AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಅಗಲೀಕರಣದಲ್ಲಿ ನಾಶವಾಗಲಿದೆ ಅಮಿತಾಭ್​ ಬಂಗಲೆಯ ಒಂದು ಭಾಗ

ಸಂತ ಜ್ಞಾನೇಶ್ವರ ಮಾರ್ಗ್​​ ರಸ್ತೆಯಲ್ಲಿ ಅಮಿತಾಭ್​ ಮನೆ ಇದೆ. ಈಗ ಈ ರಸ್ತೆಯನ್ನು ಅಗಲೀಕರಣ ಮಾಡುವ ಕಾರ್ಯ ಆರಂಭವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅಮಿತಾಭ್​ಗೆ 2017ರಲ್ಲೇ ನೋಟಿಸ್​ ನೀಡಲಾಗಿತ್ತು.

ರಸ್ತೆ ಅಗಲೀಕರಣದಲ್ಲಿ ನಾಶವಾಗಲಿದೆ ಅಮಿತಾಭ್​ ಬಂಗಲೆಯ ಒಂದು ಭಾಗ
ಅಮಿತಾಭ್ ಬಚ್ಚನ್
ರಾಜೇಶ್ ದುಗ್ಗುಮನೆ
|

Updated on: Jul 04, 2021 | 8:05 PM

Share

ಬಾಲಿವುಡ್​ ನಟ ಅಮಿತಾಭ್​ ಬಚ್ಚನ್​ ಮುಂಬೈನಲ್ಲಿ ಮೊಟ್ಟ ಮೊದಲ ಬಾರಿಗೆ ಖರೀದಿಸಿದ ಮನೆ ಎಂದರೆ ಅದು ಪ್ರತೀಕ್ಷಾ. ಜುಹು ಏರಿಯಾದಲ್ಲಿರುವ ಈ ಬಂಗಲೆ ಕಂಡರೆ ಅಮಿತಾಭ್​ಗೆ ಎಲ್ಲಿಲ್ಲದ ಪ್ರೀತಿ. ಆದರೆ, ಈಗ ಬೃಹತ್​​ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)​ ಶನಿವಾರ ಅಮಿತಾಭ್​ಗೆ ಎರಡನೇ ನೋಟಿಸ್​ ನೀಡಿದೆ. ಈ ಬಂಗಲೆಯ ಒಂದು ಭಾಗ ನಾಶ ಮಾಡಲಾಗುತ್ತಿದೆ ಎಂದು ನೋಟಿಸ್​ನಲ್ಲಿ ತಿಳಿಸಿದೆ.

ಸಂತ ಜ್ಞಾನೇಶ್ವರ ಮಾರ್ಗ್​​ ರಸ್ತೆಯಲ್ಲಿ ಅಮಿತಾಭ್​ ಮನೆ ಇದೆ. ಈಗ ಈ ರಸ್ತೆಯನ್ನು ಅಗಲೀಕರಣ ಮಾಡುವ ಕಾರ್ಯ ಆರಂಭವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅಮಿತಾಭ್​ಗೆ 2017ರಲ್ಲೇ ನೋಟಿಸ್​ ನೀಡಲಾಗಿತ್ತು. ಆದರೆ, ಬಿಎಂಸಿ ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಈಗ ರಸ್ತೆ ಅಗಲೀಕರಣಕ್ಕೆ ಬಿಎಂಸಿ ಮುಂದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

‘ಅಮಿತಾಭ್​ಗೆ 2017ರಲ್ಲೇ ನೋಟಿಸ್​ ನೀಡಲಾಗಿತ್ತು. ಆದರೆ, ರಸ್ತೆ ಅಗಲೀಕರಣ ಕಾರ್ಯ ನಡೆದಿರಲಿಲ್ಲ. ಹೀಗಾಗಿ, ಬಿಎಂಸಿಗೆ ನಾನು ಪತ್ರ ಬರೆದು ಈ ಬಗ್ಗೆ ಉತ್ತರಿಸುವಂತೆ ಕೇಳಿದ್ದೆ. ಅಮಿತಾಭ್​ ಮನೆ ಇದೆ ಎನ್ನುವ ಕಾರಣಕ್ಕೆ ಈ ಪ್ರಾಜೆಕ್ಟ್​ ನಿಲ್ಲಿಸಲಾಗಿತ್ತು’ ಎಂದು ಅಡ್ವೋಕೆಟ್​ ಒಬ್ಬರು ದೂರಿದ್ದಾರೆ. ಇದಾದ ನಂತರದಲ್ಲಿ ಬಿಎಂಸಿ ಎಚ್ಚೆತ್ತುಕೊಂಡಿದೆ.

ಅಮಿತಾಭ್​ ಜತೆಗೆ ರಾಜ್​ಕುಮಾರ್​ ಹಿರಾನಿ, ಪಂಕಜ್​ ಬಾಲಾಜಿ ಸೇರಿ ಸಾಕಷ್ಟು ಸೆಲೆಬ್ರಿಟಿಗಳಿಗೆ ನೋಟಿಸ್​ ಜಾರಿ ಆಗಿತ್ತು ಎನ್ನಲಾಗಿದೆ. ಈಗ ಅವರುಗಳಿಗೂ ಎರಡನೇ ನೋಟಿಸ್​ ನೀಡಲಾಗಿದೆ. ಶೀಘ್ರವೇ ಇವರ ಮನೆಯ ಒಂದು ಭಾಗ ರಸ್ತೆ ಅಗಲೀಕರಣ ಕಾರ್ಯಕ್ಕೆ ಬಳಕೆ ಆಗುವ ಸಾಧ್ಯತೆ ದಟ್ಟವಾಗಿದೆ.

ಇತ್ತೀಚೆಗೆ ಅಮಿತಾಭ್​ ಹಾಗೂ ಆರ್​ಜಿವಿ ಕಾಂಬಿನೇಷನ್​ನಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ‘ನಿಶಬ್ದ’, ‘ರಾಮ್​ ಗೋಪಾಲ್​ ವರ್ಮ ಕಿ ಆಗ್’​, ‘ಸರ್ಕಾರ್’, ‘ಸರ್ಕಾರ್​ 2’ ಮತ್ತು ‘ಸರ್ಕಾರ್​ 3’ ಚಿತ್ರಗಳಲ್ಲಿ ಆರ್​ಜಿವಿ ಹಾಗೂ ಅಮಿತಾಭ್ ಒಟ್ಟಾಗಿ ಕೆಲಸ ಮಾಡಿದ್ದರು. ಸರ್ಕಾರ್​ 3 ಸಿನಿಮಾ 2017ರಲ್ಲಿ ತೆರೆಗೆ ಬಂದಿತ್ತು. ಇದಾದ ನಂತರ ಇಬ್ಬರೂ ಮತ್ತೆ ಒಟ್ಟಾಗಿ ಕೆಲಸ ಮಾಡಿಲ್ಲ. ಈಗ, ಅಮಿತಾಭ್​ ಹಾಗೂ ಆರ್​ಜಿವಿ​ ಮತ್ತೆ ಒಂದಾಗುತ್ತಿದ್ದಾರಂತೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ.

ಇದನ್ನೂ ಓದಿ: ಅಮಿತಾಭ್​ ಫ್ಲಾಪ್​ ಹೀರೋ ಎಂದು ನಾಯಕಿಯರು ದೂರ ಸರಿದಾಗ ಮುಂದೆ ಬಂದಿದ್ದು ಜಯಾ ಬಚ್ಚನ್​; ಅಲ್ಲಿಂದ ಶುರುವಾಯ್ತು ಪ್ರೇಮ ಕಹಾನಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್