ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಜ್ಯೂ. ಎನ್​ಟಿಆರ್​; ‘ಬಾಲ ರಾಮಾಯಣಂ’ ನೆನಪಿಸಿದ ಫೋಟೋಗಳು

ಜ್ಯೂ. ಎನ್​ಟಿಆರ್​ ಅವರಿಗೆ ದೇಶವ್ಯಾಪಿ ಬೇಡಿಕೆ ಇದೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

Apr 11, 2022 | 3:30 PM
TV9kannada Web Team

| Edited By: Madan Kumar

Apr 11, 2022 | 3:30 PM

ಬಾಲನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು ಜ್ಯೂ. ಎನ್​ಟಿಆರ್​. ಈಗ ಅವರು ಬಣ್ಣದ ಲೋಕದಲ್ಲಿ 25 ವರ್ಷಗಳನ್ನು ಕಳೆದಿದ್ದಾರೆ. ಅವರ ಮೊದಲ ಸಿನಿಮಾ ‘ಬಾಲ ರಾಮಾಯಣಂ’ ಬಿಡುಗಡೆ ಆಗಿ ಇಂದಿಗೆ (ಏ.11) 25 ವರ್ಷ ಪೂರೈಸಿದೆ. ಆ ದಿನಗಳನ್ನು ಈ ಫೋಟೋಗಳು ನೆನಪಿಸುತ್ತಿವೆ.

1 / 5
ಜ್ಯೂ. ಎನ್​ಟಿಆರ್​ ಅವರದ್ದು ಕಲಾವಿದರ ಕುಟುಂಬ. ಹಾಗಾಗಿ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ‘ಬಾಲ ರಾಮಾಯಣಂ’ ಸಿನಿಮಾದಲ್ಲಿ ಅವರು ರಾಮನ ಪಾತ್ರ ಮಾಡಿದ್ದರು. ಆ ಚಿತ್ರಕ್ಕೆ ಖ್ಯಾತ ನಿರ್ದೇಶಕ ಗುಣಶೇಖರ್​ ಅವರು ಆ್ಯಕ್ಷನ್​-ಕಟ್​ ಹೇಳಿದ್ದರು.

2 / 5
1997ರ ಏ.11ರಂದು ‘ಬಾಲ ರಾಮಾಯಣಂ’ ಸಿನಿಮಾ ಬಿಡುಗಡೆ ಆಗಿತ್ತು. ಜ್ಯೂ. ಎನ್​ಟಿಆರ್​ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಅಷ್ಟೇ ಅಲ್ಲದೇ, ‘ಮಕ್ಕಳ ಅತ್ಯುತ್ತಮ ಸಿನಿಮಾ’ ರಾಷ್ಟ್ರ ಪ್ರಶಸ್ತಿ ಪಡೆಯುವಲ್ಲಿಯೂ ಈ ಚಿತ್ರ ಯಶಸ್ವಿ ಆಗಿತ್ತು.

3 / 5
‘ಬಾಲ ರಾಮಾಯಣಂ’ ಸಿನಿಮಾವನ್ನು ಎಂಎಸ್​ ರೆಡ್ಡಿ ಅವರು ನಿರ್ಮಾಣ ಮಾಡಿದ್ದರು. ಸ್ಮಿತಾ ಮಾಧವ್​ ಅವರು ಸೀತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂದಿಗೂ ಜ್ಯೂ. ಎನ್​ಟಿಆರ್​ ಅಭಿಮಾನಿಗಳ ಫೇವರಿಟ್​ ಚಿತ್ರಗಳ ಪಟ್ಟಿಯಲ್ಲಿ ಈ ಸಿನಿಮಾ ಸ್ಥಾನ ಪಡೆದುಕೊಂಡಿದೆ.

4 / 5
25 ವರ್ಷಗಳಲ್ಲಿ ಜ್ಯೂ. ಎನ್​ಟಿಆರ್​ ಅವರು ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ.

5 / 5

Follow us on

Most Read Stories

Click on your DTH Provider to Add TV9 Kannada