ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್

Allu Arjun business: ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮಕ್ಕೆ ಅಲ್ಲು ಅರ್ಜುನ್ ಕೈ ಹಾಕಿದ್ದಾರೆ. ಅಲ್ಲು ಅರ್ಜುನ್ ಪ್ರೀಮಿಯಮ್ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದು, ಅದರ ವಿಶೇಷತೆಗಳೇನು?

ಹೊಸ ಉದ್ಯಮಕ್ಕೆ ಕೈ ಹಾಕಿದ ಅಲ್ಲು ಅರ್ಜುನ್, ಮಹೇಶ್ ಬಾಬುಗೆ ಠಕ್ಕರ್
Allu Arjun

Updated on: Mar 11, 2026 | 11:42 AM

ಅಲ್ಲು ಅರ್ಜುನ್ (Allu Arjun) ಸ್ಟಾರ್ ಪ್ಯಾನ್ ಇಂಡಿಯಾ ನಟ. ಅಲ್ಲು ಕುಟುಂಬ ಹಲವು ದಶಗಳಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವುದು ಮಾತ್ರವೇ ಅಲ್ಲದೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ತೆಲುಗು ಚಿತ್ರರಂಗದ ಯಶಸ್ವಿ ನಿರ್ಮಾಪಕ ಮತ್ತು ವಿತರಕ. ನಿರ್ಮಾಣ ಸಂಸ್ಥೆ, ಒಟಿಟಿ, ಸ್ಟುಡಿಯೋಗಳನ್ನು ಅಲ್ಲು ಕುಟುಂಬ ಹೊಂದಿದೆ. ಇದೀಗ ಹೊಸ ಉದ್ಯಮಕ್ಕೆ ಅಲ್ಲು ಅರ್ಜುನ್ ಕೈ ಹಾಕಿದ್ದಾರೆ.

ಅಲ್ಲು ಅರ್ಜುನ್ ಅವರು ಮಲ್ಟಿಪ್ಲೆಕ್ಸ್ ಒಂದನ್ನು ನಿರ್ಮಿಸಿದ್ದು, ಹೈದರಾಬಾದ್​​ನ ಈ ವರೆಗಿನ ಮಲ್ಟಿಪ್ಲೆಕ್ಸ್​ಗಳಲ್ಲಿಯೇ ಅತ್ಯಂತ ಗುಣಮಟ್ಟದ ಮಲ್ಟಿಪ್ಲೆಕ್ಸ್ ಇದಾಗಲಿದೆ ಎನ್ನಲಾಗುತ್ತಿದೆ. ಹೈದರಾಬಾದ್​ನ ಕೋಕಾಪೇಟೆಯಲ್ಲಿ ಎಎ ಮಲ್ಟಿಪ್ಲೆಕ್ಸ್ ನಿರ್ಮಾಣವಾಗಿದ್ದು, ನಾಳೆ (ಮಾರ್ಚ್ 12) ಇದರ ಉದ್ಘಾಟನಾ ಸಮಾರಂಭ ಆಯೋಜನೆಯಾಗಿದೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಖುದ್ದು ಈ ಮಲ್ಟಿಪ್ಲೆಕ್ಸ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿಂದೆ ಏಷಿಯನ್ ಸಿನಿಮಾಸ್ ಜೊತೆಗೆ ಕೈ ಜೋಡಿಸಿ ಎಎಎ ಸಿನಿಮಾಸ್ ಹೆಸರಿನ ಮಲ್ಟಿಪ್ಲೆಕ್ಸ್ ನಿರ್ಮಿಸಿದ್ದರು. ಇದೀಗ ಪ್ರೀಮಿಯಮ್ ಮಲ್ಟಿಪ್ಲೆಕ್ಸ್ ನಿರ್ಮಾಣ ಮಾಡಿದ್ದಾರೆ.

ಅಲ್ಲು ಅರ್ಜುನ್ ಮಾರ್ಕ್ಯೂ ಮಲ್ಟಿಪ್ಲೆಕ್ಸ್​ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪ್ರೇಕ್ಷಕರಿಗೆ ಅತ್ಯುನ್ನತ ಸಿನಿಮಾ ವೀಕ್ಷಣೆ ಅನುಭವವನ್ನು ನೀಡಲಿದೆ. ಈ ಮಲ್ಟಿಪ್ಲೆಕ್ಸ್​​ನಲ್ಲಿ ನಾಲ್ಕು ಸ್ಕ್ರೀನ್​​ಗಳು ಇರಲಿದ್ದು, ಇವುಗಳಲ್ಲಿ ಮೂರು ಸಾಮಾನ್ಯ ಸ್ಕ್ರೀನ್​​ಗಳಾಗಿದ್ದರೆ ಒಂದು ಮಾತ್ರ ವಿಶೇಷ ಡಾಲ್ಬಿ ಸ್ಕ್ರೀನ್ ಆಗಿರಲಿದೆ. ಡಾಲ್ಬಿ ಸಿನಿಮಾಸ್ ಸ್ಕ್ರೀನ್ ಸಾಕಷ್ಟು ವಿಶೇಷತೆಗಳನ್ನು ಹೊಂದಿರಲಿದೆ. ಡ್ಯುಯಲ್ 4K ಲೇಸರ್ ಪ್ರೊಜೆಕ್ಷನ್, ಡಾಲ್ಬಿ ವಿಷನ್, ಡಾಲ್ಬಿ 3D ಸಾಮರ್ಥ್ಯ ಮತ್ತು ಇಮ್ಮರ್ಸಿವ್ ಡಾಲ್ಬಿ ಅಟ್ಮೋಸ್ ಸರೌಂಡ್ ಸೌಂಡ್ ಅನ್ನು ಹೊಂದಿರಲಿದೆ. ಕಪ್ಪು ಬಣ್ಣವೇ ಪ್ರಧಾನವಾಗಿರುವ ಒಳಾಂಗಣ ವಿನ್ಯಾಸವನ್ನು ಈ ಮಲ್ಟಿಪ್ಲೆಕ್ಸ್ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಪರದೆಗಳು ಮತ್ತು ಸೌಂಡ್ ಅನ್ನು ಒಳಗೊಂಡಿರಲಿವೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಫ್ಯಾನ್ಸ್ ರೆಡಿ ಆಗಿ; ಬರ್ತ್​ಡೇಗೆ ಸಿಗಲಿದೆ ದೊಡ್ಡ ಗಿಫ್ಟ್

