುತ್ತಾರಾ’ ಎಂದು ಅಲ್ಲು ಅರ್ಜುನ್ ಕೇಳಿದ್ದಾರೆ. ಯುವತಿ ಹೌದು ಎಂದು ಉತ್ತರಿಸಿದ್ದಾರೆ. ಈ ಮುದ್ದಾದ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋನ ಅಶ್ವಿನಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ಫಾಲೋವರ್ಸ್ ಸಂಖ್ಯೆ ಕೂಡ ಕ್ರಮೇಣ ಹೆಚ್ಚುತ್ತಿದೆ. ಇಲ್ಲಿಯವರೆಗೆ (ಡಿಸೆಂಬರ್ 1, ಮಧ್ಯಾಹ್ನ 1 ಗಂಟೆ ಅವರ ಇನ್ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆ 27 ಸಾವಿರ ದಾಟಿದೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ಲೇಡಿ ಫ್ಯಾನ್ ಜೊತೆ ಕ್ಯೂಟ್ ಆಗಿ ಮಾತನಾಡಿರುವ ಬನ್ನಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿಯೂ ಶೇರ್ ಮಾಡಲಾಗುತ್ತಿದೆ. ಗುರುವಾರ ತೆಲಂಗಾಣ ಚುನಾವಣಾ ಸಂದರ್ಭದಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು. ಶೂಟಿಂಗ್ಗೆ ಬ್ರೇಕ್ ಕೊಟ್ಟು ಅವರು ಮತದಾನ ಮಾಡಿದ್ದಾರೆ.
ಇದನ್ನೂ ಓದಿ: ಶಾರುಖ್, ಸಲ್ಮಾನ್ಗೂ ಸಿಗಲ್ಲ; ‘ಪುಷ್ಪ 2’ ಚಿತ್ರಕ್ಕೆ ಅಲ್ಲು ಅರ್ಜುನ್ 300 ಕೋಟಿ ರೂ. ಸಂಭಾವನೆ?
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಪುಷ್ಪ’ ಗೆಲುವಿನ ಬಳಿಕ ಅವರು ‘ಪುಷ್ಪ 2’ ಚಿತ್ರದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದ ಗೆಲುವು ಕಾಣುವ ನಿರೀಕ್ಷೆ ಇದೆ. ಸುಕುಮಾರ್ ನಿರ್ದೇಶನ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