- TV9 Kannada Photo gallery Cricket photos Duleep Trophy Final: KL Rahul Out! Tilak Varma Confirms Absence, Padikkal, Siraj In
ದುಲೀಪ್ ಟ್ರೋಫಿ ಫೈನಲ್ಗೆ ಕೆಎಲ್ ರಾಹುಲ್ ಅಲಭ್ಯ
ದುಲೀಪ್ ಟ್ರೋಫಿ ಫೈನಲ್ ಸೆಪ್ಟೆಂಬರ್ 6 ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ದಕ್ಷಿಣ ವಲಯ ನಾಯಕ ತಿಲಕ್ ವರ್ಮಾ ಕೆಎಲ್ ರಾಹುಲ್ ಆಡುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ರಾಹುಲ್ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದು, ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗಲಿದ್ದಾರೆ. ಆದಾಗ್ಯೂ, ದೇವದತ್ ಪಡಿಕ್ಕಲ್ ಮತ್ತು ಮೊಹಮ್ಮದ್ ಸಿರಾಜ್ ದಕ್ಷಿಣ ವಲಯ ತಂಡವನ್ನು ಸೇರಿಕೊಳ್ಳಲಿದ್ದು, ತಂಡದ ಬಲವನ್ನು ಹೆಚ್ಚಿಸಲಿದ್ದಾರೆ.
Updated on: Sep 05, 2026 | 3:05 PM

ದೇಶಿ ಟೂರ್ನಿ ದುಲೀಪ್ ಟ್ರೋಫಿ ಫೈನಲ್ ಪಂದ್ಯ ಇದೇ ಸೆಪ್ಟೆಂಬರ್ 6 ರಿಂದ ಅಂದರೆ ನಾಳೆಯಿಂದ ಆರಂಭವಾಗಲಿದೆ. ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಇಶಾನ್ ಕಿಶನ್ ನಾಯಕತ್ವದ ಪೂರ್ವ ವಲಯ ತಂಡ, ತಿಲಕ್ ವರ್ಮಾ ನಾಯಕತ್ವದ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ಈ ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ(PC-PTI).

ವಾಸ್ತವವಾಗಿ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ದಕ್ಷಿಣ ವಲಯ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿತ್ತು. ಅದರಂತೆ ದಕ್ಷಿಣ ವಲಯ ತಂಡದ ಆಟಗಾರರ ಪಟ್ಟಿಯಲ್ಲಿ ಈ ಮೂವರ ಹೆಸರನ್ನು ಸಹ ದಾಖಲಿಸಲಾಗಿತ್ತು. ಈ ಮೂವರ ಆಗಮನದಿಂದ ದಕ್ಷಿಣ ವಲಯ ತಂಡ ಬಲಿಷ್ಠವಾಗಿ ಕಾಣುತ್ತಿತ್ತು(PC-PTI).

ಆದರೀಗ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ನಾಯಕ ತಿಲಕ್ ವರ್ಮಾ, ಕೆಎಲ್ ರಾಹುಲ್ ಫೈನಲ್ ಪಂದ್ಯದಲ್ಲಿ ಆಡುವುದಿಲ್ಲ. ಅವರಿನ್ನು ತಂಡವನ್ನು ಸೇರಿಕೊಂಡಿಲ್ಲ ಎಂದಿದ್ದಾರೆ. ರಾಹುಲ್ ಹೊರತುಪಡಿಸಿ ಉಳಿದಿಬ್ಬರಾದ ದೇವದತ್ ಪಡಿಕ್ಕಲ್ ಹಾಗೂ ಮೊಹಮ್ಮದ್ ಸಿರಾಜ್ ಆಡುವುದನ್ನು ತಿಲಕ್ ವರ್ಮಾ ಖಚಿತಪಡಿಸಿದ್ದಾರೆ(PC-PTI).

ಕೆಎಲ್ ರಾಹುಲ್ ಮುಂಬರುವ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹೀಗಾಗಿ ಅವರು ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಆಡುವ ಮೂಲಕ ತಮ್ಮ ಫಾರ್ಮ್ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ರಾಹುಲ್ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಇದೀಗ ರಾಹುಲ್ ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವುದನ್ನು ಕಾಣಬಹುದು(PC-PTI).

ರಾಹುಲ್ ಅಲಭ್ಯತೆಯ ಹೊರತಾಗಿ ದೇವದತ್ ಪಡಿಕ್ಕಲ್ ಮತ್ತು ಮೊಹಮ್ಮದ್ ಸಿರಾಜ್ ತಂಡವನ್ನು ಕೂಡಿಕೊಂಡಿರುವುದು ದಕ್ಷಿಣ ವಲಯ ತಂಡದ ಬಲ ಹೆಚ್ಚಿಸಲಿದೆ. ಏಕೆಂದರೆ ಅದ್ಭುತ ಫಾರ್ಮ್ನಲ್ಲಿರುವ ಪಡಿಕ್ಕಲ್ ಇತ್ತೀಚೆಗೆ ಮುಗಿದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2 ಶತಕಗಳನ್ನು ಬಾರಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಸಿರಾಜ್ ಅವರ ಅಗಮನವೂ ಬೌಲಿಂಗ್ ವಿಭಾಗವನ್ನು ಬಲಪಡಿಸಿದೆ(PC-PTI).




