AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಲಿವುಡ್​​ನವರು ಬೆಂಬಲಿಸಲಿಲ್ಲ’: ‘ಹನುಮಾನ್ ಅಂಶ್’ ನಿರ್ದೇಶಕನ ಮಾತು

‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿರುವ ಬಾಲಿವುಡ್​​ನ ಅತ್ಯಂತ ಸಣ್ಣ ಬಜೆಟ್ ಸಿನಿಮಾ. ಕೇವಲ 1.8-2 ಕೋಟಿ ಬಜೆಟ್​ನಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾ ಈಗಾಗಲೇ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿ, 100 ಕೋಟಿ ಗಳಿಕೆಯತ್ತ ದಾಪುಗಾಲು ಹಾಕಿದೆ. ಈ ನಡುವೆ ಸಿನಿಮಾದ ನಿರ್ದೇಶಕ ವಿಶಾಲ್, ‘ತಮಗೆ, ತಮ್ಮ ಸಿನಿಮಾಕ್ಕೆ ಬಾಲಿವುಡ್​​ನ ಯಾವೊಬ್ಬರೂ ಸಹ ಸಹಾಯ ಮಾಡಿರಲಿಲ್ಲ. ಆದರೆ ಈಗ ಅವರೇ ಕರೆ ಮಾಡಿ ಅಭಿನಂದನೆ ತಿಳಿಸುತ್ತಿದ್ದಾರೆ’ ಎಂದಿದ್ದಾರೆ.

‘ಬಾಲಿವುಡ್​​ನವರು ಬೆಂಬಲಿಸಲಿಲ್ಲ’: ‘ಹನುಮಾನ್ ಅಂಶ್’ ನಿರ್ದೇಶಕನ ಮಾತು
Hanuman Ansh
ಮಂಜುನಾಥ ಸಿ.
|

Updated on: Sep 04, 2026 | 12:33 PM

Share

ಮುಖ್ಯಾಂಶಗಳು

  • ಹನುಮಾನ್ ಅಂಶ್ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆಯುತ್ತಿದೆ.
  • ಅತ್ಯಂತ ಸಣ್ಣ ಬಜೆಟ್​​ನ ಹಿಂದಿ ಸಿನಿಮಾ ಇದಾಗಿದೆ.
  • ಹನುಮಾನ್ ಅಂಶ್ ನಿರ್ದೇಶಕ, ಬಾಲಿವುಡ್​ನಿಂದ ಬೆಂಬಲ ಸಿಕ್ಕಿಲ್ಲ ಎಂದಿದ್ದಾರೆ.

ಭಾರಿ ಬಜೆಟ್​​ನ ದೊಡ್ಡ-ದೊಡ್ಡ ಸ್ಟಾರ್ ನಟರ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಸಿನಿಮಾಗಳೇ ಬಾಕ್ಸ್ ಆಫೀಸ್​​ನಲ್ಲಿ ಮಕಾಡೆ ಮಲಗುತ್ತಿರುವಾಗ ಹಿಂದಿಯ ಅತ್ಯಂತ ಸಣ್ಣ ಸಿನಿಮಾ ‘ಹನುಮಾನ್ ಅಂಶ್’ ಸೂಪರ್ ಹಿಟ್ ಆಗಿದೆ. ಕೇವಲ 1.8-2 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆದ ಈ ಅತ್ಯಂತ ಸಣ್ಣ ಬಜೆಟ್​​ನ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್​​ನಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, 100 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಸಿನಿಮಾದ ನಿರ್ದೇಶಕ ವಿಶಾಲ್ ಚತುರ್ವೇದಿ ಸಂದರ್ಶನವೊಂದರಲ್ಲಿ ಮಾತನಾಡಿ, ತಮಗೆ ಯಾವ ಬಾಲಿವುಡ್​​ನರು ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ.

