ಒಂದೇ ದೃಶ್ಯಕ್ಕೆ 50 ಕೋಟಿ ರೂಪಾಯಿ ಖರ್ಚು ಮಾಡಿದ ‘ಪುಷ್ಪ 2’ ಸಿನಿಮಾ ತಂಡ
ಜಾತ್ರೆಯ ದೃಶ್ಯಕ್ಕೆ ವಿಶೇಷ ಮೆರುಗು ನೀಡುವ ಸಲುವಾಗಿ ಮುಂಬೈನಿಂದ ದುಬಾರಿ ಕ್ಯಾಮೆರಾ ತರಿಸಿಕೊಳ್ಳಲಾಗಿದೆ. ಒಟ್ಟಾರೆ ಇದರ ಚಿತ್ರೀಕರಣಕ್ಕೆ 30 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಲಾಗಿದೆ. ಸ್ಟಾರ್ ನಟರ ಸಂಭಾವನೆ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸದ ಖರ್ಚು ಸೇರಿದರೆ ಇನ್ನೂ 20 ಕೋಟಿ ರೂಪಾಯಿ ಬೇಕಾಗುತ್ತದೆ. ಒಟ್ಟು 50 ಕೋಟಿ ರೂಪಾಯಿ ಸುರಿಯಲಾಗಿದೆ.
ಬಹು ನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾವಾದ ‘ಪುಷ್ಪ 2’ ಚಿತ್ರದ ಟೀಸರ್ (Pushpa 2 Teaser) ಇತ್ತೀಚೆಗಷ್ಟೇ ಬಿಡುಗಡೆ ಆಯಿತು. ಇದನ್ನು ನೋಡಿದ ಪ್ರೇಕ್ಷಕರು ಅಚ್ಚರಿಪಟ್ಟಿದ್ದಾರೆ. ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳ ವಲಯದಲ್ಲಿ ಈ ಟೀಸರ್ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ‘ಪುಷ್ಪ 2’ (Pushpa 2) ಟೀಸರ್‌ನಲ್ಲಿ ಯಾವುದೇ ಡೈಲಾಗ್ ಇಲ್ಲದ ಕಾರಣದಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಗಂಗಮ್ಮ ಜಾತ್ರೆಯ ದೃಶ್ಯವಿರುವ ಈ ಟೀಸರ್ ಬಿಡುಗಡೆ ಆದಾಗಿನಿಂದ ಚರ್ಚೆ ಜೋರಾಗಿದೆ. ಈ ಟೀಸರ್ಗಾಗಿ ನಿರ್ಮಾಪಕರು ಎಷ್ಟು ಬಜೆಟ್ ಖರ್ಚು ಮಾಡಿದ್ದಾರೆ ಎಂಬ ಬಗ್ಗೆಯೂ ಅಚ್ಚರಿ ಮಾಹಿತಿ ಕೇಳಿಬರುತ್ತಿದೆ.
ವಿಶೇಷ ಏನೆಂದರೆ, ನಿರ್ದೇಶಕ ಸುಕುಮಾರ್ ಅವರು ಈ ಜಾತ್ರೆಯ ಸನ್ನಿವೇಶವನ್ನು ಸುಮಾರು 30ಕ್ಕೂ ಅಧಿಕ ದಿನಗಳ ಕಾಲ ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಿದ್ದಾರೆ. ಅಲ್ಲು ಸ್ಟುಡಿಯೋದಲ್ಲಿ ವಿಶೇಷವಾಗಿ ನಿರ್ಮಿಸಿದ ಸೆಟ್‌ನಲ್ಲಿ ಈ ದೃಶ್ಯದ ಶೂಟಿಂಗ್ ನಡೆದಿದೆ. ಜಾತ್ರೆಯ ದೃಶ್ಯ ಆದ್ದರಿಂದ ಇದರ ಚಿತ್ರೀಕರಣದಲ್ಲಿ ನೂರಾರು ಮಂದಿ ಭಾಗಿ ಆಗಿದ್ದಾರೆ. ವಿಶೇಷ ಮೇಕಪ್, ಲೈಟಿಂಗ್ ಸೆಟಪ್‌ಗಳು, ಬೃಹತ್ ಸೆಟ್ಗಳು ಸೇರಿದಂತೆ ಎಲ್ಲದಕ್ಕೂ ಭರ್ಜರಿ ಖರ್ಚಾಗಿದೆ.
‘ಪುಷ್ಪ 2’ ಸಿನಿಮಾದ ಟೀಸರ್:
ಈ ದೃಶ್ಯಕ್ಕೆ ವಿಶೇಷ ಮೆರುಗು ನೀಡಲು ಮುಂಬೈನಿಂದ ದುಬಾರಿ ಕ್ಯಾಮೆರಾವನ್ನು ತರಿಸಿಕೊಳ್ಳಲಾಗಿದೆ. ಒಟ್ಟಾರೆ ಇದರ ಚಿತ್ರೀಕರಣಕ್ಕೆ 30 ಕೋಟಿ ರೂಪಾಯಿಗಿಂತಲೂ ಹೆಚ್ಚು ಹಣ ಖರ್ಚಾಗಿದೆ ಎಂದು ಹೇಳಲಾಗಿದೆ. ಸ್ಟಾರ್ ನಟರ ಸಂಭಾವನೆ, ಪೋಸ್ಟ್ ಪ್ರೊಡಕ್ಷನ್ ಕೆಲಸ, ಸ್ಪೆಷಲ್ ಎಫೆಕ್ಟ್ ಹಾಗೂ ಧ್ವನಿ ವಿನ್ಯಾಸ ಇತ್ಯಾದಿ ಸೇರಿದರೆ ಇನ್ನೂ 20 ಕೋಟಿ ರೂಪಾಯಿ ಬೇಕಾಗುತ್ತದೆ. ಅಲ್ಲಿಗೆ, ಈ ಜಾತ್ರೆಯ ಸನ್ನಿವೇಶಕ್ಕೆ ಸುಮಾರು 50 ಕೋಟಿ ರೂಪಾಯಿಗಿಂತಲೂ ಹೆಚ್ಚು ಬಜೆಟ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: 51 ಟೇಕ್ ತೆಗೆದುಕೊಂಡ ಅಲ್ಲು ಅರ್ಜುನ್; ‘ಪುಷ್ಪ 2’ ಟೀಸರ್ ಹಿಂದಿದೆ ಅಚ್ಚರಿ ವಿಷಯ
2021ರ ಡಿಸೆಂಬರ್ನಲ್ಲಿ ಬಿಡುಗಡೆಯಾದ ‘ಪುಷ್ಪ 1’ ಸಿನಿಮಾಗೆ ಭರ್ಜರಿ ಲಾಭ ಆಗಿತ್ತು. ಈಗ ಅದೇ ರೀತಿ ‘ಪುಷ್ಪ 2’ ಸಿನಿಮಾಗೂ ದೊಡ್ಡ ಓಪನಿಂಗ್ ಸಿಗಬೇಕಿದೆ. ಅದಕ್ಕಾಗಿ ಚಿತ್ರತಂಡ ಸಖತ್ ಶ್ರಮ ಹಾಕುತ್ತಿದೆ. ಪ್ಯಾನ್-ಇಂಡಿಯಾ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದ್ದು, ಒಟ್ಟು ಬಜೆಟ್ 250 ಕೋಟಿ ರೂಪಾಯಿಗೂ ಅಧಿಕ ಆಗಲಿದೆ ಎಂದು ಸುದ್ದಿ ಆಗಿದೆ. ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.