ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ

‘ಆರ್​ಆರ್​ಆರ್’ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಬಾರಿ ಆಸ್ಕರ್​ ರೇಸ್​ಗೆ ಈ ಸಿನಿಮಾ ಕೂಡ ಆಯ್ಕೆ ಆಗುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣದಿಂದ ತಂಡಕ್ಕೆ ಅಭಿನಂದನೆ ತಿಳಿಸುವ ಆಲೋಚನೆ ಅಮಿತ್ ಶಾ ಅವರಿಗೆ ಇತ್ತು ಎನ್ನಲಾಗಿದೆ.

ಕೊನೇ ಕ್ಷಣದಲ್ಲಿ ಅಮಿತ್ ಶಾ ಭೇಟಿಯಿಂದ ಹಿಂದೆ ಸರಿದ ರಾಜಮೌಳಿ? ಇದಕ್ಕಿದೆ ದೊಡ್ಡ ಕಾರಣ
ರಾಜಮೌಳಿ-ಅಮಿತ್ ಶಾ-ಜ್ಯೂ.ಎನ್​ಟಿಆರ್
Edited By:

Updated on: Aug 23, 2022 | 4:26 PM

ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಟಾಲಿವುಡ್ ಸ್ಟಾರ್ ನಟ ಜ್ಯೂ.ಎನ್​ಟಿಆರ್ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇವರಿಬ್ಬರೂ ಭೇಟಿ ಆಗಿದ್ದು ಏಕೆ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಈ ಭೇಟಿ ಬೆನ್ನಲ್ಲೇ ಅಚ್ಚರಿಯ ವಿಚಾರಗಳು ಹೊರ ಬೀಳುತ್ತಿವೆ. ಅಮಿತ್ ಶಾ ಅವರು ‘ಆರ್​ಆರ್​ಆರ್’ ಚಿತ್ರದ (RRR Movie) ಮುಖ್ಯ ಸ್ಥಂಭಗಳಾದ ಜ್ಯೂ.ಎನ್​ಟಿಆರ್​, ರಾಮ್ ಚರಣ್ (Ram Charan) ಹಾಗೂ ಎಸ್​​.ಎಸ್​. ರಾಜಮೌಳಿ ಅವರನ್ನು ಭೇಟಿ ಮಾಡಲು ಆಲೋಚಿಸಿದ್ದರು. ಆದರೆ, ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಜ್ಯೂ.ಎನ್​ಟಿಆರ್​​ ಅವರನ್ನು ಮಾತ್ರ ಭೇಟಿಯಾಗಿದ್ದಾರೆ.

‘ಆರ್​ಆರ್​ಆರ್’ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಈ ಬಾರಿ ಆಸ್ಕರ್​ ರೇಸ್​ಗೆ ಈ ಸಿನಿಮಾ ಕೂಡ ಆಯ್ಕೆ ಆಗುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣದಿಂದ ತಂಡಕ್ಕೆ ಅಭಿನಂದನೆ ತಿಳಿಸುವ ಆಲೋಚನೆ ಅಮಿತ್ ಶಾ ಅವರಿಗೆ ಇತ್ತು ಎನ್ನಲಾಗಿದೆ. ಆದರೆ, ರಾಮ್ ಚರಣ್ ಅವರು ಆ ಸಂದರ್ಭದಲ್ಲಿ ಗೋವಾಗೆ ತೆರಳಿದ್ದರು. ತಂದೆಯ ಹುಟ್ಟುಹಬ್ಬ ಆಚರಿಸುವ ಉದ್ದೇಶದಿಂದ ಅವರು ಗೋವಾದಲ್ಲಿದ್ದರು. ಈ ಕಾರಣಕ್ಕೆ ಅಮಿತ್ ಶಾ ಭೇಟಿ ಆಗಲು ಅವರಿಗೆ ಸಾಧ್ಯವಾಗಿಲ್ಲ.

ಜ್ಯೂ.ಎನ್​ಟಿಆರ್ ಹಾಗೂ ರಾಜಮೌಳಿ ಜತೆಗಿನ ಅಮಿತ್ ಶಾ ಭೇಟಿಯನ್ನು ಖಾಸಗಿ ಹೋಟೆಲ್​ನಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ, ರಾಜಮೌಳಿ ಅವರು ಕೊನೇ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅವರು ಅಮಿತ್ ಶಾ ಭೇಟಿ ಮಾಡುವುದಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ಇದಕ್ಕೆ ಈಗ ಕಾರಣ ಏನು ಎಂಬುದು ಕೂಡ ಹೊರ ಬಿದ್ದಿದೆ.

ಇದನ್ನೂ ಓದಿ
‘ರಾಜಕೀಯ ಸೇರಿ’: ಜ್ಯೂ.ಎನ್​ಟಿಆರ್​ಗೆ ಆಫರ್ ನೀಡಿ ಬಂದ ಅಮಿತ್​ ಶಾ; ಹೊರ ಬಿತ್ತು ಅಸಲಿ ವಿಚಾರ
Jr NTR: ಪತ್ನಿ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ನಟ ಜ್ಯೂನಿಯರ್ ಎನ್​ಟಿಆರ್​
Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್​ಟಿಆರ್​ ಅಭಿಮಾನಿ ನಿಧನ; ಸ್ಟಾರ್​ ನಟನ ಪ್ರಾರ್ಥನೆಯೂ ಫಲಿಸಲಿಲ್ಲ
ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಜ್ಯೂ. ಎನ್​ಟಿಆರ್​; ‘ಬಾಲ ರಾಮಾಯಣಂ’ ನೆನಪಿಸಿದ ಫೋಟೋಗಳು

ರಾಜಮೌಳಿ ತಂದೆ ವಿವಿ ವಿಜಯೇಂದ್ರ ಪ್ರಸಾದ್ ಅವರಿಗೆ ಇತ್ತೀಚೆಗೆ ಬಿಜೆಪಿ ರಾಜ್ಯಸಭಾ ಸೀಟ್ ನೀಡಿತ್ತು. ಇಂತಹ ಸಂದರ್ಭದಲ್ಲಿ ರಾಜಮೌಳಿ ಹಾಗೂ ಅಮಿತ್ ಶಾ ಭೇಟಿ ಆದರೆ ಅದು ಬೇರೆಯದೇ ರೀತಿಯಲ್ಲಿ ಚರ್ಚೆ ಆಗಲಿದೆ. ಇದು ಸ್ಟಾರ್ ನಿರ್ದೇಶಕನಿಗೆ ಇಷ್ಟವಿಲ್ಲ. ಈ ಕಾರಣದಿಂದ ಅವರು ಈ ಭೇಟಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: Jr NTR: ಅಮಿತ್​ ಶಾ ಎದುರು ಕೈ ಕಟ್ಟಿ ಕುಳಿತ ಜ್ಯೂ. ಎನ್​ಟಿಆರ್​; ಅಚ್ಚರಿ ಮೂಡಿಸಿತು ಗೃಹ ಸಚಿವರ ಭೇಟಿ

ಅಮಿತ್ ಶಾ ಹಾಗೂ ಜ್ಯೂ.ಎನ್​ಟಿಆರ್ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ರಾಜಕೀಯಕ್ಕೆ ಬರುವಂತೆ ಅಮಿತ್ ಶಾ ಅವರು ಜ್ಯೂ.ಎನ್​ಟಿಆರ್​ಗೆ ಆಹ್ವಾನ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಯಾರೊಬ್ಬರೂ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ.