AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​ಆರ್​’ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ರಾಮ್​ ಚರಣ್​-ಜ್ಯೂ.ಎನ್​ಟಿಆರ್​? ಕೇಳಿಬಂತು ಹೊಸ ಗುಸುಗುಸು

‘ಆರ್​ಆರ್​ಆರ್’ ಹೆಸರಲ್ಲಿ ಹೋಟೆಲ್ ಉದ್ಯಮ ಆರಂಭಿಸುವಂತೆ ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್​ಗೆ ಕೆಲ ಖ್ಯಾತ ನಿರ್ಮಾಪಕರು ಕಿವಿಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ.

‘ಆರ್​ಆರ್​ಆರ್​’ ರೆಸ್ಟೋರೆಂಟ್ ಆರಂಭಿಸಲಿದ್ದಾರೆ ರಾಮ್​ ಚರಣ್​-ಜ್ಯೂ.ಎನ್​ಟಿಆರ್​? ಕೇಳಿಬಂತು ಹೊಸ ಗುಸುಗುಸು
ಜ್ಯೂ.ಎನ್​ಟಿಆರ್​-ರಾಮ್ ಚರಣ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jun 24, 2022 | 6:35 AM

Share

‘ಆರ್​ಆರ್​ಆರ್​’ ಸಿನಿಮಾ (RRR Movie) ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡಿದ ಚಿತ್ರ. ಸಾವಿರಾರು ಕೋಟಿ ರೂಪಾಯಿ ಗಳಿಸಿದ ಈ ಸಿನಿಮಾದಿಂದ ಚಿತ್ರತಂಡಕ್ಕೆ ಒಳ್ಳೆಯ ಕಮಾಯಿ ಆಗಿದೆ. ‘ಆರ್​ಆರ್​ಆರ್​ 2’ ಬರುವ ಬಗ್ಗೆಯೂ ಕೆಲವು ಕಡೆಗಳಲ್ಲಿ ವದಂತಿಗಳು ಹುಟ್ಟಿಕೊಂಡಿದ್ದವು. ಆದರೆ, ಈ ಬಗ್ಗೆ ಯಾವುದೇ ಅಪ್​​ಡೇಟ್​ ಸಿಕ್ಕಿಲ್ಲ. ಈಗ ಟಾಲಿವುಡ್​ ಅಂಗಳದಲ್ಲಿ ಹೊಸ ಗುಸುಗುಸು ಕೇಳಿ ಬಂದಿದೆ. ‘ಆರ್​ಆರ್​ಆರ್​’ ಹೆಸರಲ್ಲಿ ರಾಮ್​ ಚರಣ್ (Ram Charan) ಹಾಗೂ ಜ್ಯೂ.ಎನ್​ಟಿಆರ್ ಹೊಸ ರೆಸ್ಟೋರೆಂಟ್ ಉದ್ಯಮ ಆರಂಭಿಸಿಲಿದ್ದಾರೆ ಎನ್ನಲಾಗುತ್ತಿದೆ.

ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಫ್ಯಾನ್ಸ್ ಮಧ್ಯೆ ಎಷ್ಟೇ ವೈರತ್ವ ಬೆಳೆದಿರಬಹುದು. ಆದರೆ, ಇಬ್ಬರು ಹೀರೋಗಳ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ‘ಆರ್​ಆರ್​ಆರ್​’ ಸಂದರ್ಭದಲ್ಲಿ ಈ ಗೆಳೆತನ ಮತ್ತಷ್ಟು ಗಟ್ಟಿ ಆಗಿದೆ. ತೆರೆಮೇಲೆ ಇಬ್ಬರೂ ಸಖತ್ ಆಗಿ ಮಿಂಚಿದ್ದಾರೆ. ಹೀಗಿರುವಾಗಲೇ ಹೊಸ ವದಂತಿ ಎಲ್ಲೆಡೆ ಹರಿದಾಡುತ್ತಿದೆ.

