‘ಪುಷ್ಪ 2’ ಚಿತ್ರಕ್ಕಾಗಿ ಮಗಳನ್ನೇ ದೂರ ಇಟ್ಟ ಅಲ್ಲು ಅರ್ಜುನ್

| Updated By: ರಾಜೇಶ್ ದುಗ್ಗುಮನೆ

Updated on: Dec 02, 2024 | 7:54 AM

ಪುಷ್ಪರಾಜ್ ಅವತಾರ ಎಲ್ಲರಿಗೂ ಗೊತ್ತು. ಮೊದಲ ಭಾಗದಲ್ಲಿ ಉದ್ದನೆಯ ಗಡ್ಡದಲ್ಲಿ ಅವರು ಕಾಣಿಸಿಕೊಂಡಿದ್ದರು. ಎರಡನೇ ಪಾರ್ಟ್​ನಲ್ಲೂ ಅವರು ಹಾಗೆಯೇ ಕಾಣಿಸಿಕೊಂಡಿದ್ದಾರೆ. ಅವರ ಉದ್ದನೆಯ ಗಡ್ಡ ಮಗಳಿಗೆ ಇಷ್ಟ ಆಗಿಲ್ಲವಂತೆ. ಈ ಬಗ್ಗೆ ಅಲ್ಲು ಅರ್ಜುನ್ ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ.

‘ಪುಷ್ಪ 2’ ಚಿತ್ರಕ್ಕಾಗಿ ಮಗಳನ್ನೇ ದೂರ ಇಟ್ಟ ಅಲ್ಲು ಅರ್ಜುನ್
ಅಲ್ಲು ಅರ್ಜುನ್
Follow us on

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ನಾನಾ ಕಡೆಗಳಿಗೆ ಅವರು ತೆರಳುತ್ತಿದ್ದಾರೆ. ಅವರ ಲುಕ್ ಅನೇಕರಿಗೆ ಇಷ್ಟ ಆಗಿದೆ. ಉದ್ದ ಕೂದಲು ಹಾಗೂ ಉದ್ದನೆಯ ಗಡ್ಡ ಬಿಟ್ಟುಕೊಂಡು ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದರು ಅಲ್ಲು ಅರ್ಜುನ್. ಇದು ಅವರ ಅಭಿಮಾನಿಗಳಿಗೆ ಇಷ್ಟ ಆಗಿರಬಹುದು. ಆದರೆ, ಮನೆಯ ಸದಸ್ಯರಿಗೆ ಇಷ್ಟ ಆಗಿರಲಿಲ್ಲ. ಇದು ಅವರಿಗೆ ಬೇಸರ ಮೂಡಿಸಿದೆ.

ಪುಷ್ಪರಾಜ್ ಅವತಾರ ಎಲ್ಲರಿಗೂ ಗೊತ್ತು. ಮೊದಲ ಭಾಗದಲ್ಲಿ ಉದ್ದನೆಯ ಗಡ್ಡದಲ್ಲಿ ಅವರು ಕಾಣಿಸಿಕೊಂಡಿದ್ದರು. ಎರಡನೇ ಪಾರ್ಟ್​ನಲ್ಲೂ ಅವರು ಹಾಗೆಯೇ ಕಾಣಿಸಿಕೊಂಡಿದ್ದಾರೆ. ಅವರ ಉದ್ದನೆಯ ಗಡ್ಡ ಮಗಳಿಗೆ ಇಷ್ಟ ಆಗಿಲ್ಲವಂತೆ. ಈ ಬಗ್ಗೆ ಅಲ್ಲು ಅರ್ಜುನ್ ಅವರು ಓಪನ್ ಆಗಿ ಹೇಳಿಕೊಂಡಿದ್ದಾರೆ. ‘ಮಗಳು ನನ್ನಿಂದ ಅಂತರ ಕಾಯ್ದುಕೊಂಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ನನು ಸಿನಿಮಾ ಮುಗಿಯಲಿ ಎಂದು ಕಾಯುತ್ತಿದ್ದೇನೆ. ನಾನು ಕ್ಲೀನ್ ಶೇವ್ ಮಾಡಿಕೊಳ್ಳಬೇಕು. ಏಕೆಂದರೆ ನನ್ನ ಮಗಳು ಹತ್ತಿರ ಬರಲೇ ಇಲ್ಲ. ನನಗೆ ಗಡ್ಡ ಇದೆ ಎಂಬ ಕಾರಣಕ್ಕೆ ಅವಳಿಗೆ ಮುತ್ತು ಕೊಡಲು ಸಾಧ್ಯವಾಗಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದ ಅವಳಿಗೆ ಸರಿಯಾಗಿ ಮುತ್ತು ಕೊಡೋಕೆ ಆಗಿಲ್ಲ’ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

ಅಲ್ಲು ಅರ್ಜುನ್ ಅವರು ಮಗಳಿಗಾಗಿ ಗಡ್ಡ ತೆಗೆಸಿದರೆ ಸಿನಿಮಾ ಶೂಟ್ ಮಾಡೋಕೆ ಆಗೋದಿಲ್ಲ. ಒಂದೊಮ್ಮೆ ಗಡ್ಡ ತೆಗೆಯದೇ ಇದ್ದರೆ ಮಗಳು ಹತ್ತಿರ ಬರೋದಿಲ್ಲ. ಒಟ್ಟಾರೆಯಾಗಿ ಅವರು ಈ ಸಿನಿಮಾಗಾಗಿ ಅವರು ಕುಟುಂಬದಿಂದ ದೂರವೇ ಉಳಿಯಬೇಕಾದ ಪರಿಸ್ಥಿತಿ ಬಂದಿತ್ತು.

ಈ ಮೊದಲು ಕುಟುಂಬದ ಜೊತೆ ಅಮೆರಿಕ ತೆರಳಲು ಅಲ್ಲು ಅರ್ಜುನ್ ಅವರು ಗಡ್ಡ ಟ್ರಿಮ್ ಮಾಡಿದ್ದರು. ಸಿನಿಮಾ ಮಾಡಲು ಇಷ್ಟ ಇಲ್ಲದ ಕಾರಣಕ್ಕೆ ಈ ರೀತಿ ಆಗಿದೆ ಎಂದಲ್ಲ ಸುದ್ದಿ ಆಗಿತ್ತು. ಆದರೆ, ಅವರು ಮಗಳಿಗೋಸ್ಕರ ಗಡ್ಡ ಟ್ರಿಮ್ ಮಾಡಿಕೊಂಡಿದ್ದಿರಬಹುದು ಎಂದು ಎಲ್ಲರೂ ಹೇಳುತ್ತಿದ್ದಾರೆ.

ಇದನ್ನೂ ಓದಿ: ‘ನಿನ್ನ ಬಿಟ್ಟು ಯಾರನ್ನೂ ನೋಡಿಲ್ಲ’: ರಶ್ಮಿಕಾ ಬಗ್ಗೆ ಅಲ್ಲು ಅರ್ಜುನ್ ರೊಮ್ಯಾಂಟಿಕ್ ಮಾತು

ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ, ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದ ‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗುತ್ತಿದೆ. ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಧನಂಜಯ,  ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.