ಲಾಕ್​ಡೌನ್​ ಜಾರಿ ಆದಾಗಿನಿಂದಲೂ ಐಸಿಯುನಲ್ಲೇ ಇದ್ದ ಖ್ಯಾತ ಕಿರುತೆರೆ ನಟ

| Updated By: Digi Tech Desk

Updated on: Jun 07, 2021 | 4:36 PM

Anirudh Dave: ಇಷ್ಟು ಬೇಗ ಗುಣಮುಖರಾಗಲು ಅಭಿಮಾನಿಗಳ ಹಾರೈಕೆಯೇ ಕಾರಣ ಎಂದು ಅನಿರುದ್ಧ್​ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಎಲ್ಲಾ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಲಾಕ್​ಡೌನ್​ ಜಾರಿ ಆದಾಗಿನಿಂದಲೂ ಐಸಿಯುನಲ್ಲೇ ಇದ್ದ ಖ್ಯಾತ ಕಿರುತೆರೆ ನಟ
ಅನಿರುದ್ಧ್​ ದವೆ
Follow us on

ಕೊವಿಡ್​ ಸಾಕಷ್ಟು ತೊಂದರೆಗಳನ್ನು ಉಂಟು ಮಾಡಿದೆ. ಚಿತ್ರರಂಗದ ಅನೇಕರು ಕೊವಿಡ್​ನಿಂದ ಮೃತಪಟ್ಟಿದ್ದಾರೆ. ಹಿಂದಿಯ ಖ್ಯಾತ ಕಿರುತೆರೆ ನಟ ಅನಿರುದ್ಧ್​ ದವೆ ಕೂಡ ಕಳೆದ 36 ದಿನಗಳಿಂದ ಕೊವಿಡ್​ ವಿರುದ್ಧ ಹೋರಾಡುತ್ತಿದ್ದಾರೆ. ಈ ಬಗ್ಗೆ ಅವರು ಟ್ವಿಟರ್​ನಲ್ಲಿ ತಿಳಿಸಿದ್ದು, ಈಗ ತಮ್ಮ ಆರೋಗ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸಿದ್ದಾರೆ.

ಅನಿರುದ್ಧ್​ ದವೆ ಅವರಿಗೆ 36 ದಿನಗಳ ಹಿಂದೆ ಕೊವಿಡ್​ ಪಾಸಿಟಿವ್​ ಆಗಿತ್ತು. ಹೀಗಾಗಿ, ಅವರು ಮನೆಯಲ್ಲೇ ಕ್ವಾರಂಟೈನ್​ ಆದರು. ಆದರೆ, ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಅವರನ್ನು ಐಸಿಯುಗೆ ಶಿಫ್ಟ್​ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಅವರು ಐಸಿಯುನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದ್ದು, ಐಸಿಯುನಿಂದ ಹೊರ ಬಂದಿದ್ದಾರೆ. ಅಲ್ಲದೆ, ಅಭಿಮಾನಿಗಳಿಗೆ ಅವರು ಧನ್ಯವಾದ ತಿಳಿಸಿದ್ದಾರೆ.

ಅನಿರುದ್ಧ್​​ ಹಾಕಿರುವ ಫೋಟೋದಲ್ಲಿ ಆಕ್ಸಿಜನ್​ ಮಾಸ್ಕ್​ ಹಾಕಿರುವುದು ಕಂಡು ಬಂದಿದೆ. ಅವರಿಗೆ ಕೊವಿಡ್ ಜತೆಗೆ ಶ್ವಾಸಕೋಶದ ಇನ್​ಫೆಕ್ಷನ್​ ಆಗಿತ್ತಂತೆ. ಈಗ ಎಲ್ಲವೂ ನಿಧಾನ ಗತಿಯಲ್ಲಿ ಕಡಿಮೆ ಆಗುತ್ತಿದೆ. ಹೆಚ್ಚು ಮಾತನಾಡದಂತೆ ವೈದ್ಯರು ಸೂಚನೆ ನೀಡಿದ್ದಾರೆ.

ಇನ್ನು, ಇಷ್ಟು ಬೇಗ ಗುಣಮುಖರಾಗಲು ಅಭಿಮಾನಿಗಳ ಹಾರೈಕೆಯೇ ಕಾರಣ ಎಂದು ಅನಿರುದ್ಧ್​ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಎಲ್ಲಾ ಅಭಿಮಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಪತ್ನಿ ಸುರಭಿ ಅಹೂಜಾ ಅವರ ಜನ್ಮದಿನದಂದು ಅನಿರುದ್ಧ್ ಪೋಸ್ಟ್​ ಒಂದನ್ನು ಮಾಡಿದ್ದರು. ಈ ಪೋಸ್ಟ್​ನಲ್ಲಿ ಅವರು ಸುರಭಿಗೆ ಬರ್ತ್​ಡೇ ವಿಶ್ ಮಾಡಿದ್ದರು. ಅಲ್ಲದೆ, ಈ ಸಂದರ್ಭದಲ್ಲಿ ಅವರು ತುಂಬಾನೇ ಸ್ಟ್ರಾಂಗ್​ ಆಗಿ ನಿಂತಿದ್ದಕ್ಕೆ ಧನ್ಯವಾದ ಅರ್ಪಿಸಿದ್ದರು.

ಇದನ್ನೂ ಓದಿ: ಸೈಫ್​ ಪುತ್ರಿಯ ಗಾಂಜಾ ಪುರಾಣ ಬಯಲು ಮಾಡಿದ ರಿಯಾ ಚಕ್ರವರ್ತಿ; ಎನ್​ಸಿಬಿ ಮುಂದೆ ಶಾಕಿಂಗ್​ ಹೇಳಿಕೆ

Published On - 4:35 pm, Mon, 7 June 21