Jr NTR: ಪತ್ನಿ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ನಟ ಜ್ಯೂನಿಯರ್ ಎನ್​ಟಿಆರ್​

Jr NTR wife Lakshmi Pranathi: ಪತ್ನಿ ಲಕ್ಷ್ಮಿ ಪ್ರಣತಿ ಜೊತೆಗಿರುವ ರೊಮ್ಯಾಂಟಿಕ್​ ಫೋಟೋವನ್ನು ಜ್ಯೂ. ಎನ್​ಟಿಆರ್​ ಹಂಚಿಕೊಂಡಿದ್ದಾರೆ. ಫ್ಯಾನ್ಸ್​ ವಲಯದಲ್ಲಿ ಈ ಸುಂದರ ಫೋಟೋ ವೈರಲ್​ ಆಗಿದೆ.

Jr NTR: ಪತ್ನಿ ಜೊತೆ ಕಳೆದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ನಟ ಜ್ಯೂನಿಯರ್ ಎನ್​ಟಿಆರ್​
ಜ್ಯೂ. ಎನ್​ಟಿಆರ್,​ ಲಕ್ಷ್ಮಿ ಪ್ರಣತಿ
Follow us
TV9 Web
| Updated By: ಮದನ್​ ಕುಮಾರ್​

Updated on:Aug 02, 2022 | 2:52 PM

ಟಾಲಿವುಡ್​ ‘ಯಂಗ್​ ಟೈಗರ್​’ ಜ್ಯೂ. ಎನ್​ಟಿಆರ್ (Jr NTR) ಅವರಿಗೆ 2022ರ ವರ್ಷ ಸಖತ್​ ಸ್ಪೆಷಲ್​. ಯಾಕೆಂದರೆ ಅವರಿಗೆ ಈ ವರ್ಷ ಬಹುದೊಡ್ಡ ಗೆಲುವು ಸಿಕ್ಕಿದೆ. ರಾಮ್​ ಚರಣ್​ ಜೊತೆ ಅವರು ನಟಿಸಿದ ‘ಆರ್​ಆರ್​ಆರ್​’ ಸಿನಿಮಾ (RRR Movie) ತೆರೆಕಂಡು ಭರ್ಜರಿ ಯಶಸ್ಸು ಪಡೆಯಿತು. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿ ಬೀಗಿತು. ಈ ಚಿತ್ರದಿಂದ ಜ್ಯೂ. ಎನ್​ಟಿಆರ್ ಅವರ ಮೈಲೇಜ್​ ಹೆಚ್ಚಿದೆ. ಸದ್ಯ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಪತ್ನಿ ಲಕ್ಷ್ಮಿ ಪ್ರಣತಿ (Lakshmi Pranathi) ಜೊತೆ ಇರುವ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಜ್ಯೂ. ಎನ್​ಟಿಆರ್​ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ಸಖತ್​ ವೈರಲ್​ ಆಗಿದೆ. ಕ್ಯೂಟ್​ ಜೋಡಿಯನ್ನು ಕಂಡು ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಬೇರೆ ನಟರಿಗೆ ಹೋಲಿಸಿದರೆ ಜ್ಯೂ. ಎನ್​ಟಿರ್​ ಅವರು ಸೋಶಿಯಲ್​ ಮೀಡಿಯಾ ಬಳಸುವುದು ಕಡಿಮೆ. ಆಗೊಮ್ಮೆ ಈಗೊಮ್ಮೆ ಮಾತ್ರ ಅವರು ಏನಾದರೂ ಪೋಸ್ಟ್​ ಮಾಡುತ್ತಾರೆ. ಸಿನಿಮಾಗಳ ಬಗ್ಗೆ, ಫ್ಯಾಮಿಲಿ ಬಗ್ಗೆ ಅಪರೂಪಕ್ಕೆ ಅಪ್​ಡೇಟ್​ ನೀಡುತ್ತಾರೆ. ಈಗ ಅವರು ಪತ್ನಿ ಲಕ್ಷ್ಮಿ ಪ್ರಣತಿ ಜೊತೆಗಿರುವ ರೊಮ್ಯಾಂಟಿಕ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಎದುರುಬದರು ಕುಳಿತು ಮಾತನಾಡುತ್ತಿರುವ ಕ್ಷಣ ಈ ಸುಂದರ ಫೋಟೋದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ
Image
Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್​ಟಿಆರ್​ ಅಭಿಮಾನಿ ನಿಧನ; ಸ್ಟಾರ್​ ನಟನ ಪ್ರಾರ್ಥನೆಯೂ ಫಲಿಸಲಿಲ್ಲ
Image
‘ಆರ್​ಆರ್​ಆರ್​’ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ರಾಮ್​ ಚರಣ್​-ಜ್ಯೂ.ಎನ್​ಟಿಆರ್​? ಕೇಳಿಬಂತು ಹೊಸ ಗುಸುಗುಸು
Image
ಜ್ಯೂ.ಎನ್​ಟಿಆರ್​ ಜತೆ ನಟಿಸೋ ಅವಕಾಶ ಯಾವ ಹೀರೋಯಿನ್​ಗೆ? ಕೇಳಿ ಬರುತ್ತಿದೆ ಹಲವು ಜನಪ್ರಿಯರ ಹೆಸರು
Image
‘ಕೆಜಿಎಫ್ 2’ ನೋಡಿ ಕಲಿತುಕೊಳ್ಳಲು ಸ್ಟಾರ್​ ಡೈರೆಕ್ಟರ್​ಗೆ ಸೂಚನೆ ನೀಡಿದ ಜ್ಯೂ. ಎನ್​ಟಿಆರ್​?

