ಹೊಸ ಪೋಸ್ಟರ್ ಹಂಚಿಕೊಂಡ ಅಲ್ಲು ಅರ್ಜುನ್: ಅಭಿಮಾನಿಗಳಿಗೆ ಗೊಂದಲ

Allu Arjun: ನಟ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಇದಯು ಅಲ್ಲು ಅರ್ಜುನ್​ರ ಮುಂದಿನ ಸಿನಿಮಾದ ಪೋಸ್ಟರ್ ಆಗಿರಬಹುದೇ? ಅಥವಾ ಅಲ್ಲವೇ ಎಂಬ ಬಗ್ಗೆ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಹೊಸ ಪೋಸ್ಟರ್ ಹಂಚಿಕೊಂಡ ಅಲ್ಲು ಅರ್ಜುನ್: ಅಭಿಮಾನಿಗಳಿಗೆ ಗೊಂದಲ
ಅಲ್ಲು ಅರ್ಜುನ್

Updated on: Sep 29, 2023 | 6:23 PM

ನಟ ಅಲ್ಲು ಅರ್ಜುನ್ (Allu Arjun) ತಮ್ಮ ಪೂರ್ಣ ಗಮನವನ್ನು ‘ಪುಷ್ಪ 2’ ಮೇಲೆ ಕೇಂದ್ರೀಕರಿಸಿದ್ದಾರೆ. ‘ಪುಷ್ಪ’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಸಿನಿಮಾದ ನಟನೆಗೆ ಅಲ್ಲು ಅರ್ಜುನ್​ಗೆ ರಾಷ್ಟ್ರಪ್ರಶಸ್ತಿಯೂ ಲಭಿಸಿದೆ. ಹಾಗಾಗಿ ಮೊದಲ ಸಿನಿಮಾಕ್ಕಿಂತಲೂ ಭರ್ಜರಿಯಾಗಿ ಎರಡನೇ ಸಿನಿಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಅಲ್ಲು ಅರ್ಜುನ್ ಹಾಗೂ ‘ಪುಷ್ಪ 2’ ಚಿತ್ರತಂಡ ತೊಡಗಿಕೊಂಡಿದೆ. ಇದರ ನಡುವೆ ಅಲ್ಲು ಅರ್ಜುನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟರ್ ಸಖತ್ ಗಮನ ಸೆಳೆಯುತ್ತಿದೆ. ಕೆಲವರು ಇದನ್ನು ಅಲ್ಲು ಅರ್ಜುನ್​ರ ಮುಂದಿನ ಸಿನಿಮಾ ಪೋಸ್ಟರ್ ಎಂದರೆ ಇನ್ನು ಕೆಲವರು ಅಲ್ಲ ಎಂದಿದ್ದಾರೆ.

‘ಕಭಿ ಅಪ್ನೆ, ಕಭಿ ಸಪ್ನೆ’ ಎಂದಿರುವ ಪೋಸ್ಟರ್ ಅನ್ನು ಅಲ್ಲು ಅರ್ಜುನ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್​ ಮೇಲೆ ಅಲ್ಲು ಅರ್ಜುನ್​ರ ಎರಡು ಲುಕ್​ಗಳಿವೆ. ಪೋಸ್ಟರ್​ನಲ್ಲಿ ‘ಐಕಾನ್ ಸ್ಟಾರ್ ಅಲ್ಲು ಅರ್ಜುನ್’ ಎಂದು ಬರೆಯಲಾಗಿದ್ದು, ಶೀಘ್ರವೇ ಬರಲಿದೆ ಎಂದು ಸಹ ನಮೂದಿಸಲಾಗಿದೆ. ಇದು ಅಲ್ಲು ಅರ್ಜುನ್​ರ ಮುಂದಿನ ಸಿನಿಮಾ ಎನ್ನಲಾಗುತ್ತಿದೆ. ‘ಕಭಿ ಅಪ್ನೆ-ಕಭಿ ಸಪ್ನೆ’ಯ ಪ್ರೋಮೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸಿನಿಮಾದ ಪ್ರೋಮೋನಾ ಅಥವಾ ಯಾವುದೋ ಜಾಹೀರಾತಿನ ಪ್ರೋಮೋ ಇರಬಹುದಾ ಎಂಬ ಗೊಂದಲ ಸೃಷ್ಟಿಯಾಗಿದೆ.

ಇದನ್ನೂ ಓದಿ:‘ಜವಾನ್​’ ಚಿತ್ರದ ವಿಮರ್ಶೆ ತಿಳಿಸಿದ ಅಲ್ಲು ಅರ್ಜುನ್​; ಪ್ರತಿಯೊಬ್ಬರಿಗೂ ಮೆಚ್ಚುಗೆ ಸೂಚಿಸಿದ ನಟ

‘ಕಭಿ ಅಪ್ನೆ ಕಭಿ ಸಪ್ನೆ’ಯನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಕ್ರಿಶ್ ಹಿಂದಿ ಹಾಗೂ ತೆಲುಗಿನ ಕೆಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ಈಗ ಅಲ್ಲು ಅರ್ಜುನ್​ಗಾಗಿ ಅವರು ಸಿನಿಮಾ ನಿರ್ದೇಶನ ಮಾಡಿದ್ದಾರೆಯೋ ಅಥವಾ ಜಾಹೀರಾತೊ ಅಥವಾ ಕಿರು ಚಿತ್ರವೋ ಸ್ಪಷ್ಟ ಚಿತ್ರಣ ಇನ್ನಷ್ಟೆ ಸಿಗಬೇಕಿದೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿರುವ ‘ಕಭಿ ಅಪ್ನೆ ಕಭಿ ಸಪ್ನೆ’ ಪ್ರೋಮೋ ನೋಡಿದರೆ ಇದು ಜಾಹೀರಾತು ಇರಬೇಕೆಂಬ ಅನುಮಾನ ಮೂಡುತ್ತಿದೆ.

ಅಂದಹಾಗೆ ಅಲ್ಲು ಅರ್ಜುನ್ ಕಳೆದ ಕೆಲ ವರ್ಷಗಳಿಂದಲೂ ತಮ್ಮನ್ನು ‘ಪುಷ್ಪ’ ಸಿನಿಮಾ ಸರಣಿಗೆ ಮೀಸಲಿರಿಸಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಸ್ತುತ ಅಲ್ಲು ಅರ್ಜುನ್ ಬ್ಯುಸಿಯಾಗಿದ್ದು, ಸಿನಿಮಾವು 2024ರ ಆಗಸ್ಟ್ 15ರಂದು ತೆರೆಗೆ ಬರಲಿದೆ. ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್, ತ್ರಿವಿಕ್ರಮ್ ಜೊತೆಗೆ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹೊಸ ಸಿನಿಮಾಲ್ಲಿ ನಟಿಸಲು ಆರಂಭಿಸಲಿದ್ದಾರೆ. ಈ ನಡುವೆ ಬಾಲಿವುಡ್​ನ ಜನಪ್ರಿಯ ನಟ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದಲ್ಲಿಯೂ ಅಲ್ಲು ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