ಈ ವರ್ಷ 100 ಕೋಟಿ ಸರದಾರರಾದ ಪುನೀತ್, ಯಶ್, ಸುದೀಪ್​, ರಕ್ಷಿತ್​

ಇತ್ತೀಚೆಗೆ ಬಾಲಿವುಡ್ ಸಿನಿಮಾಗಳು ಬಿಸ್ನೆಸ್ ಮಾಡಲು ಆಗದೆ ಒದ್ದಾಡುತ್ತಿವೆ. ಈ ಸಮಯದಲ್ಲಿ ದಕ್ಷಿಣ ಭಾರತದ ಚಿತ್ರಗಳು ಮಿಂಚಿವೆ. ಅದರಲ್ಲೂ ಕನ್ನಡ ಸಿನಿಮಾಗಳು ಶೈನ್ ಆಗುತ್ತಿವೆ.

ಈ ವರ್ಷ 100 ಕೋಟಿ ಸರದಾರರಾದ ಪುನೀತ್, ಯಶ್, ಸುದೀಪ್​, ರಕ್ಷಿತ್​
ಸುದೀಪ್-ಪುನೀತ್ -ರಕ್ಷಿತ್-ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 02, 2022 | 3:49 PM

2022 ಸ್ಯಾಂಡಲ್​​ವುಡ್​ (Sandalwood) ಪಾಲಿಗೆ ವಿಶೇಷವಾಗಿದೆ. ಕೊವಿಡ್ ಕಾರಣದಿಂದ ಮಂಕಾಗಿದ್ದ ಚಿತ್ರರಂಗ ಖದರ್ ಪಡೆದುಕೊಂಡು ಮುಂದೆ ಸಾಗುತ್ತಿದೆ. ಕೇವಲ 8 ತಿಂಗಳಲ್ಲಿ ಕನ್ನಡದ ಹಲವು ಚಿತ್ರಗಳು ತೆರೆಗೆ ಬಂದು ಬಾಲಿವುಡ್​​, ಟಾಲಿವುಡ್​ ಹಾಗೂ ಇತರ ಚಿತ್ರರಂಗದಲ್ಲಿ ಸದ್ದು ಮಾಡಿವೆ. ಈ ಪೈಕಿ ಯಶ್ (Yash), ಪುನೀತ್, ಸುದೀಪ್ ಹಾಗೂ ರಕ್ಷಿತ್ ಸಿನಿಮಾಗಳು 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿವೆ. ಈ ನಾಲ್ಕು ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿವೆ ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಅಂದೊಂದು ಕಾಲವಿತ್ತು. ಬಾಲಿವುಡ್ ಚಿತ್ರರಂಗ ಎಂದರೆ ಭಾರತ ಚಿತ್ರರಂಗ, ಭಾರತ ಚಿತ್ರರಂಗ ಎಂದರೆ ಬಾಲಿವುಡ್ ಎಂದು ಕರೆಯಲಾಗುತ್ತಿತ್ತು. ಆದರೆ, ಇತ್ತೀಚೆಗೆ ಬಾಲಿವುಡ್ ಸಿನಿಮಾಗಳು ಬಿಸ್ನೆಸ್ ಮಾಡಲು ಆಗದೆ ಒದ್ದಾಡುತ್ತಿವೆ. ಈ ಸಮಯದಲ್ಲಿ ದಕ್ಷಿಣ ಭಾರತದ ಚಿತ್ರಗಳು ಮಿಂಚಿವೆ. ಅದರಲ್ಲೂ ಕನ್ನಡ ಸಿನಿಮಾಗಳು ಶೈನ್ ಆಗುತ್ತಿವೆ.