ಪಾಡ್‌ಕಾಸ್ಟ್‌ ನಲ್ಲಿ ಮಾತನಾಡಿರುವ ನಿರ್ದೇಶಕ ವಿಶಾಲ್ ಚತುರ್ವೇದಿ, ‘‘ಹನುಮಾನ್ ಅಂಶ್’ ಸಿನಿಮಾ ಬಿಡುಗಡೆಗೆ ಮುನ್ನ ಬಾಲಿವುಡ್ ತನ್ನ ಚಿತ್ರಕ್ಕೆ ಯಾವುದೇ ಬೆಂಬಲ ನೀಡಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಆದಾಗ್ಯೂ, ಚಿತ್ರವು ಉತ್ತಮ ಪ್ರದರ್ಶನ ಕಾಣಲು ಶುರುವಾದಾಗ, ಚಿತ್ರರಂಗದ ಹಲವರು ಕರೆ ಮಾಡಿ ಅಭಿನಂದಿಸಿದ್ದಾರೆ’ ಎಂದಿದ್ದಾರೆ. ಅಲ್ಲದೆ ಬಾಲಿವುಡ್​​ನಲ್ಲಿರುವ ಹಲವರು ಗೊಂದಲದಲ್ಲಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

‘ಚಿತ್ರ ಬಿಡುಗಡೆಗೂ ಮುನ್ನ ಬಾಲಿವುಡ್‌ನಿಂದ ನಿಮಗೆ ಯಾವುದೇ ಬೆಂಬಲ ಸಿಕ್ಕಿತೇ ಎಂಬ ಪ್ರಶ್ನೆಗೆ ಉತ್ತರಿಸಿರುವ ವಿಶಾಲ್, ‘ಚಿತ್ರ ಚೆನ್ನಾಗಿ ಪ್ರದರ್ಶನಗೊಳ್ಳಲು ಶುರುವಾದ ಮೇಲೆ, ಹಲವರು ನನಗೆ ಕರೆ ಮಾಡಿ ಅಭಿನಂದಿಸಿದರು. ನಾನು ಅವರ ಹೆಸರುಗಳನ್ನು ಹೇಳಲು ಬಯಸುವುದಿಲ್ಲ. ನನ್ನನ್ನು ಅಭಿನಂದಿಸಿದವರಲ್ಲಿ ಮಧುರ್ ಭಂಡಾರ್ಕರ್ ಕೂಡ ಒಬ್ಬರು, ಆದರೆ ಅವರಿಗೆ ನಾನು ಯಾವುದೇ ಬೆಂಬಲ ಕೇಳಿರಲಿಲ್ಲ. ಆದಾಗ್ಯೂ, ಇತರರ ಹೆಸರುಗಳನ್ನು ನಾನು ಹೇಳುತ್ತಿಲ್ಲ ಏಕೆಂದರೆ, ನಾನು ಆ ವ್ಯಕ್ತಿಗಳ ಹತ್ತಿರ ಸಹಾಯ ಕೇಳಿದ್ದೆ, ಆದರೆ ಅವರು ಸಹಾಯ ಮಾಡಿರಲಿಲ್ಲ. ಹಾಗಾಗಿ, ಈಗ ಅವರು ಅಭಿನಂದಿಸುತ್ತಿದ್ದಾರೆ ಮಾತ್ರಕ್ಕೆ ಅವರ ಹೆಸರುಗಳನ್ನು ಬಹಿರಂಗಪಡಿಸಲು ನನಗೆ ಇಷ್ಟವಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಸೂಪರ್ ಹಿಟ್ ‘ಹನುಮಾನ್ ಅಂಶ್’ ವಿದೇಶಿ ವಿತರಣೆ ಜವಾಬ್ದಾರಿ ಹೊತ್ತ ಹೊಂಬಾಳೆ ಫಿಲ್ಮ್ಸ್

ಮಾತು ಮುಂದುವರೆಸಿ, ‘ಈ ಕಂಟೆಂಟ್ ಕೆಲಸ ಮಾಡುವುದಿಲ್ಲ ಎಂದು ಹೇಳಿ ಜನರು ನಿಮ್ಮನ್ನು ನಿರುತ್ಸಾಹಗೊಳಿಸುತ್ತಾರೆ. ಆದರೆ ಅವರಿಗೆ ವಾಸ್ತವವಾಗಿ ಯಾವುದು ವರ್ಕೌಟ್ ಆಗುತ್ತದೆ ಎಂಬ ವಿಷಯ ಯಾರಿಗೂ ಗೊತ್ತಿರುವದಿಲ್ಲ, ಆದರೂ ಅವರು ಇತರರಿಗೆ ತಮ್ಮ ‘ಜ್ಞಾನ’ವನ್ನು ಹಂಚುತ್ತಾರೆ. ಈ ಇಂಡಸ್ಟ್ರಿ ಗೊಂದಲಮಯ ಜನರಿಂದ ತುಂಬಿದೆ. ಇಲ್ಲಿ ಎರಡು ವಿಧದ ಜನ್ತಾರಿದ್ದಾರೆ, ಒಂದು ವರ್ಗದವರು ಪ್ರಾಮಾಣಿಕವಾಗಿ ಸಿನಿಮಾಗಳನ್ನು ಮಾಡಲು ಬಯಸುವವರು, ಮತ್ತೊಂದು ವರ್ಗದವರಿಗೆ ಯಾವುದೇ ಉತ್ಸಾಹವಿಲ್ಲದೆ, ಸಿನಿಮಾ ನಿರ್ಮಾಣವೆಂಬುದು ತಾವು ಒಮ್ಮೆ ಪ್ರಯತ್ನಿಸಬೇಕಾದ ವಿಷಯ ಎಂದುಕೊಳ್ಳುವವರು’ ಎಂದು ಅವರು ವಿಶ್ಲೇಷಿಸಿದ್ದಾರೆ.

ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿಸಿದ ಸಿನಿಮಾ ‘ಹನುಮಾನ್ ಅಂಶ್’ ಈ ಸಿನಿಮಾ ಇದೀಗ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ ಮಾಡುತ್ತಿದೆ. ಸಿನಿಮಾದ ವಿದೇಶಿ ಬಿಡುಗಡೆ ಹಕ್ಕನ್ನು ಇತ್ತೀಚೆಗಷ್ಟೆ ಹೊಂಬಾಳೆ ಫಿಲಮ್ಸ್ ಖರೀದಿ ಮಾಡಿದ್ದು, ವಿದೇಶದಲ್ಲೂ ಸಿನಿಮಾವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಮುಂದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
4ನೇ ದಿನಕ್ಕೆ ಕಾಲಿಟ್ಟ ಬಿಜೆಪಿ ಬಳ್ಳಾರಿ ಚಲೋ, ಮುಸ್ಲಿಮರ ಸಾಥ್!
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಮೈಸೂರು ದಸರಾ 2026: ಶ್ರೀಕಂಠ ಪಟ್ಟದ ಆನೆ, ಏಕಲವ್ಯ ನಿಶಾನೆ ಆನೆಯಾಗಿ ಆಯ್ಕೆ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿಯ ಸಂಭ್ರಮ ಹೇಗಿದೆ ನೋಡಿ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ರೈತರಿಗೆ ವಿದ್ಯುತ್ ಕೊಡಲು ಸೋಲಾರ್ ಪ್ಲಾಟ್ ಸ್ಥಾಪಿಸುತ್ತಿದೆ ಎಂಇಐಎಲ್ ಕಂಪನ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ವಿವರ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ರಾಜಾಜಿನಗರ ಇಸ್ಕಾನ್ ದೇಗುಲದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಬೆಂಗಳೂರಿನ ಈ 4 ಫ್ಲೈ ಓವರ್​ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿ
ಬೆಂಗಳೂರಿನ ಈ 4 ಫ್ಲೈ ಓವರ್​ಗಳಲ್ಲಿ ಇಂದಿನಿಂದಲೇ ಹೊಸ ನಿಯಮ ಜಾರಿ
ಇಂದು ಕೃಷ್ಣ ಜನ್ಮಾಷ್ಟಮಿ ಶುಭದಿನ
ಇಂದು ಕೃಷ್ಣ ಜನ್ಮಾಷ್ಟಮಿ ಶುಭದಿನ
30 ವರ್ಷ ಬಳಿಕ ‘ಅಮೆರಿಕ ಅಮೆರಿಕ’ ಸೀಕ್ವೆಲ್; ನಾಗತಿಹಳ್ಳಿ ವಿಶೇಷ ಸಂದರ್ಶನ
30 ವರ್ಷ ಬಳಿಕ ‘ಅಮೆರಿಕ ಅಮೆರಿಕ’ ಸೀಕ್ವೆಲ್; ನಾಗತಿಹಳ್ಳಿ ವಿಶೇಷ ಸಂದರ್ಶನ
ಏಲಕ್ಕಿ ಮಾಲೆಗೆ ಡಿಮ್ಯಾಂಡ್: ಏಲಕ್ಕಿ ನಗರಿ ಎಂದು ಹಾವೇರಿಗೆ ಕರೆಯೋದ್ಯಾಕೆ?
ಏಲಕ್ಕಿ ಮಾಲೆಗೆ ಡಿಮ್ಯಾಂಡ್: ಏಲಕ್ಕಿ ನಗರಿ ಎಂದು ಹಾವೇರಿಗೆ ಕರೆಯೋದ್ಯಾಕೆ?