AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬಂತು ಕೆಬಿಸಿ, 18ನೇ ಸೀಸನ್​​ಗಾಗಿ ಕಿರುತೆರೆಗೆ ಮರಳಿದ ಅಮಿತಾಬ್ ಬಚ್ಚನ್

Kaun Banega Crorepati: 26 ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್​​ಪತಿ ಮೊದಲ ಬಾರಿ ಪ್ರಸಾರಾಗಿತ್ತು. ಒಂದೇ ಒಂದು ಸೀಸನ್ ಹೊರತುಪಡಿಸಿ ಆಗಿನಿಂದಲೂ ಅಮಿತಾಬ್ ಬಚ್ಚನ್ ಅವರೇ ಈ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. 17 ಸೀಸನ್​​ಗಳನ್ನು ಮುಗಿಸಿರುವ ಈ ಶೋ ಇದೀಗ 18ನೇ ಸೀಸನ್​ ಪ್ರಸಾರ ಆಗಲಿದ್ದು, ಅಮಿತಾಬ್ ಬಚ್ಚನ್ ಅವರು ಮತ್ತೊಮ್ಮೆ ನಿರೂಪಕರಾಗಿ ಕಿರುತೆರೆ ಮರಳಿದ್ದಾರೆ. 18ನೇ ಸೀಸನ್​​ನ ಪ್ರೊಮೊ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಮತ್ತೆ ಬಂತು ಕೆಬಿಸಿ, 18ನೇ ಸೀಸನ್​​ಗಾಗಿ ಕಿರುತೆರೆಗೆ ಮರಳಿದ ಅಮಿತಾಬ್ ಬಚ್ಚನ್
Amitabh Bachchan
ಮಂಜುನಾಥ ಸಿ.
|

Updated on:Jul 18, 2026 | 3:30 PM

Share

ಕೆಬಿಸಿ ಅಥವಾ ಕೌನ್ ಬನೇಗಾ ಕರೋಡ್​​ಪತಿ (Kaun Banega crorepati) ಭಾರತದ ಅತ್ಯಂತ ಹಳೆಯ ಟಿವಿ ರಿಯಾಲಿಟಿ ಶೋಗಳಲ್ಲಿ ಒಂದು. 26 ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್​​ಪತಿ ಮೊದಲ ಬಾರಿ ಪ್ರಸಾರಾಗಿತ್ತು. ಒಂದೇ ಒಂದು ಸೀಸನ್ ಹೊರತುಪಡಿಸಿ ಆಗಿನಿಂದಲೂ ಅಮಿತಾಬ್ ಬಚ್ಚನ್ ಅವರೇ ಈ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. 17 ಸೀಸನ್​​ಗಳನ್ನು ಮುಗಿಸಿರುವ ಈ ಶೋ ಇದೀಗ 18ನೇ ಸೀಸನ್​ ಪ್ರಸಾರ ಆಗಲಿದ್ದು, ಅಮಿತಾಬ್ ಬಚ್ಚನ್ ಅವರು ಮತ್ತೊಮ್ಮೆ ನಿರೂಪಕರಾಗಿ ಕಿರುತೆರೆ ಮರಳಿದ್ದಾರೆ. 18ನೇ ಸೀಸನ್​​ನ ಪ್ರೊಮೊ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಕೌನ್ ಬನೇಗಾ ಕರೋಡ್​​ಪತಿಯ 18ನೇ ಸೀಸನ್​​ನ ಪ್ರಸಾರ ದಿನಾಂಕವನ್ನು ಘೋಷಣೆ ಮಾಡುವ ಜೊತೆಗೆ ಈ ಬಾರಿಯ ಸೀಸನ್​​ನಲ್ಲಿ ಮಾಡಲಾಗಿರುವ ಕೆಲ ಬಲಾವಣೆಗಳ ಮಾಹಿತಿಯನ್ನು ಸಹ ಪ್ರೋಮೊನಲ್ಲಿ ಹಂಚಿಕೊಳ್ಳಲಾಗಿದೆ. 18ನೇ ಸೀಸನ್​​ನಲ್ಲಿ ಕೆಲವು ತಾಜಾ ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಪ್ರೋಮೊನಲ್ಲಿ ಅಮಿತಾಬ್ ಬಚ್ಚನ್ ಅವರು ಹೇಳಿರುವಂತೆ, ಈ ಬಾರಿ ಕೇವಲ ಪ್ರಶ್ನೋತ್ತರ ಮಾತ್ರ ಇರುವುದಿಲ್ಲ. ಕೇಳುವ ಪ್ರಶ್ನೆಗೆ ಸ್ಪರ್ಧಿ ಉತ್ತರ ಕೊಟ್ಟರೆ ಮಾತ್ರವೇ ಸಾಕಾಗುವುದಿಲ್ಲ, ಅದಕ್ಕಾಗಿ ಆ ಸ್ಪರ್ಧಿ ಯೋಚನೆಯನ್ನೂ ಮಾಡಬೇಕಿರುತ್ತದೆ’ ಎಂದು ಬಚ್ಚನ್ ಅವರು ಪ್ರೋಮೊನಲ್ಲಿ ಹೇಳಿದ್ದಾರೆ.