ಜ್ಯೂ. ಎನ್​ಟಿಆರ್ ಮತ್ತು ಲಕ್ಷ್ಮಿ ಪ್ರಣತಿ ಅವರು ಯಾವುದೋ ರೆಸಾರ್ಟ್​​ನಲ್ಲಿ ಕುಳಿತಂತಿದೆ. ಮಳೆಗಾಲದ ತುಂಪು ವಾತಾವರಣದಲ್ಲಿ ಬಿಸಿ ಪಾನೀಯ ಹೀರುತ್ತಾ, ಹಸಿರು ಪರಿಸರವನ್ನು ಅವರು ಆಸ್ವಾದಿಸುತ್ತಿದ್ದಾರೆ. ‘ಈ ರೀತಿಯ ಕ್ಷಣಗಳು..’ ಎಂದು ಆ ಫೋಟೋಗೆ ಜ್ಯೂ. ಎನ್​ಟಿಆರ್​ ಕ್ಯಾಪ್ಷನ್​ ನೀಡಿದ್ದಾರೆ. 9 ಲಕ್ಷಕ್ಕೂ ಅಧಿಕ ಮಂದಿ ಈ ಫೋಟೋಗೆ ಲೈಕ್​ ಮಾಡಿದ್ದಾರೆ. ಸಾವಿರಾರ ಕಮೆಂಟ್​ಗಳು ಬಂದಿವೆ.

View this post on Instagram

A post shared by Jr NTR (@jrntr)

ಟಾಲಿವುಡ್​ ಮಾತ್ರವಲ್ಲದೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಜ್ಯೂ. ಎನ್​ಟಿಆರ್​ ಅವರಿಗೆ ಬೇಡಿಕೆ ಇದೆ. ಅದರಲ್ಲೂ ‘ಆರ್​ಆರ್​ಆರ್​ಆರ್’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರ ಚಾರ್ಮ್​ ಹೆಚ್ಚಿದೆ. ಅವರ ಜೊತೆ ಸಿನಿಮಾ ಮಾಡಲು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಕಾದಿವೆ. ಸದ್ಯ ಅವರ ಮುಂದಿನ ಸಿನಿಮಾ ಬಗ್ಗೆ ಅಪ್​ಡೇಟ್​ ತಿಳಿಯಲು ಫ್ಯಾನ್ಸ್​ ಹಂಬಲಿಸಿದ್ದಾರೆ. ಜ್ಯೂ. ಎನ್​ಟಿಆರ್​ ಅವರ 31ನೇ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

Published On - 2:52 pm, Tue, 2 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