ಅಮಲಾ ಪೌಲ್ ಮಾಜಿ ಬಾಯ್ಫ್ರೆಂಡ್ ಅರೆಸ್ಟ್; ‘ಹೆಬ್ಬುಲಿ’ ನಟಿ ಮಾಡಿದ ಆರೋಪಗಳು ಒಂದೆರಡಲ್ಲ
ಅಮಲಾ ಅವರು 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ಮದುವೆ ಆದರು. ಆದರೆ, ಇವರ ನಡುವೆ ಹೊಂದಾಣಿಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇಬ್ಬರೂ 2017ರಲ್ಲಿ ವಿಚ್ಛೇದನ ಪಡೆದುಕೊಂಡರು. ಅಮಲಾ ನಂತರ ಮತ್ತೆ ಡೇಟಿಂಗ್ ಆರಂಭಿಸಿದ್ದರು.
ನಟಿ ಅಮಲಾ ಪೌಲ್ (Amala Paul) ಅವರು ಸುದೀಪ್ ನಟನೆಯ ‘ಹೆಬ್ಬುಲಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು. ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಬೇಡಿಕೆ ಇದೆ. ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲಿ ಅಮಲಾ ನಟಿಸಿದ್ದಾರೆ. ಈಗ ಅವರು ಸುದ್ದಿಯಲ್ಲಿದ್ದಾರೆ. ಹಾಗಂತ ಇದು ಸಿನಿಮಾ ವಿಚಾರ ಅಲ್ಲ. ಅಮಲಾ ಸುದ್ದಿ ಆಗೋಕೆ ಕಾರಣ ಅವರ ಮಾಜಿ ಬಾಯ್ಫ್ರೆಂಡ್. ಅವರ ವಿರುದ್ಧ ದೂರನ್ನು ಕೂಡ ನೀಡಿದ್ದಾರೆ ಅಮಲಾ. ಈ ಸಂಬಂಧ ತಮಿಳುನಾಡು ಪೊಲೀಸರು (Tamil Nadu Police) ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಅಮಲಾ ಅವರು 2014ರಲ್ಲಿ ನಿರ್ದೇಶಕ ಎ.ಎಲ್. ವಿಜಯ್ ಅವರನ್ನು ಮದುವೆ ಆದರು. ಆದರೆ, ಇವರ ನಡುವೆ ಹೊಂದಾಣಿಕೆ ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಇಬ್ಬರೂ 2017ರಲ್ಲಿ ವಿಚ್ಛೇದನ ಪಡೆದುಕೊಂಡರು. ಪರಸ್ಪರ ಸಮ್ಮತಿಯೊಂದಿಗೆ ಇಬ್ಬರೂ ಬೇರೆ ಆಗಿದ್ದರು. ಎರಡು ವರ್ಷಗಳ ಕಾಲ ಸೈಲೆಂಟ್ ಇದ್ದ ಅಮಲಾ ನಂತರ ಮತ್ತೆ ಡೇಟಿಂಗ್ ಆರಂಭಿಸಿದ್ದರು.
ಮುಂಬೈ ಮೂಲದ ಸಿಂಗರ್ ಭವಿಂದರ್ ಸಿಂಗ್ ಜತೆ ಅಮಲಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. 2020ರಲ್ಲಿ ಭವಿಂದರ್ ಅವರು ಅಮಲಾ ಜತೆ ಮದುವೆ ಆಗುತ್ತಿರುವ ರೀತಿಯಲ್ಲಿ ಫೋಟೋ ಪೋಸ್ಟ್ ಮಾಡಿದ್ದರು. ನಂತರ ಇದನ್ನು ಡಿಲೀಟ್ ಮಾಡಿದ್ದರು. ಆದರೆ, ಈ ವಿಚಾರ ಬೇರೆಯದೇ ತಿರುವು ಪಡೆದುಕೊಂಡಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಅಮಲಾ ಕೇಸ್ ದಾಖಲು ಮಾಡಿದ್ದರು.
‘ಭವಿಂದರ್ ನನ್ನನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾನೆ. ನನ್ನ ಅನುಮತಿ ಇಲ್ಲದೆ ಫೋಟೋ ಪೋಸ್ಟ್ ಮಾಡಲಾಗಿದೆ’ ಎಂದು ನಟಿ ಆರೋಪಿಸಿದ್ದರು. ಮದುವೆ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದರು. ‘ನಾನು ಮದುವೆ ಆಗಿಲ್ಲ. ಆ ಥೀಮ್ನಲ್ಲಿ ನಾವು ಫೋಟೋಶೂಟ್ ಮಾಡಿಸಿದ್ದೆವು ಅಷ್ಟೇ’ ಎಂಬುದಾಗಿ ಅವರು ಹೇಳಿದ್ದರು.
ಇದನ್ನೂ ಓದಿ: Amala Paul: ನಿಸರ್ಗದ ಮಡಿಲಿನಲ್ಲಿ ‘ಹೆಬ್ಬುಲಿ’ ಬೆಡಗಿ; ಫೋಟೋಗಳಿಗೆ ಮಸ್ತ್ ಪೋಸ್ ನೀಡಿದ ಅಮಲಾ ಪೌಲ್
ಈಗ ಅಮಲಾ ಪೌಲ್ಗೆ ಮೋಸ ಆಗಿದೆ. ಅಮಲಾ ಹಾಗೂ ಭವಿಂದರ್ ಜತೆಯಾಗಿ ಒಂದು ನಿರ್ಮಾಣ ಸಂಸ್ಥೆ ಆರಂಭಿಸಿದ್ದರು. ಅಮಲಾ ಕೂಡ ಸಾಕಷ್ಟು ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಅಮಲಾ ಪೌಲ್ ಹಣವನ್ನು ಭವಿಂದರ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದಾಗ ಖಾಸಗಿ ಫೋಟೋಗಳನ್ನು ಲೀಕ್ ಮಾಡುವ ಬೆದರಿಕೆ ಹಾಕಿದ್ದಾರೆ ಭವಿಂದರ್. ಈ ಕಾರಣಕ್ಕೆ ಅಮಲಾ ದೂರು ದಾಖಲು ಮಾಡಿದ್ದರು. ಹೀಗಾಗಿ, ಭವಿಂದರ್ ಅವರನ್ನು ಅರೆಸ್ಟ್ ಮಾಡಲಾಗಿದೆ.