ಹೈದರಾಬಾದ್​​ನಲ್ಲಿ ಈಗಾಗಲೇ ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ವಿಜಯ್ ದೇವರಕೊಂಡ ಒಡೆತನದ ಎವಿಡಿ ಸಿನಿಮಾಸ್​​ಗಳು ಇವೆ. ಇದೀಗ ಅಲ್ಲು ಅರ್ಜುನ್ ಸಹ ಮಲ್ಟಿಪ್ಲೆಕ್ಸ್ ಬ್ಯುಸಿನೆಸ್​​ಗೆ ಕೈಹಾಕಿದ್ದು ಈ ಇಬ್ಬರಿಗೂ ಕಠಿಣ ಸ್ಪರ್ಧೆಯನ್ನು ಒಡ್ಡಲಿದ್ದಾರೆ. ಅಲ್ಲು ಅರ್ಜುನ್ ಅವರ ಈ ಹೊಸ ಮಲ್ಟಿಪ್ಲೆಕ್ಸ್​ ಅನ್ನು ನಾಳೆ (ಮಾರ್ಚ್ 12) ಸಿಎಂ ರೇವಂತ್ ರೆಡ್ಡಿ ಉದ್ಘಾಟನೆ ಮಾಡಲಿದ್ದಾರೆ. ಅದರ ಬಳಿಕ ಕೆಲವು ಸಿನಿಮಾಗಳನ್ನು ಪರೀಕ್ಷಾರ್ಥವಾಗಿ ಪ್ರದರ್ಶನ ಮಾಡಲಾಗುವುದಂತೆ ಅದರಲ್ಲಿ ಹಾಲಿವುಡ್​ನ ‘ಎಫ್ 1’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳನ್ನು ಪರೀಕ್ಷಾರ್ಥ ಪ್ರದರ್ಶಿಸಲಾಗುತ್ತಿದೆ. ಅದಾದ ಬಳಿಕ ಮಾರ್ಚ್ 19ಕ್ಕೆ ಯುಗಾದಿ ಹಬ್ಬದಂದು ಸಾರ್ವಜನಿಕರಿಗೆ ಲೋಕಾರ್ಪಣೆಗೊಳ್ಳಲಿದೆ. ಟಿಕೆಟ್ ಬೆಲೆ 295 ರಿಂದ 500 ರೂಪಾಯಿಗಳ ವರೆಗೆ ಇರಲಿದೆ.

ಅಲ್ಲು ಅರ್ಜುನ್ ಅವರು ಖುದ್ದು ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್​​ನಲ್ಲಿ ಅಲ್ಲು ಅರ್ಜುನ್ ಅವರ ಪಬ್ಬು, ಬಫೆಲೊ ವಿಂಗ್ಸ್ ಹೆಸರಿನ ಐಶಾರಾಮಿ ಸ್ಪೋರ್ಟ್ ರೆಸ್ಟೊರೆಂಟ್​ಗಳು ಸಹ ಇವೆ. ಇವುಗಳ ಜೊತೆಗೆ ನಿರ್ಮಾಣ ಸಂಸ್ಥೆ, ಸ್ಟುಡಿಯೋ, ಒಟಿಟಿಯಲ್ಲಿಯೂ ಅವರ ಪಾಲಿದೆ. ರಿಯಲ್ ಎಸ್ಟೇಟ್ ಮೇಲೂ ಹೂಡಿಕೆ ಮಾಡಿದ್ದಾರೆ. ಇದೀಗ ಮಲ್ಟಿಪ್ಲೆಕ್ಸ್​ ಸಹ ಪ್ರಾರಂಭಿಸಿದ್ದು, ಒಟ್ಟಾರೆ ತಮ್ಮ ಉದ್ಯಮವನ್ನು ವಿಸ್ತರಿಸುತ್ತಾ ಸಾಗುತ್ತಿದ್ದಾರೆ ಅಲ್ಲು ಅರ್ಜುನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us