
ಬಾಲಿವುಡ್‌ನ ‘ಶಹೆನ್‌ಶಾ’ ಅಮಿತಾಭ್ ಬಚ್ಚನ್‌ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ನಟನೆ ಮಾತ್ರವಲ್ಲದೆ, ಖಾಸಗಿ ಜೀವನ, ಅಭ್ಯಾಸಗಳು ಮತ್ತು ಕುಟುಂಬದ ಕುತೂಹಲಕಾರಿ ಕಥೆಗಳನ್ನು ತಿಳಿಯಲು ಜನ ಸದಾ ಕಾತುರರಾಗಿರುತ್ತಾರೆ. ಬಿಗ್ ಬಿ ಮತ್ತು ಅವರ ಮಗ ಅಭಿಷೇಕ್ ಬಚ್ಚನ್ ತಂದೆ-ಮಗನಿಗಿಂತ ಹೆಚ್ಚಾಗಿ ಉತ್ತಮ ಸ್ನೇಹಿತರಂತೆ ಇರುತ್ತಾರೆ. ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್‌ಪತಿ’ (KBC) ಕಾರ್ಯಕ್ರಮದಲ್ಲಿ ಅಮಿತಾಬ್, ಅಭಿಷೇಕ್ ಕುರಿತಾದ ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕೆಬಿಸಿ ಶೋನಲ್ಲಿ ಸ್ಪರ್ಧಿಯೊಬ್ಬರು ತಂದೆ-ಮಗನ ಆತ್ಮೀಯ ಸಂಬಂಧದ ಬಗ್ಗೆ ಮಾತನಾಡಿದರು. ಇದಕ್ಕೆ ಸ್ಪಂದಿಸಿದ ಅಮಿತಾಭ್, ಅಭಿಷೇಕ್ ನನ್ನ ಒಳ್ಳೆಯ ಸ್ನೇಹಿತ ಎಂದರು. ಇದೇ ವೇಳೆ ಮಗನ ವಿಚಿತ್ರ ಅಭ್ಯಾಸವೊಂದನ್ನು ತಮಾಷೆಯಾಗಿ ಬಹಿರಂಗಪಡಿಸಿದರು. ಮನೆಯಲ್ಲಿ ಎಲ್ಲರೂ ಹಣ್ಣುಗಳನ್ನು ತಿನ್ನುತ್ತಾರೆ, ಆದರೆ ಅಭಿಷೇಕ್ ಮಾತ್ರ ಎಂದಿಗೂ ಹಣ್ಣುಗಳನ್ನು ತಿನ್ನುವುದಿಲ್ಲ ಎಂದು ಬಿಗ್ ಬಿ ದೂರಿಕೊಂಡರು.
ಇನ್ನು ಹಾಲಿನ ಉತ್ಪನ್ನಗಳ ವಿಷಯ ಬಂದಾಗಲೂ ಅಭಿಷೇಕ್ ಅಷ್ಟಾಗಿ ಆಸಕ್ತಿ ತೋರಿಸುವುದಿಲ್ಲ. ಆದರೆ ಹಣ್ಣುಗಳ ವಿಷಯದಲ್ಲಂತೂ ಅವರು ಸಂಪೂರ್ಣ ದೂರ ಉಳಿಯುತ್ತಾರೆ ಎಂದು ಅಮಿತಾಭ್ ಹೇಳಿದರು. ತಂದೆಯ ಈ ತಮಾಷೆಯ ಮಾತನ್ನು ಕೇಳಿ ಶೋನಲ್ಲಿದ್ದ ಪ್ರೇಕ್ಷಕರು ನಕ್ಕು ನಲಿದರು.
ಕಾರ್ಯಕ್ರಮದಲ್ಲಿ ಮೋಜಿನ ಸಂಭಾಷಣೆಯ ಜೊತೆಗೆ ಕೊಂಚ ಭಾವನಾತ್ಮಕ ಕ್ಷಣಗಳೂ ಎದುರಾದವು. ಅಮಿತಾಬ್ ತಮ್ಮ ತಂದೆ, ಹಿರಿಯ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಕವಿತೆಯನ್ನು ನೆನಪಿಸಿಕೊಂಡರು. ತಂದೆ-ಮಗನ ಬಾಂಧವ್ಯ ಮತ್ತು ಪೀಳಿಗೆಯಿಂದ ಪೀಳಿಗೆಗೆ ಸಾಗುವ ಚಿಂತನೆಗಳ ಕುರಿತಾದ ಈ ಕವಿತೆ ಪ್ರೇಕ್ಷಕರ ಮನ ಮುಟ್ಟಿತು.
ಇದನ್ನೂ ಓದಿ: ಧರ್ಮೇಂದ್ರ ಮನೆಗೆ ಯಾರು ಬೇಕಾದರೂ ಬರಬಹುದಿತ್ತು; ಅಮಿತಾಭ್ ನೆನಪು
ಇದೇ ವೇಳೆ ಅಮಿತಾಭ್ ತಮ್ಮ ಹಳೆಯ ಕನಸೊಂದನ್ನು ಬಿಚ್ಚಿಟ್ಟರು. ತಮಗೆ ‘ಐಎಫ್‌ಎಸ್’ ಸೇರಿ ಭಾರತೀಯ ವಿದೇಶಾಂಗ ಸೇವೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳುವ ಆಸೆಯಿತ್ತು ಎಂದರು. ಆದರೆ ಆ ಸಮಯದಲ್ಲಿ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಆ ಆಲೋಚನೆಯನ್ನು ಬಿಟ್ಟುಕೊಟ್ಟಿದ್ದಾಗಿ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.