‘ಜೇಮ್ಸ್’

ಇದನ್ನೂ ಓದಿ
Image
‘ನಾನು ಮತ್ತೆ ಆ ಧಾರಾವಾಹಿ ಮಾಡಲ್ಲ’; ತೆಲುಗು ಸೀರಿಯಲ್​ನಿಂದ ಹೊರ ಬರುವ ನಿರ್ಧಾರ ತೆಗೆದುಕೊಂಡ ಚಂದನ್ ಕುಮಾರ್
Image
‘ಅಮ್ಮ ನಿಮ್ಮ ಜತೆ ನಾನು ಇರಬೇಕಿತ್ತು’; ವಿವಾದದ ಬಳಿಕ ಹೊಸ ಪೋಸ್ಟ್ ಹಾಕಿದ ಚಂದನ್ ಕುಮಾರ್
Image
Chandan Kumar: ನಟ ಚಂದನ್​ ಕುಮಾರ್​ ಮೇಲೆ ಹಲ್ಲೆ: ವೈರಲ್​ ವಿಡಿಯೋದಲ್ಲಿದೆ ಕಪಾಳಮೋಕ್ಷದ ದೃಶ್ಯ
Image
Chandan Kumar: ಕನ್ನಡದ ನಟ ಚಂದನ್​ ಕುಮಾರ್​ಗೆ ತೆಲುಗು ಧಾರಾವಾಹಿ ಶೂಟಿಂಗ್​ ಸೆಟ್​ನಲ್ಲಿ ಹಲ್ಲೆ; ವಿಡಿಯೋ ವೈರಲ್​

ಪುನೀತ್ ರಾಜ್​ಕುಮಾರ್ ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ಜೇಮ್ಸ್​. ಅವರ ಬರ್ತ್​ಡೇ ಅಂಗವಾಗಿ ಈ ವರ್ಷ ಮಾರ್ಚ್​ 17ರಂದು ಸಿನಿಮಾ ತೆರೆಗೆ ಬಂತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ‘ಜೇಮ್ಸ್​’ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಚೇತನ್ ಕುಮಾರ್ ನಿರ್ದೇಶನ ಇದೆ.

‘ಕೆಜಿಎಫ್ 2’

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅಪೂರಪದ ಚಿತ್ರ ಎಂಬ ಹೆಗ್ಗಳಿಕೆ ‘ಕೆಜಿಎಫ್ 2’ ಚಿತ್ರಕ್ಕೆ ಸಲ್ಲುತ್ತದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಯಶ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಹತ್ತು ಹಲವು ದಾಖಲೆ ಬರೆದಿದೆ. ಈ ಚಿತ್ರದಿಂದ ಕನ್ನಡ ಚಿತ್ರರಂಗದ ಖ್ಯಾತಿ ವಿಶ್ವ ಮಟ್ಟದಲ್ಲಿ ಹಬ್ಬಿದೆ.

‘777 ಚಾರ್ಲಿ’

ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಚಿತ್ರ. ‘777 ಚಾರ್ಲಿ’ 150 ಕೋಟಿ ರೂಪಾಯಿಗೂ ಅಧಿಕ ಬಿಸ್ನೆಸ್ ಮಾಡಿದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಚಿತ್ರ ಪರಭಾಷಿಗರ ಮನ ಗೆಲ್ಲಲು ಯಶಸ್ವಿ ಆಗಿದೆ. ಈ ಚಿತ್ರದಿಂದ ನಿರ್ಮಾಪಕರಾಗಿ ರಕ್ಷಿತ್ ಶೆಟ್ಟಿ ಗೆಲುವು ಕಂಡಿದ್ದಾರೆ.

‘ವಿಕ್ರಾಂತ್ ರೋಣ’

ಜುಲೈ 28ರಂದು ರಿಲೀಸ್ ಆದ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಕೇವಲ ನಾಲ್ಕು ದಿನಕ್ಕೆ ಈ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ನಿರ್ದೇಶನ ಇದೆ. ಈ ಚಿತ್ರ ಒಟ್ಟಾರೆ ಎಷ್ಟು ಗಳಿಕೆ ಮಾಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

Published On - 3:49 pm, Tue, 2 August 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್