ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬಾಡಿಗೆ ತಾಯಂದಿರ ಮುಲಕ ಪಡೆಯುವವರು ಒಂದೆಡೆಯಾದರೆ, ಒಂದೇ ಮಗು ಸಾಕು ಎಂದು ಹೇಳುವವರು ಹಲವರು. ಎರಡಕ್ಕಿಂಕ ಹೆಚ್ಚು ಮಕ್ಕಳನ್ನು ಮಾಡಿಕೊಂಡರಂತೂ ಮೂಗು ಮುರಿಯುವವರೇ ಹೆಚ್ಚು ಹೀಗಿದ್ದಾಗ ಅಮೆರಿಕದ ಗಾಯಕಿ ಕೇಕೆ ವ್ಯಾಟ್ (Keke Wyatt) (39) ಅವರು 11 ನೇ ಮಗುವಿನ ತಾಯಿಯಾಗುತ್ತಿದ್ದಾರೆ, ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್(Post) ಒಂದನ್ನು ಹಂಚಿಕೊಂಡಿದ್ದಾರೆ. ಪತಿ ಜಕಕರಿಯಾ ಡೇವಿಡ್ (Zacakariah David) ಜತೆಗೆ ತಮ್ಮ ಉಳಿದ ಮಕ್ಕಳೊಂದಿಗೆ ನಿಂತಿರುವ ಫೋಟೊವನ್ನು ಹಂಚಿಕೊಂಡು 11 ನೇ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಹೇಳಿಕೊಂಡಿದ್ದಾರೆ.
10 ಮಕ್ಕಳಿಗೂ ಅಣ್ಣ, ಅಕ್ಕ ಆಗುತ್ತಿದ್ದೇವೆಂದು ಸೂಚಿಸುವ ಟೀ ಶರ್ಟ್ಗಳನ್ನು ಧರಿಸಿದ್ದು, ವ್ಯಾಟ್ ಪತಿ ಜಕಕರಿಯಾ ಡೇವಿಡ್ ಕೂಡ ಕಪ್ಪು ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ಇನ್ನೊಂದು ಕೊನೆಯ ಮಗು ರೀತಿ ಅಕ್ಷರಗಳನ್ನು ಬರೆದುಕೊಂಡಿದ್ದಾರೆ. ವ್ಯಾಟ್ ಹಂಚಿಕೊಂಡ ಫೋಟೋಗೆ ನಾನು ಮತ್ತು ನನ್ನ ಪತಿ, ಮಕ್ಕಳು ಇನ್ನೊಂದು ಮಗುವನ್ನು ಸೇರಿಸಿಕೊಳ್ಳುತ್ತಿದ್ದೇವೆ ಎಂದು ಹಲವು ಹ್ಯಾಷ್ಟ್ಯಾಗ್ ಸೇರಿಸಿ ಕ್ಯಾಪ್ಷನ್ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋ ಕೂಡ ವೈರಲ್ ಆಗಿದ್ದು, ಅಭಿಮಾನಿಗಳು ಅಭಿನಂದಿಸಿದ್ದಾರೆ.
ವ್ಯಾಟ್ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು ಅದರ ಪೋಟೋಗಳನ್ನೂ ಕೂಡ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ ಧರಿಸಿದ ಫೋಟೋ ಶೇರ್ ಮಾಡಿದ್ದಾರೆ. ವ್ಯಾಟ್ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ಮಗುವಿನ ಆಗಮನದ ಕುರಿತು ಹಂಚಿಕೊಂಡ ತಕ್ಷಣ ನೆಟ್ಟಿಗರು ಶಾಕ್ ಆಗಿದ್ದಾರೆ. ತರಹೇವಾರಿ ಕಾಮೆಂಟ್ಗಳು ಹರಿದು ಬಂದಿವೆ. ಆಕೆಯ ಫೋಟೋ ನೋಡಿ ಹಲವರು ಇಷ್ಟೊಂದು ಮಕ್ಕಳೊಂದಿಗೆ ಹೇಗೆ ಇರುತ್ತಿರಿ ಎಂದು ಪ್ರಶ್ನಿಸಿದ್ದಾರೆ.
ಕೇಕೆ ವ್ಯಾಟ್ 2000ನೇ ಇಸವಿಯಲ್ಲಿ ಮೊದಲ ಬಾರಿ ತಾಯಿಯಾಗಿದ್ದಾರೆ. 2020ರಲ್ಲಿ ಅವರು 9ನೇ ಮಗುವಿನ ತಾಯಿಯಾಗಿದ್ದರು. ಅವರ ಮೊದಲ ಮೂರು ಮಕ್ಕಳು ಮೊದಲ ಪತಿಯೊಂದಿಗೆ ವಾಸವಾಗಿದ್ದಾರೆ ಎನ್ನಲಾಗಿದೆ. ಸದ್ಯ ಅಭಿಮಾನಿಗಳು ಕೇಕೆ ವ್ಯಾಟ್ ಅವರಿಗೆ ಅಭಿನಂದಿಸಿದ್ದು, ಅವರ ಕುಟುಂಬದವರನ್ನೇ ಸೇರಿಸಿ ಒಂದು ರಿಯಾಲಿಟಿ ಶೋ ಆರಂಭಿಸುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಕೊತ್ತಂಬರಿ ಸೊಪ್ಪಿನ ಐಸ್ಕ್ರೀಮ್ ಪರಿಚಯಿಸಿದ ಮೆಕ್ಡಾನಲ್ಡ್ಸ್: ಮೂಗು ಮುರಿದ ಆಹಾರ ಪ್ರಿಯರು
Published On - 4:13 pm, Wed, 23 February 22