ರಣ್ವೀರ್ ಕೈಕೊಟ್ಟ ಬೆನ್ನಲ್ಲೆ, ಸಲ್ಮಾನ್ ಖಾನ್ ಕೈಹಿಡಿದ ಫರ್ಹಾನ್ ಅಖ್ತರ್
ರಣ್ವೀರ್ ಸಿಂಗ್ ನಾಯಕನಾಗಿ ನಟಿಸಬೇಕಿದ್ದ ‘ಡಾನ್ 3’ ಸಿನಿಮಾವನ್ನು ಫರ್ಹಾನ್ ಅಖ್ತರ್ ಘೋಷಿಸಿದ್ದರು. ಆದರೆ ರಣ್ವೀರ್ ಸಿಂಗ್ ಆ ಸಿನಿಮಾದಿಂದ ಹೊರ ನಡೆದರು. ಇಬ್ಬರ ನಡುವೆ ಸಾಕಷ್ಟು ವಿವಾದಗಳು ಸಹ ನಡೆದವು. ಇದೀಗ ರಣ್ವೀರ್ ಸಿಂಗ್ ಸಲ್ಮಾನ್ ಖಾನ್ ಜೊತೆ ಕೈ ಜೋಡಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಭಾರಿ ದೊಡ್ಡ ಬಜೆಟ್ನ ಸಿನಿಮಾ ಒಂದನ್ನು ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮುಖ್ಯಾಂಶಗಳು
- ಸಲ್ಮಾನ್ ಖಾನ್ ಹೊಸ ಸಿನಿಮಾ ಬಗ್ಗೆ ಚರ್ಚೆ
- ರಣ್ವೀರ್ ಸಿಂಗ್ ಕೈಕೊಟ್ಟ ಬಳಿಕ ಸಲ್ಮಾನ್ ಖಾನ್ ಬಳಿಗೆ ಫರ್ಹಾನ್
- ಫರ್ಹಾನ್ ಅಖ್ತರ್, ಸಲ್ಮಾನ್ ಖಾನ್ಗೆ ಕತೆ ಹೇಳಿದ್ದಾರೆ
ಬಾಲಿವುಡ್ನ ಸ್ಟಾರ್ ನಟ ಮತ್ತು ಪ್ರತಿಭಾವಂತ ನಿರ್ದೇಶಕ ಫರ್ಹಾನ್ ಅಖ್ತರ್. ‘ದಿಲ್ ಚಾಹ್ತಾ ಹೈ’, ‘ಡಾನ್’, ‘ಡಾನ್ 2’, ‘ರಾಕ್ ಸ್ಟಾರ್’ ಅಂಥ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ರಣ್ವೀರ್ ಸಿಂಗ್ ನಾಯಕನಾಗಿ ನಟಿಸಬೇಕಿದ್ದ ‘ಡಾನ್ 3’ ಸಿನಿಮಾವನ್ನು ಫರ್ಹಾನ್ ಅಖ್ತರ್ ಘೋಷಿಸಿದ್ದರು. ಆದರೆ ರಣ್ವೀರ್ ಸಿಂಗ್ ಆ ಸಿನಿಮಾದಿಂದ ಹೊರ ನಡೆದರು. ಇಬ್ಬರ ನಡುವೆ ಸಾಕಷ್ಟು ವಿವಾದಗಳು ಸಹ ನಡೆದವು. ಇದೀಗ ರಣ್ವೀರ್ ಸಿಂಗ್ ಸಲ್ಮಾನ್ ಖಾನ್ ಜೊತೆ ಕೈ ಜೋಡಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ ಭಾರಿ ದೊಡ್ಡ ಬಜೆಟ್ನ ಸಿನಿಮಾ ಒಂದನ್ನು ಆಫರ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಲ್ಮಾನ್ ಖಾನ್ ಈಗಾಗಲೇ ಕೆಲ ಒಳ್ಳೆಯ ಸಿನಿಮಾಗಳ ಭಾಗವಾಗಿದ್ದಾರೆ. ಅವರ ನಟನೆಯ ‘ಮಾತೃಭೂಮಿ’ ಸಿನಿಮಾ ರಿಲೀಸ್ ಆಗಲಿದೆ. ರಾಜ್ ಮತ್ತು ಡಿಕೆ ಜೊತೆಗೆ ಅವರು ಸಿನಿಮಾ ಒಂದರಲ್ಲಿ ನಟಿಸಲಿದ್ದು, ಆ ಸಿನಿಮಾ ಸೂಪರ್ ಹೀರೋ ಕತೆಯುಳ್ಳ ಸಿನಿಮಾ ಆಗಿರಲಿದೆ. ದಿಲ್ ರಾಜು ನಿರ್ದೇಶಿಸಿ, ತೆಲುಗಿನ ವಂಶಿ ಪೈಡಪಲ್ಲಿ ನಿರ್ದೇಶನದ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇದರ ಜೊತೆಗೆ ಇದೀಗ ಫರ್ಹಾನ್ ಅಖ್ತರ್ ಜೊತೆಗೆ ಕೈ ಜೋಡಿಸಿದ್ದು, ದೊಡ್ಡ ಬಜೆಟ್ನ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ.
ಫರ್ಹಾನ್ ಅಖ್ತರ್, ಒಂದು ಅದ್ಧೂರಿ ಐತಿಹಾಸಿಕ ಕಥೆಯನ್ನು ಸಲ್ಮಾನ್ ಖಾನ್ ಅವರಿಗೆ ಹೇಳಿದ್ದು, ಕತೆ ಸಲ್ಮಾನ್ ಖಾನ್ ಅವರಿಗೂ ಸಾಕಷ್ಟು ಇಷ್ಟವಾಗಿದೆಯಂತೆ. ಸಿನಿಮಾದ ಬಗ್ಗೆ ಚರ್ಚೆಗಳು ಪ್ರಸ್ತುತ ಪ್ರಾಥಮಿಕ ಹಂತದಲ್ಲಿವೆ, ಆದರೆ ಸಲ್ಮಾನ್ ಮತ್ತು ಫರ್ಹಾನ್ ಅಖ್ತರ್ ಒಟ್ಟಿಗೆ ಕೆಲಸ ಮಾಡಲು ಸಾಕಷ್ಟು ಉತ್ಸುಕರಾಗಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:‘ಬಾಲಿವುಡ್ನವರು ಬೆಂಬಲಿಸಲಿಲ್ಲ’: ‘ಹನುಮಾನ್ ಅಂಶ್’ ನಿರ್ದೇಶಕನ ಮಾತು
ಸಲ್ಮಾನ್ ಖಾನ್ ಅವರ ಈ ಹಿಂದಿನ ಸಿನಿಮಾ ‘ಸಿಕಂಧರ್’ ಫ್ಲಾಪ್ ಆಯ್ತು. ಆ ಸಿನಿಮಾನಲ್ಲಿ ಸಲ್ಮಾನ್ ಜೊತೆಗೆ ರಶ್ಮಿಕಾ ಮಂದಣ್ಣ ನಟಿಸಿದ್ದರು. ಸಿನಿಮಾವನ್ನು ತಮಿಳಿನ ಮುರುಗದಾಸ್ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಫ್ಲಾಪ್ ಆಯ್ತು. ಅದಕ್ಕೆ ಮುಂಚೆ ನಟಿಸಿದ್ದ ‘ಟೈಗರ್ 3’ ಸಿನಿಮಾ ಸಹ ದೊಡ್ಡ ಯಶಸ್ಸು ಗಳಿಸಲಿಲ್ಲ. ಆದರೆ ಸಲ್ಮಾನ್ ಖಾನ್ ಅವರ ಮುಂದಿನ ಮೂರೂ ಸಿನಿಮಾಗಳು ಭಾರಿ ನಿರೀಕ್ಷೆಯನ್ನು ಮೂಡಿಸಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