ಕೌನ್ ಬನೇಗಾ ಕರೋಡ್​​ಪತಿ ಸೀಸನ್ 18 ಆಗಸ್ಟ್ 10ರಿಂದ ಪ್ರಸಾರ ಆರಂಭಿಸಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ಸೋನಿ ಎಂಟರ್ಟೈನ್​​ಮೆಂಟ್​​ನಲ್ಲಿ ಶೋ ಪ್ರಸಾರ ಆಗಲಿದೆ. ಸೋನಿ ಲಿವ್ ಒಟಿಟಿಯಲ್ಲಿಯೂ ಸಹ ಶೋ ಅನ್ನು ಲೈವ್ ಆಗಿ ಹಾಗೂ ರೆಕಾರ್ಡೆಡ್ ಶೋಗಳನ್ನು ಸಹ ವೀಕ್ಷಣೆ ಮಾಡಬಹುದಾಗಿದೆ.

2000 ರಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್​​ಪತಿ ಸತತ ಈಗ 18ನೇ ಸೀಸನ್ ಚಾಲ್ತಿಯಲ್ಲಿದೆ. ಇಂಗ್ಲೀಷ್​​ನ ‘ಹೂ ವಾಂಟ್ಸ್ ಟು ಬಿ ಎ ಮಿಲೇನಿಯರ್’ ಶೋನಿಂದ ಸ್ಪೂರ್ತಿ ಪಡೆದು ಈ ಶೋ ಪ್ರಾರಂಭ ಮಾಡಲಾಗಿತ್ತು. ಈ ವರೆಗೆ ಕೇವಲ ಒಮ್ಮೆ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಬೇರೊಬ್ಬರು ನಿರೂಪಣೆ ಮಾಡಿದ್ದಾರೆ. 2007 ರಲ್ಲಿ ಒಂದು ಸೀಸನ್ ಮಾತ್ರ ಅಮಿತಾಬ್ ಬಚ್ಚನ್ ಬದಲಿಗೆ ಶಾರುಖ್ ಖಾನ್ ಅವರು ಈ ಶೋ ಹೋಸ್ಟ್ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:27 pm, Sat, 18 July 26

Follow Us
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಸಚಿವ ಸಂಪುಟ ಸಭೆ ಅಂತ್ಯ: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನೇರಪ್ರಸಾರ
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಲೂಟಿ ಹಣದಲ್ಲಿ ಗೆಳತಿಗ ಲಕ್ಷಾಂತರ ರೂ. ಚಿನ್ನಾಭರಣ ಕೊಡಿಸಿದ್ದ ಜ್ಞಾನೇಂದ್ರ!
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್​ವೇ ಫ್ಲೈಓವರ್‌‌ನಿಂದ ಕೆಳಗೆ ಬಿದ್ದ ಕಾರು
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಪ್ರತಿ ಲೀಟರ್‌ ಹಾಲಿನ ದರ ₹8 ಹೆಚ್ಚಳಕ್ಕೆ ಹಾಲು ಒಕ್ಕೂಟಗಳ ಆಗ್ರಹ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಟಿ ನರಸೀಪುರದಲ್ಲಿ ಬಿಗಿ ಭದ್ರತೆ: 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು