200 ದಿನ: ಚಿತ್ರಮಂದಿರಗಳ ಉಳಿಸಲು ಅಲ್ಲು ಅರ್ಜುನ್ ದಿಟ್ಟ ನಿರ್ಧಾರ

Allu Arjun movie: ಸ್ಟಾರ್ ನಟರ ಸಿನಿಮಾಗಳ ಹೊರತಾಗಿ ಬೇರೆ ಸಿನಿಮಾಗಳು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿಲ್ಲ. ಇದೇ ಕಾರಣಕ್ಕೆ ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ಸ್ಟಾರ್ ನಟರುಗಳು ಹೆಚ್ಚು ಸಿನಿಮಾ ಮಾಡಬೇಕು ಎಂದು ಗೋಗರೆಯುತ್ತಿದ್ದಾರೆ. ಆದರೆ ಸ್ಟಾರ್ ನಟರುಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಇದೀಗ ನಿರ್ಧಾರವೊಂದನ್ನು ತಳೆದಿದ್ದು, ಚಿತ್ರರಂಗದ ಉಳಿವಿಗೆ, ವಿಶೇಷವಾಗಿ ಚಿತ್ರಮಂದಿರಗಳ ಉಳಿವಿಗೆ ಈ ನಿರ್ಧಾರ ನೆರವಾಗಲಿದೆ.

200 ದಿನ: ಚಿತ್ರಮಂದಿರಗಳ ಉಳಿಸಲು ಅಲ್ಲು ಅರ್ಜುನ್ ದಿಟ್ಟ ನಿರ್ಧಾರ
Allu Arjun

Updated on: Apr 26, 2026 | 10:04 PM

ಚಿತ್ರಮಂದಿರಗಳು (Theater) ಸಂಕಷ್ಟದಲ್ಲಿವೆ. ಇದು ಒಂದು ರಾಜ್ಯದ ಸಮಸ್ಯೆಯಲ್ಲ, ಭಾರತದ ಬಹುತೇಕ ರಾಜ್ಯಗಳಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟದಲ್ಲಿವೆ. ಯಾವುದೇ ದೊಡ್ಡ ಸಿನಿಮಾಗಳು ಬಂದಾಗ ಮಾತ್ರ ಚಿತ್ರಮಂದಿರಗಳಲ್ಲಿ ತುಸು ಜೀವ ಬರುತ್ತದೆ. ಆ ನಂತರ ಮತ್ತೆ ಅದೇ ಸ್ಥಿತಿ. ಸಣ್ಣ ಮತ್ತು ಮಧ್ಯಮ ಬಜೆಟ್​​ನ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗುತ್ತಿವೆ. ಕೇವಲ ಮಲಯಾಳಂ ಚಿತ್ರರಂಗದಲ್ಲಿ ಮಾತ್ರವೇ ಸ್ಟಾರ್ ಅಲ್ಲದವರ ಸಿನಿಮಾಗಳು ಸಹ ಆಗೊಮ್ಮೆ ಈಗೊಮ್ಮೆ ಹಿಟ್ ಆಗುತ್ತಿವೆ. ಇದೇ ಕಾರಣಕ್ಕೆ ಸಿನಿಮಾ ನಿರ್ಮಾಪಕರು, ಪ್ರದರ್ಶಕರು, ಸ್ಟಾರ್ ನಟರುಗಳು ಹೆಚ್ಚು ಸಿನಿಮಾ ಮಾಡಬೇಕು ಎಂದು ಗೋಗರೆಯುತ್ತಿದ್ದಾರೆ. ಆದರೆ ಸ್ಟಾರ್ ನಟರುಗಳು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಆದರೆ ಅಲ್ಲು ಅರ್ಜುನ್ ಇದೀಗ ನಿರ್ಧಾರವೊಂದನ್ನು ತಳೆದಿದ್ದು, ಚಿತ್ರರಂಗದ ಉಳಿವಿಗೆ, ವಿಶೇಷವಾಗಿ ಚಿತ್ರಮಂದಿರಗಳ ಉಳಿವಿಗೆ ಈ ನಿರ್ಧಾರ ನೆರವಾಗಲಿದೆ.

ಸ್ಟಾರ್ ನಟರುಗಳು ಒಂದು ಸಿನಿಮಾ ಮಾಡಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸ್ಟಾರ್ ನಟರ ಸಿನಿಮಾಗಳು ಚಿತ್ರಮಂದಿರಕ್ಕೆ ಬರುವುದು ಆಗೊಮ್ಮೆ-ಈಗೊಮ್ಮೆ ಎಂಬಂತಾಗಿದೆ. ಅಲ್ಲು ಅರ್ಜುನ್ ಸಹ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಈಗ ಅಲ್ಲು ಅರ್ಜುನ್ ತಮ್ಮ ಶೈಲಿ ಬದಲಿಸಿದ್ದು, ಇನ್ನು ಮುಂದೆ ಒಂದು ಸಿನಿಮಾಕ್ಕೆ ಕೇವಲ 200 ದಿನಗಳ ಕಾಲ್​​ಶೀಟ್ ಮಾತ್ರವೇ ಕೊಡುವ ನಿರ್ಧಾರ ಮಾಡಿದ್ದಾರೆ.

ತೆಲುಗು ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿದ್ದು, ಇನ್ನು ಮುಂದೆ ಅಲ್ಲು ಅರ್ಜುನ್ ಅವರು ನಿರ್ಮಾಪಕರಿಗೆ 200 ದಿನಗಳ ಕಾಲ್​​ಶೀಟ್ ಮಾತ್ರವೇ ನೀಡಲಿದ್ದು, ಅಷ್ಟರಲ್ಲಿ ಸಿನಿಮಾ ಮುಗಿಸುವ ಷರತ್ತು ಹಾಕಲಿದ್ದಾರಂತೆ. ಅದು ಮಾತ್ರವೇ ಅಲ್ಲದೆ, ಒಂದು ಸಮಯದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುವ ತೀರ್ಮಾನವನ್ನು ಸಹ ಅಲ್ಲು ಅರ್ಜುನ್ ಮಾಡಿದ್ದಾರಂತೆ. ಈ ಮೊದಲೆಲ್ಲ ಒಂದು ಸಿನಿಮಾ ಮುಗಿದ ಬಳಿಕವಷ್ಟೆ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದರು. ಆದರೆ ಆ ನಿಯಮವನ್ನು ಸಹ ಮುರಿಯಲಿದ್ದು, ಅದೂ ಸಹ ಚಿತ್ರಮಂದಿರದ ಒಳಿತಿಗಾಗಿಯೇ ಆಗಿದೆ.

ಇದನ್ನೂ ಓದಿ:ಮುಂಬೈನಲ್ಲಿ ಐಷಾರಾಮಿ ಮನೆ ಬಾಡಿಗೆಗೆ ಪಡೆದ ಅಲ್ಲು ಅರ್ಜುನ್: ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಪ್ರಸ್ತುತ ನಟ ಪ್ರಭಾಸ್ ಸಹ ಈ ನಿಯಮ ಅನುಸರಿಸುತ್ತಿದ್ದಾರೆ. ಎರಡೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಪ್ರಭಾಸ್. ಒಂದು ಸಿನಿಮಾದ ಶೆಡ್ಯೂಲ್ ಬ್ರೇಕ್ ಇದ್ದಾಗ ಮತ್ತೊಂದು ಸಿನಿಮಾನಲ್ಲಿ ಹೀಗೆ ಕಾಲ್​ ಶೀಟ್ ಅನ್ನು ಸಹ ಒಟ್ಟಿಗೆ ಎರಡು ಸಿನಿಮಾಗಳಿಗೆ ನೀಡುತ್ತಿದ್ದಾರೆ ಅದೂ ಶೂಟಿಂಗ್​ಗೆ ಸಮಸ್ಯೆ ಆಗದಂತೆ. ಇದರಿಂದ ಕಡಿಮೆ ಅವಧಿಯಲ್ಲಿ ಸಿನಿಮಾ ಮಾಡಿದಂತಾಗುತ್ತದೆ. ಮತ್ತು ಸಿನಿಮಾಗಳಿಂದ ಸಿನಿಮಾಕ್ಕೆ ದೊಡ್ಡ ಗ್ಯಾಪ್ ಸಹ ಆಗುವುದಿಲ್ಲ.

ಅಲ್ಲು ಅರ್ಜುನ್ ಪ್ರಸ್ತುತ ಬರೋಬ್ಬರಿ ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಅಟ್ಲಿ ಜೊತೆಗೆ ‘ರಾಕಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ಲೋಕೇಶ್ ಕನಗರಾಜ್ ಜೊತೆಗೆ ಹೊಸ ಸಿನಿಮಾ ಆರಂಭವಾಗಲಿದೆ. ಅದರ ಜೊತೆಗೆ ಮಲಯಾಳಂನ ಬಾಸಿಲ್ ಜೋಸೆಫ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ಅದಾದ ಬಳಿಕ ಸಂದೀಪ್ ರೆಡ್ಡಿ ಜೊತೆಗೆ ಒಂದು ಸಿನಿಮಾ ಬಳಿಕ ಮತ್ತೆ ಸುಕುಮಾರ್ ಜೊತೆಗೆ ಮತ್ತೊಂದು ಸಿನಿಮಾನಲ್ಲಿ ನಟಿಸಲಿದ್ದಾರೆ. ಲೈನ್ ಅಪ್ ಹೆಚ್ಚಾಗಿರುವ ಕಾರಣ ಒಟ್ಟಿಗೆ ಎರಡು ಸಿನಿಮಾನಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಮತ್ತು ಬೇಗ ಬೇಗನೆ ಸಿನಿಮಾಗಳನ್ನು ಮುಗಿಸಲು ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಅವರು ಸೂಚಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us