ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಪುಷ್ಪ 2’ (Pushpa 2) ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಹೊಸ ಹೊಸ ದಾಖಲೆಗಳನ್ನು ಬರೆಯುವ ಎಲ್ಲ ಲಕ್ಷಣಗಳು ಈಗಲೇ ಕಾಣಿಸುತ್ತಿವೆ. ನಿರ್ದೇಶಕ ಸುಕುಮಾರ್ ಅವರು ಭಾರಿ ಅದ್ದೂರಿಯಾಗಿ ಈ ಸಿನಿಮಾವನ್ನು ಕಟ್ಟಿಕೊಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಆಗಿದೆ. ಇಂದು (ಮೇ 1) ‘ಕಾರ್ಮಿಕದ ದಿನ’ದ ಪ್ರಯುಕ್ತ ‘ಪುಷ್ಪ ಪುಷ್ಪ..’ (Pushpa Pushpa Song) ಲಿರಿಕಲ್ ವಿಡಿಯೋ ಬಿಡುಗಡೆ ಆಗಿ ಧೂಳೆಬ್ಬಿಸುತ್ತಿದೆ. ಅಲ್ಲು ಅರ್ಜುನ್ (Allu Arjun) ಅವರು ಸಂಪೂರ್ಣ ಮಾಸ್ ಅವತಾದಲ್ಲಿ ಅಬ್ಬರಿಸುತ್ತಿದ್ದಾರೆ.
ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ಅವರು ‘ಪುಷ್ಪ 2’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅವರ ಮೇಲೆ ಇರುವ ನಿರೀಕ್ಷೆ ದೊಡ್ಡದು. ಅದಕ್ಕೆ ತಕ್ಕಂತೆಯೇ ಅವರು ಟೈಟಲ್ ಸಾಂಗ್ ಕಂಪೋಸ್ ಮಾಡಿದ್ದಾರೆ. ಹಾಡಿನಲ್ಲಿ ಕಥಾನಾಯಕ ಪುಷ್ಪರಾಜ್ನ ಗುಣಗಾನ ಮಾಡಲಾಗಿದೆ. ಹಾಡಿನಲ್ಲಿ ಅದ್ದೂರಿತನ ಎದ್ದು ಕಾಣಿಸುತ್ತಿದೆ. ಸಿನಿಮಾದ ಮೇಲೆ ಹೈಪ್ ಹೆಚ್ಚಲು ಈ ಸಾಂಗ್ ಕಾರಣವಾಗಿದೆ.
ಇದನ್ನೂ ಓದಿ: 51 ಟೇಕ್ ತೆಗೆದುಕೊಂಡ ಅಲ್ಲು ಅರ್ಜುನ್; ‘ಪುಷ್ಪ 2’ ಟೀಸರ್ ಹಿಂದಿದೆ ಅಚ್ಚರಿ ವಿಷಯ
ಇದು ಪ್ಯಾನ್ ಇಂಡಿಯಾ ಸಿನಿಮಾ. ತೆಲುಗು, ಹಿಂದಿ, ಕನ್ನಡ, ತಮಿಳು, ಮಲಯಾಳ, ಬೆಂಗಾಲಿ ಭಾಷೆಗಳಲ್ಲಿ ‘ಪುಷ್ಪ 2’ ಬಿಡುಗಡೆ ಆಗಲಿದೆ. ಈಗ ಈ ಎಲ್ಲ ಭಾಷೆಗಳಲ್ಲೂ ‘ಪುಷ್ಪ ಪುಷ್ಪ..’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಂದ್ರಬೋಸ್ ಅವರು ತೆಲುಗಿನಲ್ಲಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಕನ್ನಡ ವರ್ಷನ್ಗೆ ವರದರಾಜ್ ಚಿಕ್ಕಬಳ್ಳಾಪುರ ಅವರ ಸಾಹಿತ್ಯವಿದೆ.
ತೆಲುಗಿನಲ್ಲಿ ‘ಪುಷ್ಪ ಪುಷ್ಪ..’ ಹಾಡನ್ನು ನಕಾಶ್ ಅಜೀಜ್ ಹಾಗೂ ದೀಪಕ್ ಬ್ಯೂ ಅವರು ಹಾಡಿದ್ದಾರೆ. ಕನ್ನಡ ವರ್ಷನ್ಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಎಲ್ಲ ಭಾಷೆಯಲ್ಲೂ ಈ ಹಾಡು ಭರ್ಜರಿ ವೀವ್ಸ್ ಪಡೆಯುತ್ತಿದೆ. ಟಿ-ಸಿರೀಸ್ ಮೂಲಕ ಈ ಹಾಡು ಬಿಡುಗಡೆ ಆಗಿದೆ. ಅಲ್ಲು ಅರ್ಜುನ್ ಅವರ ಅಭಿಮಾನಿಗಳ ವಲಯದಲ್ಲಿ ಈ ಹಾಡು ಟ್ರೆಂಡ್ ಸೃಷ್ಟಿಸಲು ಆರಂಭಿಸಿದೆ. 24 ಗಂಟೆಯಲ್ಲಿ ಎಲ್ಲ ಭಾಷೆಯ ವರ್ಷನ್ ಸೇರಿ ಒಟ್ಟು ಎಷ್ಟು ವೀವ್ಸ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಇದೆ. ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ ಮುಂತಾದವರು ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.