‘ರಾಜಕೀಯ ಸೇರಿ’: ಜ್ಯೂ.ಎನ್ಟಿಆರ್ಗೆ ಆಫರ್ ನೀಡಿ ಬಂದ ಅಮಿತ್ ಶಾ; ಹೊರ ಬಿತ್ತು ಅಸಲಿ ವಿಚಾರ
ಭಾನುವಾರ (ಆಗಸ್ಟ್ 21) ಜ್ಯೂ.ಎನ್ಟಿಆರ್ ಮನೆಗೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಬಿಜೆಪಿಯ ಚಾಣಾಕ್ಯ ಎಂದೇ ಫೇಮಸ್ ಆದ ಅಮಿತ್ ಶಾ ಸ್ಟಾರ್ ನಟನನ್ನು ಭೇಟಿ ಮಾಡುತ್ತಾರೆ ಎಂದರೆ ಅದರ ಹಿಂದೆ ರಾಜಕೀಯ ಕಾರಣ ಇದೆ ಎಂದೇ ಹೇಳಲಾಗುತ್ತಿದೆ. ‘
ಟಾಲಿವುಡ್ ನಟ ಜ್ಯೂ.ಎನ್ಟಿಆರ್ (JR. Ntr) ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ರಾಜಕೀಯ ಉದ್ದೇಶದಿಂದಲೇ ಇವರ ಭೇಟಿ ನಡೆದಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಈ ವಿಚಾರವನ್ನು ಬಿಜೆಪಿ ಮೂಲಗಳು ಖಚಿತಪಡಿಸಿವೆ. ಇವರಿಬ್ಬರ ಭೇಟಿ ರಾಜಕೀಯ ಉದ್ದೇಶವನ್ನೇ ಹೊಂದಿದೆ ಎಂಬುದನ್ನು ಮೂಲಗಳು ಒತ್ತಿ ಹೇಳಿವೆ. ಭಾನುವಾರ (ಆಗಸ್ಟ್ 21) ಜ್ಯೂ.ಎನ್ಟಿಆರ್ ಮನೆಗೆ ಅಮಿತ್ ಶಾ (Amit Shah) ಭೇಟಿ ನೀಡಿದ್ದಾರೆ. ಬಿಜೆಪಿಯ ಚಾಣಾಕ್ಯ ಎಂದೇ ಫೇಮಸ್ ಆದ ಅಮಿತ್ ಶಾ ಸ್ಟಾರ್ ನಟನನ್ನು ಭೇಟಿ ಮಾಡುತ್ತಾರೆ ಎಂದರೆ ಅದರ ಹಿಂದೆ ರಾಜಕೀಯ ಕಾರಣ ಇದೆ ಎಂದೇ ಹೇಳಲಾಗುತ್ತಿದೆ. ‘ರಾಜಕೀಯಕ್ಕೆ ಬನ್ನಿ. ಆ ನಿರ್ಧಾರದ ಬಗ್ಗೆ ಯೋಚಿಸಿ’ ಎಂಬುದನ್ನು ಅಮಿತ್ ಶಾ ಅವರು ಜ್ಯೂ.ಎನ್ಟಿಆರ್ಗೆ ಹೇಳಿದ್ದಾರೆ ಎಂದು ವರದಿ ಆಗಿದೆ.
ಹಲವು ರಾಜ್ಯಗಳಲ್ಲಿ ಸಿನಿಮಾ ರಂಗದ ಅನೇಕರು ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಜ್ಯೂ.ಎನ್ಟಿಆರ್ ತಂದೆ ನಂದಮೂರಿ ಹರಿಕೃಷ್ಣ ಅವರು ಸಂಸದರಾಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಜ್ಯೂ.ಎನ್ಟಿಆರ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ರಾಜಕೀಯಕ್ಕೆ ಸೇರಿದರೆ ಆ ಫ್ಯಾನ್ಬೇಸ್ ಮತವಾಗಿ ಮಾರ್ಪಾಡಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಈ ಕಾರಣಕ್ಕೆ ಅಮಿತ್ ಶಾ ಅವರು ಸ್ಟಾರ್ ನಟನಿಗೆ ಈ ಆಫರ್ ನೀಡಿದ್ದಾರೆ ಎನ್ನಲಾಗಿದೆ.
ಜ್ಯೂ.ಎನ್ಟಿಆರ್ ಅವರು ಟಿಡಿಪಿಯಲ್ಲಿ ಆ್ಯಕ್ಟೀವ್ ಆಗಿದ್ದರು. ಆದರೆ, ಚಂದ್ರಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಅವರು ರಾಜಕೀಯಕ್ಕೆ ಬಂದ ನಂತರದಲ್ಲಿ ಜ್ಯೂ.ಎನ್ಟಿಆರ್ ಅವರು ಹೊರಗುಳಿದರು. ನಂತರ ಜ್ಯೂ.ಎನ್ಟಿಆರ್ ಮತ್ತೆ ರಾಜಕೀಯದತ್ತ ಮುಖ ಮಾಡಿಲ್ಲ. ಈಗ ಅವರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ.
Had a good interaction with a very talented actor and the gem of our Telugu cinema, Jr NTR in Hyderabad.
అత్యంత ప్రతిభావంతుడైన నటుడు మరియు మన తెలుగు సినిమా తారక రత్నం అయిన జూనియర్ ఎన్టీఆర్తో ఈ రోజు హైదరాబాద్లో కలిసి మాట్లాడటం చాలా ఆనందంగా అనిపించింది.@tarak9999 pic.twitter.com/FyXuXCM0bZ
— Amit Shah (@AmitShah) August 21, 2022
‘ಜ್ಯೂ.ಎನ್ಟಿಆರ್ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇದೆ. ಈ ಮೊದಲು ಟಿಡಿಪಿಯಲ್ಲಿ ಆ್ಯಕ್ಟೀವ್ ಆಗಿದ್ದರು. ಅವರು ಅದ್ಭುತ ಮಾತುಗಾರ. ಅವರ ಫ್ಯಾನ್ಬೇಸ್ ಕೂಡ ದೊಡ್ಡದಿದೆ. ಹೀಗಾಗಿ, ಅವರನ್ನು ಬಿಜೆಪಿ ತನ್ನ ತೆಕ್ಕೆಗೆ ಕರೆತರಲು ಪ್ರಯತ್ನಿಸುತ್ತಿದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.
ಇದನ್ನೂ ಓದಿ: Jr NTR: ಅಮಿತ್ ಶಾ ಎದುರು ಕೈ ಕಟ್ಟಿ ಕುಳಿತ ಜ್ಯೂ. ಎನ್ಟಿಆರ್; ಅಚ್ಚರಿ ಮೂಡಿಸಿತು ಗೃಹ ಸಚಿವರ ಭೇಟಿ
ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಈ ಕಾರಣಕ್ಕೆ ಜ್ಯೂ.ಎನ್ಟಿಆರ್ ಅವರನ್ನು ಅಮಿತ್ ಶಾ ಟ್ರಂಪ್ ಕಾರ್ಡ್ ಆಗಿ ಬಳಕೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು. 20 ನಿಮಿಷಗಳ ಭೇಟಿಯಲ್ಲಿ ರಾಜಕೀಯದ ವಿಚಾರ ಹೆಚ್ಚು ಚರ್ಚೆ ಆಗಿದೆ ಎಂದು ವರದಿ ಆಗಿದೆ.
ಈ ಸುದ್ದಿಯನ್ನು ಇಂಗ್ಲಿಷನ್ಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Mon, 22 August 22