‘ಆರ್​ಆರ್​ಆರ್’ ಹೆಸರಲ್ಲಿ ಹೋಟೆಲ್ ಉದ್ಯಮ ಆರಂಭಿಸುವಂತೆ ರಾಮ್ ಚರಣ್ ಹಾಗೂ ಜ್ಯೂ.ಎನ್​ಟಿಆರ್​ಗೆ ಕೆಲ ಖ್ಯಾತ ನಿರ್ಮಾಪಕರು ಕಿವಿಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ರಾಜಮೌಳಿ ಅವರನ್ನು ಪಾರ್ಟ್ನರ್ ಆಗಿ ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ
Image
RRR OTT Release: ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗೋದು ಯಾವಾಗ? ಆ ದಿನಾಂಕಕ್ಕಾಗಿ ಕಾದಿರುವ ಫ್ಯಾನ್ಸ್​
Image
RRR 2: ಆರ್​ಆರ್​ಆರ್​ ಸೀಕ್ವೆಲ್​ ಮಾಡಲು ಉತ್ಸಾಹ ತೋರಿದ ರಾಜಮೌಳಿ, ರಾಮ್​ ಚರಣ್​, ಜ್ಯೂ. ಎನ್​ಟಿಆರ್​
Image
‘RRR’ ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್
Image
RRR Twitter Review: ನಿದ್ದೆ ಬಿಟ್ಟು ‘ಆರ್​ಆರ್​ಆರ್​’ ಸಿನಿಮಾ ನೋಡಿ ಬಂದ ಪ್ರೇಕ್ಷಕರು ಏನಂದ್ರು?

ಇಬ್ಬರೂ ಹೀರೋಗಳು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ, ಸದ್ಯಕ್ಕಂತೂ ಈ ಆಲೋಚನೆಗೆ ಅವರು ಸೊಪ್ಪು ಹಾಕುವುದು ಅನುಮಾನವೇ. ಇನ್ನು, ‘ಆರ್​ಆರ್​ಆರ್’ ಟೈಟಲ್ ಹಕ್ಕು ನಿರ್ಮಾಪಕ ಡಿವಿವಿ ದಾನಯ್ಯ ಅವರ ಬಳಿ ಇದೆ. ಈ ಹೆಸರಲ್ಲಿ ಉದ್ಯಮ ಆರಂಭಿಸಬೇಕಾದರೆ ಅವರ ಪಾರ್ಟ್ನರ್​ಶಿಪ್ ಕೂಡ ಇರಬೇಕಾಗುತ್ತದೆ ಅಥವಾ ಅವರಿಂದ ಟೈಟಲ್​ ಬಳಕೆಗೆ ಒಪ್ಪಿಗೆ ಪಡೆಯಬೇಕಾಗುತ್ತದೆ.

ಸದ್ಯ, ಟಾಲಿವುಡ್ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಆದರೆ, ಯಾರೊಬ್ಬರೂ ಈ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಒಂದೊಮ್ಮೆ ಈ ಹೆಸರಲ್ಲಿ ಸ್ಟಾರ್​ಗಳು ರೆಸ್ಟೋರೆಂಟ್ ಆರಂಭಿಸಿದರೆ ಒಳ್ಳೆಯ ಬಿಸ್ನೆಸ್ ಆಗುವುದು ಖಚಿತ ಎನ್ನಲಾಗುತ್ತಿದೆ.

ಸಾವಿರಾರು ಕೋಟಿ ಕಲೆಕ್ಷನ್ ಮಾಡಿರುವ ‘ಆರ್​ಆರ್​ಆರ್’ ಸಿನಿಮಾ ಸದ್ಯ, ಒಟಿಟಿಯಲ್ಲಿ ಧೂಳೆಬ್ಬಿಸುತ್ತಿದೆ. ಮೇ ತಿಂಗಳಲ್ಲಿ ಸಿನಿಮಾ ಒಟಿಟಿಗೆ ಬಂತು. ನಿರ್ದೇಶಕ ರಾಜಮೌಳಿ ಮುಂದಿನ ಸಿನಿಮಾ ಯಾವುದು ಎಂಬುದು ಇನ್ನಷ್ಟೇ ಘೋಷಣೆ ಆಗಬೇಕಿದೆ.

ಇದನ್ನೂ ಓದಿ: RRR ಯಶಸ್ಸು; ಚಿತ್ರತಂಡಕ್ಕೆ 18 ಲಕ್ಷ ಮೌಲ್ಯದ ಚಿನ್ನದ ನಾಣ್ಯ ಉಡುಗೊರೆ ನೀಡಿದ ನಟ ರಾಮ್ ಚರಣ್

ಅಬ್ಬಬ್ಬಾ ಸೆಟ್​ನಲ್ಲೇ ಶೂಟ್ ಆದ ದೃಶ್ಯಕ್ಕೆ ಇಷ್ಟೊಂದು ಗ್ರಾಫಿಕ್ಸ್​; ಇಲ್ಲಿದೆ ‘ಆರ್​ಆರ್​ಆರ್’ ಸಿನಿಮಾದ ಅಸಲಿ ವಿಡಿಯೋ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