ಕೆಬಿಸಿಯಲ್ಲಿ ಬಾಬು ಪಟ್ಟಿ ಗ್ರಾಮಸ್ಥರಿಗೆ ಕ್ಷಮೆ ಕೇಳಿದ ಅಮಿತಾಬ್ ಬಚ್ಚನ್

ಕೆಬಿಸಿಯ ಎಪಿಸೋಡ್​ ಒಂದರಲ್ಲಿ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳನ್ನು ಮೆಲುಕುಹಾಕಿದ ಅಮಿತಾಬ್ ಬಚ್ಚನ್. ಸ್ಪರ್ಧಿಯೊಬ್ಬರ ಮೂಲಕ ಪ್ರತಾಪ್‌ಘಡ ನಂಟು ಮುನ್ನೆಲೆಗೆ ಬಂದಾಗ, ಅವರು ತಮ್ಮ ಕುಟುಂಬದ ಪೂರ್ವಜರ ಹಳ್ಳಿಯಾದ ಬಾಬು ಪಟ್ಟಿಯನ್ನು ನೆನಪಿಸಿಕೊಂಡರು. ತಮ್ಮ ಉತ್ತರ ಪ್ರದೇಶದ ಮೂಲದ ಕುರಿತು ಮಾತನಾಡುತ್ತಾ, ಅಲ್ಲಿನ ಮಕ್ಕಳಿಗಾಗಿ ಉದ್ದೇಶಿಸಲಾದ ಗ್ರಂಥಾಲಯ ಯೋಜನೆಯ ವಿಳಂಬದ ಬಗ್ಗೆಯೂ ಸ್ಪಷ್ಟನೆ ನೀಡಿದರು.

ಕೆಬಿಸಿಯಲ್ಲಿ ಬಾಬು ಪಟ್ಟಿ ಗ್ರಾಮಸ್ಥರಿಗೆ ಕ್ಷಮೆ ಕೇಳಿದ ಅಮಿತಾಬ್ ಬಚ್ಚನ್
Amitabh Bachchan

Updated on: Oct 09, 2026 | 12:45 PM

ಅಮಿತಾಬ್ ಬಚ್ಚನ್, ‘ಕೌನ್ ಬನೇಗಾ ಕರೋಡ್‌ಪತಿ’ 18ನೇ ಸೀಸನ್ ನಡೆಸಿಕೊಡುತ್ತಿದ್ದಾರೆ. ಈಗಾಗಲೇ ಕೆಲವಾರು ಎಪಿಸೋಡ್​​ಗಳು ಪ್ರಸಾರ ಆಗಿವೆ. ಇತ್ತೀಚೆಗಿನ ಎಪಿಸೋಡ್​ ಒಂದರಲ್ಲಿ ಕಾರ್ಯಕ್ರಮದಲ್ಲಿ ಹಳೆಯ ನೆನಪುಗಳನ್ನು ಮೆಲುಕುಹಾಕಿದರು. ಸ್ಪರ್ಧಿಯೊಬ್ಬರ ಮೂಲಕ ಪ್ರತಾಪ್‌ಘಡ ನಂಟು ಮುನ್ನೆಲೆಗೆ ಬಂದಾಗ, ಅವರು ತಮ್ಮ ಕುಟುಂಬದ ಪೂರ್ವಜರ ಹಳ್ಳಿಯಾದ ಬಾಬು ಪಟ್ಟಿಯನ್ನು ನೆನಪಿಸಿಕೊಂಡರು. ತಮ್ಮ ಉತ್ತರ ಪ್ರದೇಶದ ಮೂಲದ ಕುರಿತು ಮಾತನಾಡುತ್ತಾ, ಅಲ್ಲಿನ ಮಕ್ಕಳಿಗಾಗಿ ಉದ್ದೇಶಿಸಲಾದ ಗ್ರಂಥಾಲಯ ಯೋಜನೆಯ ವಿಳಂಬದ ಬಗ್ಗೆಯೂ ಸ್ಪಷ್ಟನೆ ನೀಡಿದರು.

ಕಾರ್ಯಕ್ರಮದ ವೇಳೆ, ಸ್ಪರ್ಧಿಯಾದ ಚಂದ್ರ ಪ್ರಕಾಶ್ ತಿವಾರಿ ಅವರು ಪ್ರತಾಪ್‌ಘಡ್ ದೊಂದಿಗಿನ ತಮ್ಮ ನಂಟನ್ನು ತಿಳಿಸಿದರು. ಈ ಸಂದರ್ಭವು ಅಮಿತಾಬ್ ಬಚ್ಚನ್ ಅವರಿಗೆ ಬಚ್ಚನ್ ಕುಟುಂಬದ ಇತಿಹಾಸದಲ್ಲಿ ವಿಶೇಷ ಸ್ಥಾನ ಹೊಂದಿರುವ ಬಾಬು ಪಟ್ಟಿ ಹಳ್ಳಿಯ ಬಗ್ಗೆ ಮಾತನಾಡಿದರು. ಈ ವೇಳೆ ಅಲ್ಲಿನ ಗ್ರಾಮಸ್ಥರ ಕ್ಷಮೆಯನ್ನೂ ಸಹ ಅಮಿತಾಬ್ ಬಚ್ಚನ್ ಕೇಳಿದರು.

