ಡ್ಯಾನ್ಸ್ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅವರು 21 ವರ್ಷದ ಯುವತಿಯನ್ನು ಅತ್ಯಾಚಾರ ಮಾಡಿದ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಅನೇಕರು ಜಾನಿ ಮಾಸ್ಟರ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಪ್ರಕರಣದಲ್ಲಿ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. ಹೀಗಿರುವಾಗಲೇ ಅಲ್ಲು ಅರ್ಜುನ್ ಅವರು ಸಂತ್ರಸ್ತೆಯ ನೆರವಿಗೆ ಬಂದಿದ್ದಾರೆ. ಹೋಂ ಬ್ಯಾನರ್ (ಗೀತಾ ಆರ್ಟ್ಸ್) ಅಡಿ ನಿರ್ಮಾಣ ಆಗುವ ಪ್ರತೀ ಚಿತ್ರದಲ್ಲೂ ಆ ಸಂತ್ರಸ್ತೆಗೆ ಅವಕಾಶ ನೀಡೋದಾಗಿ ಅಲ್ಲು ಅರ್ಜುನ್ ಶಪಥ ಮಾಡಿದ್ದಾರೆ.
ಜಾನಿ ಮಾಸ್ಟರ್ ಹಾಗೂ ಅಲ್ಲು ಅರ್ಜುನ್ ಒಟ್ಟಾಗಿ ಕೆಲಸ ಮಾಡಿದ್ದಾರೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಚಿತ್ರದ ‘ಶ್ರೀವಲ್ಲಿ..’ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದು ಇದೇ ಜಾನಿ ಮಾಸ್ಟರ್. ಹೀಗಾಗಿ, ಅಲ್ಲು ಅರ್ಜುನ್ಗೆ ಅವರ ಜೊತೆ ಒಳ್ಳೆಯ ಗೆಳೆತನ ಇದೆ. ಹಾಗಂದ ಮಾತ್ರಕ್ಕೆ ಅವರು ಸುಮ್ಮನೆ ಕುಳಿತಿಲ್ಲ. ಅವರು ಸಂತ್ರಸ್ತೆಯ ಸಹಾಯಕ್ಕೆ ನಿಂತಿದ್ದಾರೆ.
ಜಾನಿ ಮಾಸ್ಟರ್ ಜೊತೆ ಸಹಾಯಕಿ ಆಗಿದ್ದ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ. ಆ ಯುವತಿಯ ಪರಿಚಯ ಅಲ್ಲು ಅರ್ಜುನ್ ಅವರಿಗೂ ಇದೆ. ಈ ಕಾರಣದಿಂದಲೇ ಅಲ್ಲು ಅರ್ಜುನ್ ಅವರು ಯುವತಿಯ ಸಹಾಯಕ್ಕೆ ಮುಂದಾಗಿದ್ದಾರೆ. ಅವರ ನಡೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. ಈಗಾಗಲೇ ಈ ಸಂತ್ರಸ್ತೆ ‘ಪುಷ್ಪ 2’ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.
ಶೇಖ್ ಜಾನಿ ಬಾಷಾ ಅನ್ನೋದು ಜಾನಿ ಮಾಸ್ಟರ್ ಅವರ ನಿಜವಾದ ಹೆಸರು. ಅವರು ಇಂಡಸ್ಟ್ರಿಯಲ್ಲಿ ಜಾನಿ ಮಾಸ್ಟರ್ ಎಂದೇ ಫೇಮಸ್ ಆಗಿದ್ದಾರೆ. ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಸದ್ಯ ನರ್ಸಿಂಗಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ಇದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಹಿಳಾ ಸಂಘಟನೆಗಳು ಸಂತ್ರಸ್ತೆಯ ಸಹಾಯಕ್ಕೆ ಧಾವಿಸಿವೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ರೀತಿಯಲ್ಲಿ ಗಣಪನ ಮೂರ್ತಿ ಕೂರಿಸಿದ ಅಭಿಮಾನಿಗಳು
ಸಿನಿಮಾ ವಿಚಾರಕ್ಕೆ ಬರೋದಾದರೆ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Wed, 18 September 24