ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳಿ ದುಬಾರಿ ಜ್ಯುವೆಲರಿ ನೀಡಿದ ಅಮಿತಾಭ್ ಬಚ್ಚನ್

ಅಮಿತಾಭ್ ಬಚ್ಚನ್ ಅವರು ಜ್ಯುವೆಲರಿ ಶಾಪ್ ಒಂದರ ಓಪನಿಂಗ್​ಗೆ ಅಯೋಧ್ಯೆಗೆ ಆಗಮಿಸಿದ್ದರು. ಈ ವೇಳೆ ಅವರು ರಾಮ ಮಂದಿರಕ್ಕೆ ತೆರಳಿದ್ದಾರೆ. ಅವರು ರಾಮ ಮಂದಿರಕ್ಕೆ ಬರುವಾಗ ಬಿಗಿ ಭದ್ರತಯೊಂದಿಗೆ ಆಗಮಿಸಿದ್ದಾರೆ. ಕುರ್ತಾ-ಪೈಜಾಮ ಧರಿಸಿ ಅವರು ಗಮನ ಸೆಳೆದಿದ್ದಾರೆ.  ಈ ಫೋಟೋ ವೈರಲ್ ಆಗಿದೆ.

ಅಯೋಧ್ಯೆಯ ರಾಮ ಮಂದಿರಕ್ಕೆ ತೆರಳಿ ದುಬಾರಿ ಜ್ಯುವೆಲರಿ ನೀಡಿದ ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್

Updated on: Feb 10, 2024 | 11:07 AM

ಅಮಿತಾಭ್ ಬಚ್ಚನ್ (Amitabh Bachchan) ಅವರು ಫೆಬ್ರವರಿ 9ರಂದು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಾಮ ಮಂದಿರಕ್ಕೆ ತೆರಳಿ ಅವರು ಪೂಜೆ ಸಲ್ಲಿಕೆ ಮಾದಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಜನವರಿ 22ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ಈ ವೇಳೆ ಅಮಿತಾಭ್ ಅವರು ಅಲ್ಲಿಗೆ ತೆರಳಿದ್ದರು. ಕೆಲವೇ ದಿನಗಳಲ್ಲಿ ಅವರು ಮತ್ತೊಮ್ಮೆ ಅಯೋಧ್ಯೆಗೆ ಆಗಮಿಸಿದ್ದಾರೆ. ಈ ವೇಳೆ ಅವರು ಕೃಷ್ಣನಿಗೆ ಜ್ಯುವೆಲರಿಗಳನ್ನು ದೇಣಿಗೆ ನೀಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಅಮಿತಾಭ್ ಬಚ್ಚನ್ ಅವರು ರಾಮ ಮಂದಿರಕ್ಕೆ ಬರುವಾಗ ಸಾಕಷ್ಟು ಭದ್ರತೆಗಳೊಂದಿಗೆ ಆಗಮಿಸಿದ್ದಾರೆ. ಕುರ್ತಾ-ಪೈಜಾಮ ಧರಿಸಿ ಅವರು ಗಮನ ಸೆಳೆದಿದ್ದಾರೆ. ಕೇಸರಿ ಬಣ್ಣದ ಶಾಲನ್ನು ಕುತ್ತಿಗೆಗೆ ಹಾಕಿಕೊಂಡಿದ್ದರು. ದೇವಸ್ಥಾನದಲ್ಲಿ ಅವರು ಕೈ ಮುಗಿದು ನಿಂತಿದ್ದಾರೆ. ಅವರು ಜ್ಯುವೆಲರಿ ಶಾಪ್ ಒಂದರ ಓಪನಿಂಗ್​ಗೆ ಅಯೋಧ್ಯೆಗೆ ಆಗಮಿಸಿದ್ದರು. ಈ ವೇಳೆ ಅವರು ರಾಮ ಮಂದಿರಕ್ಕೆ ತೆರಳಿದ್ದಾರೆ. ಈ ವೇಳೆ ಚಿನ್ನದ ಸರವನ್ನು ಅವರು ನೀಡಿದ್ದಾರೆ ಎನ್ನಲಾಗಿದೆ.

ರಾಮ ಮಂದಿರದಲ್ಲಿ ಅಮಿತಾಭ್ ಬಚ್ಚನ್

ಗುರುವಾರ ಮಧ್ಯಾಹ್ನದ ವೇಳೆಗೆ ರಾಮ ಮಂದಿರಕ್ಕೆ ಭೇಟಿ ನೀಡಿದರು ಅಮಿತಾಭ್. ಸುಮಾರು ಅರ್ಧಗಂಟೆ ಅವರು ಅಲ್ಲಿಯೇ ಇದ್ದರು. ಆ ಬಳಿಕ ಅಯೋಧ್ಯೆಯ ಅಧಿಕಾರಗಳ ಜೊತೆ ಮಧ್ಯಾಹ್ನದ ಭೋಜನ ಮಾಡಿದ್ದಾರೆ. ಅಯೋಧ್ಯೆಯ ಕಮಿಷನರ್ ಗೌರವ್ ದಯಾಳ್ ಮನೆಯಲ್ಲಿ ಈ ಭೋಜನಕೂಟ ನಡೆದಿದೆ.

ಇದನ್ನೂ ಓದಿ: ಎರಡನೇ ಬಾರಿ ಅಯೋಧ್ಯೆಗೆ ಭೇಟಿ ನೀಡಿದ ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ 

ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್, ಮಾಧುರಿ ದೀಕ್ಷಿತ್, ಚಿರಂಜೀವಿ, ರೋಹಿತ್ ಶೆಟ್ಟಿ, ರಿಷಬ್ ಶೆಟ್ಟಿ, ವಿಕ್ಕಿ ಕೌಶಲ್, ಕತ್ರಿನಾ ಕೈಫ್, ರಣಬೀರ್ ಕಪೂರ್ ಮೊದಲಾದವರು ಭಾಗಿ ಆಗಿದ್ದರು. ಎಲ್ಲರೂ ದೇವರ ದರ್ಶನ ಪಡೆದಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ 10,000 ಚದರ ಅಡಿಯ ಭೂಮಿ ಖರೀದಿ ಮಾಡಿದ್ದಾರೆ. ಇದರ ಬೆಲೆ 14.5 ಕೋಟಿ ರೂಪಾಯಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 11:03 am, Sat, 10 February 24