ಗ್ರಾಮದೊಂದಿಗೆ ತಮ್ಮ ಸಂಬಂಧವನ್ನು ನೆನಪಿಸಿಕೊಳ್ಳುತ್ತಾ ಅಮಿತಾಬ್, ‘ಬಾಬು ಪಟ್ಟಿ, ನಮ್ಮ ಪೂರ್ವಜರ ಜನ್ಮಸ್ಥಳ. ನಮ್ಮ ತಂದೆ ಅಲ್ಲಿಯೇ ಜನಿಸಿದರು’ ಎಂದರು. ನಂತರ ಅಮಿತಾಬ್, ಹಳ್ಳಿಯ ಮಕ್ಕಳಿಗೆ ಓದಲು ಮತ್ತು ಅಧ್ಯಯನ ಮಾಡಲು ಪ್ರತ್ಯೇಕ ಜಾಗವನ್ನು ಕಲ್ಪಿಸುವ ಗುರಿಯನ್ನು ಹೊಂದಿರುವ ಬಗ್ಗೆ ಕುರಿತು ಮಾತನಾಡಿದರು. ಜಯಾ ಬಚ್ಚನ್ ಅವರು ಆ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳಿಗಾಗಿ ಸರಿಯಾದ ಸೌಲಭ್ಯಗಳ ಕೊರತೆಯನ್ನು ಗಮನಿಸಿದ ನಂತರ, ಅಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಲೈಬ್ರೆರಿ ನಿರ್ಮಾಣ ಮಾಡುವ ಯೋಜನೆ ಹಾಕಿಕೊಂಡರು ಎಂದಿದ್ದಾರೆ.

ಇದನ್ನೂ ಓದಿ:ಮತ್ತೆ ಬಂತು ಕೆಬಿಸಿ, 18ನೇ ಸೀಸನ್​​ಗಾಗಿ ಕಿರುತೆರೆಗೆ ಮರಳಿದ ಅಮಿತಾಬ್ ಬಚ್ಚನ್

ಅಮಿತಾಬ್ ಅವರ ಪ್ರಕಾರ, ಲೈಬ್ರೆರಿ ಹಾಗೂ ಸ್ಟಡಿ ಹೌಸ್​​ ಸೌಲಭ್ಯಕ್ಕಾಗಿ ಕಟ್ಟಡವನ್ನು ನಿರ್ಮಿಸಲಾಗಿದ್ದರೂ, ಅದಕ್ಕೆ ಸಂಪೂರ್ಣವಾಗಿ ಬೇಕಾದ ಸೌಕರ್ಯಗಳನ್ನು ಕಲ್ಪಿಸಿ ಕಾರ್ಯರೂಪಕ್ಕೆ ತರಬೇಕಿದೆ. ಆದರೆ ಅನಿವಾರ್ಯ ಕಾರಣಗಳಿಂದ ಅದು ತಡವಾಗಿದೆ ಎಂದ ಅಮಿತಾಬ್ ಬಚ್ಚನ್, ಬಾಬು ಪಟ್ಟಿಯ ಜನರುದ್ದೇಶಿಸಿ ಮಾತನಾಡಿ, ‘ನಮ್ಮಿಂದು ತುಸು ತಡವಾಗಿದೆ. ಆದರೆ ಯಾರೂ ಚಿಂತಿಸುವ ಅಗತ್ಯವಿಲ್ಲ, ನಾವು ಅದನ್ನು ತೆರೆಯುತ್ತೇವೆ’ ಎಂದರು.

ಅಮಿತಾಬ್ ಬಚ್ಚನ್ ಅವರು ತಮ್ಮನ್ನು ತಾವು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಅಯೋಧ್ಯೆಯಲ್ಲಿ ತಮ್ಮ ತಂದೆಯವರ ಹೆಸರಿನಲ್ಲಿ ಧರ್ಮ ಛತ್ರವನ್ನು ಸಹ ನಿರ್ಮಾಣ ಮಾಡಲು ಮುಂದಾಗಿದ್ದು, ಅದಕ್ಕಾಗಿ ಸ್ಥಳೀಯ ಆಡಳಿತದ ಅನುಮತಿಯನ್ನು ಸಹ ಕೇಳಿದ್ದಾರೆ. ಸುಮಾರು ಮೂರು ಅಂತಸ್ಥಿನ ಧರ್ಮ ಛತ್ರವನ್ನು ನಿರ್ಮಾಣ ಮಾಡಲು ಅವರು ಯೋಜನೆ ಹಾಕಿಕೊಂಡಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಅವರು ಈ ಕಾರ್ಯವನ್ನು ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us